AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ: ಮಗನೊಂದಿಗೆ ಊಟ ಮಾಡಲು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದಕ್ಕೆ ಪೋಷಕರ ಬಂಧನ

ಶಾಲೆಯ ಕೆಫೆಟೇರಿಯಾದಲ್ಲಿ ಮಗನೊಂದಿಗೆ ಊಟ ಮಾಡಲು ಹೋದ ಪೋಷಕರನ್ನು ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಪೋಷಕರನ್ನು ಸಭೆಗೆಂದು ಆಹ್ವಾನಿಸಿದ್ದರು, ಮಧ್ಯಾಹ್ನ ಊಟದ ಬಿಡುವಿನ ಸಮಯದಲ್ಲಿ ಮಗನ ಜತೆ ಊಟ ಮಾಡಬೇಕೆಂದು ಪೋಷಕರು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದರು ಅದನ್ನು ಅತಿಕ್ರಮ ಪ್ರವೇಶ ಎಂದು ಹೇಳಿ ಪೋಷಕರನ್ನು ಪೊಲೀಸರು ಬಂಧಿಸಿ ಕರೆದೊಯ್ದಿರುವ ವಿಚಿತ್ರ ಘಟನೆ ಇದಾಗಿದೆ.

ಅಮೆರಿಕ: ಮಗನೊಂದಿಗೆ ಊಟ ಮಾಡಲು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದಕ್ಕೆ ಪೋಷಕರ ಬಂಧನ
Image Credit source: NDTV
ನಯನಾ ರಾಜೀವ್
|

Updated on: Feb 09, 2024 | 8:56 AM

Share

ಸಾಮಾನ್ಯವಾಗಿ ಪೋಷಕರು ಶಾಲೆ(School)ಗಳಿಗೆ ಪೇರೆಂಟ್ಸ್-ಟೀಚರ್ ಮೀಟಿಂಗ್​ಗಳಿಗೆ ಹೋಗುತ್ತಾರೆ, ಆಗ ಮಕ್ಕಳೊಂದಿಗೆ ಕುಳಿತು ಊಟ ಮಾಡುವುದು ಸಾಮಾನ್ಯ. ಆದರೆ ಅಮೆರಿಕದ ಶಾಲೆಯಲ್ಲಿ ಮಗನ ಜತೆಗೆ ಊಟ ಮಾಡಲು ಕೆಫೆಟೇರಿಯಾಗೆ ಹೋಗಿದ್ದ ಪೋಷಕರನ್ನು ಬಂಧಿಸಿರುವ ಘಟನೆ ನಡೆದಿದೆ.

ನ್ಯೂಯಾರ್ಕ್​ ಪೋಸ್ಟ್​ ಪ್ರಕಾರ, ಕ್ಯಾಲಿಫೋರ್ನಿಯಾ ಏರಿಯಾ ಸ್ಕೂಲ್ ಡಿಸ್ಟ್ರಿಕ್ಟ್​ನಲ್ಲಿ ಈ ಘಟನೆ ವರದಿಯಾಗಿದೆ. ಅಂದು ಶಾಲೆಯಲ್ಲಿ ಪೋಷಕರಿಗೆ ಸಭೆ ಇತ್ತು, ಮಧ್ಯಾಹ್ನ ಸ್ವಲ್ಪ ಬಿಡುವಿತ್ತು ಪೋಷಕರು ಹೇಗೂ ಶಾಲೆಗೆ ಬಂದಿದ್ದೀವಲ್ಲ ಮಗನ ಜತೆಗೆ ಊಟ ಮಾಡೋಣವೆಂದು ಶಾಲೆಯ ಕೆಫೆಟೇರಿಯಾಗೆ ಹೋಗಿದ್ದಾರೆ ಬಳಿಕ ಆ ಪೋಷಕರನ್ನು ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ.

ಅಲ್ಲಿ ಪೋಷಕರಿಗೆ ಕೆಫೆಟೇರಿಯಾಗೆ ತೆರಳಲು ಅವಕಾಶವಿರುವುದಿಲ್ಲ, ಶಾಲಾ ಪ್ರಾಂಶುಪಾಲರು ಹಾಗೂ ಪೊಲೀಸರು ಅವರನ್ನು ಶಾಲೆಯ ಹೊರಗೆ ಕರೆದೊಯ್ದು ಕೈದಿಗಳಂತೆ ಕೋಳ ಹಾಕಿ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ.

ಮತ್ತಷ್ಟು ಓದಿ: ಈ ಶಾಲೆಯಲ್ಲಿರುವುದು ಓರ್ವ ವಿದ್ಯಾರ್ಥಿ, ಓರ್ವ ಶಿಕ್ಷಕಿ ಮಾತ್ರ ಹಾಗಾದ್ರೆ ಆ ಗ್ರಾಮದಲ್ಲಿ ಮಕ್ಕಳೇ ಇಲ್ಲವೇ?

ಪೋಷಕರ ಮೇಲೆ ಯಾವ ಆರೋಪವಿದೆ ಎಂದು ಅವರು ಹೇಳಿಲ್ಲ, ಘಟನೆಯನ್ನು ಭದ್ರತೆ ಉಲ್ಲಂಘನೆ ಎಂದು ಕರೆದಿದ್ದಾರೆ. ಪೋಷಕರು ಹಾಗೆ ಶಾಲೆಯ ಎಲ್ಲೆಂದರಲ್ಲಿ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದ್ದು, ಇಂಟರ್​ನೆಟ್ ಬಳಕೆದಾರರು ಇದನ್ನು ಹಾಸ್ಯಾಸ್ಪದ ಎಂದು ಕರೆದಿದ್ದಾರೆ.

ಈ ಪ್ರಾಂಶುಪಾಲರನ್ನು ವಜಾ ಮಾಡಬೇಕು, ಮಗುವಿನೊಂದಿಗೆ ಊಟ ಮಾಡುವುದು ತಪ್ಪೇ, ಈ ಶಾಲೆಯಲ್ಲಿ ಅದೆಂಥಾ ನಿಯಮ ಎಂದು ಮತ್ತೊಬ್ಬರು ಕೇಳಿದ್ದಾರೆ. ಮತ್ತೊಬ್ಬರು ನನ್ನ ಸಹೋದರಿ ಹೈಸ್ಕೂಲ್​ನಲ್ಲಿ ಓದುತ್ತಿದ್ದಾಳೆ, ಆದರೆ ಎಂದಿಗೂ ನನಗೆ ಇಂಥಹ ಅನುಭವವಾಗಿಲ್ಲ, ಈ ನಿಯಮ ಯಾವ ಶಾಲೆಗಳಲ್ಲೂ ಇಲ್ಲ ಎಂದಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ