ಅಮೆರಿಕ: ಶ್ವೇತಭವನದ ಗೇಟ್​ಗೆ ಡಿಕ್ಕಿ ಹೊಡೆದ ಕಾರು, ಚಾಲಕನ ಬಂಧನ

|

Updated on: Jan 09, 2024 | 8:09 AM

ಅಮೆರಿಕದ ಶ್ವೇತಭವನ(White House) ದ ಗೇಟ್​ಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ, ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಯುಎಸ್ ಸೀಕ್ರೆಟ್ ಸರ್ವಿಸ್ ಚೀಫ್ ಆಫ್ ಕಮ್ಯುನಿಕೇಷನ್ಸ್ ಆಂಥೋನಿ ಗುಗ್ಲಿಲ್ಮಿ ಹೇಳಿದ್ದಾರೆ.

ಅಮೆರಿಕ: ಶ್ವೇತಭವನದ ಗೇಟ್​ಗೆ ಡಿಕ್ಕಿ ಹೊಡೆದ ಕಾರು, ಚಾಲಕನ ಬಂಧನ
ಕಾರು
Image Credit source: India Today
Follow us on

ಅಮೆರಿಕದ ಶ್ವೇತಭವನ(White House) ದ ಗೇಟ್​ಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ, ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಯುಎಸ್ ಸೀಕ್ರೆಟ್ ಸರ್ವಿಸ್ ಚೀಫ್ ಆಫ್ ಕಮ್ಯುನಿಕೇಷನ್ಸ್ ಆಂಥೋನಿ ಗುಗ್ಲಿಲ್ಮಿ ಹೇಳಿದ್ದಾರೆ.

ಘಟನೆಯ ಕುರಿತು ಶ್ವೇತಭವನವು ತಕ್ಷಣವೇ ಪ್ರತಿಕ್ರಿಯಿಸಲಿಲ್ಲ. ಸ್ವಲ್ಪ ದಿನದ ಹಿಂದೆ ಡೆಲವೇರ್ ವ್ಯಕ್ತಿಯೊಬ್ಬರು ಅಮೇರಿಕ ಅಧ್ಯಕ್ಷ ಜೋ ಬೈಡನ್ ಅವರ ವಾಹನಕ್ಕೆ ಆಕಸ್ಮಿಕವಾಗಿ ತನ್ನ ವಾಹನವನ್ನು ಡಿಕ್ಕಿ ಹೊಡೆದಿದ್ದರು, ನಂತರ ಕುಡಿದು ವಾಹನ ಚಲಾಯಿಸಿದ ಆರೋಪ ಹೊರಿಸಲಾಯಿತು.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಮೊಮ್ಮಗಳು ನವೋಮಿ ಬೈಡನ್ ಅವರಿದ್ದ ಕಾರಿನ ಮೇಲೆ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳೇ ಗುಂಡು ಹಾರಿಸಿದ್ದ ಘಟನೆಯೂ ನಡೆದಿತ್ತು. ನವೋಮಿ ಇದ್ದ ಕಾರಿನ ಗಾಜನ್ನು ಒಡೆಯಲು ಮೂವರು ಯತ್ನಿಸುತ್ತಿದ್ದರಿಂದ ಆಕೆಯನ್ನು ರಕ್ಷಿಸುವ ಸಲುವಾಗಿ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸೀಕ್ರೆಟ್ ಸರ್ವಿಸ್ ಹೇಳಿಕೆಯಲ್ಲಿ ತಿಳಿಸಿದೆ. ಇದಾದ ನಂತರ ಮೂವರು ಕೆಂಪು ಕಾರಿನಲ್ಲಿ ಓಡಿ ಹೋಗುತ್ತಿರುವುದು ಕಂಡು ಬಂದಿತ್ತು.

ಮತ್ತಷ್ಟು ಓದಿ: ಅಮೆರಿಕದ ವೈಟ್​ಹೌಸ್​ ಬಳಿ ತಡೆಗೋಡೆಗೆ ಟ್ರಕ್​ ಡಿಕ್ಕಿ, ಪತ್ತೆಯಾಯ್ತು ನಾಜಿ ಫ್ಲ್ಯಾಗ್, ಜೋ ಬೈಡನ್​ ಹತ್ಯೆಗೆ ಸಂಚು ನಡೆದಿತ್ತಾ?

ಕಳೆದ ವರ್ಷ ಮೇ ತಿಂಗಳಿನಲ್ಲಿ ಅಮೆರಿಕದ ಶ್ವೇತಭವನದ ಮೈದಾನದ ಪಕ್ಕದಲ್ಲಿರುವ ಭದ್ರತಾ ತಡೆಗೋಡೆಗಳಿಗೆ ಟ್ರಕ್​ ಒಂದು ಡಿಕ್ಕಿ ಹೊಡೆದಿದ್ದು, ಚಾಲಕನನ್ನು ಬಂಧಿಸಲಾಗಿತ್ತು. ಟ್ರಕ್​ನಲ್ಲಿ ನಾಜಿಯ ಫ್ಲ್ಯಾಗ್​ ಕಂಡುಬಂದಿತ್ತು. ಟ್ರಕ್​ನಲ್ಲಿ ಸ್ವಸ್ತಿಕ್ ಚಿಹ್ನೆಯ ಬಾವುಟವೊಂದು ಪತ್ತೆಯಾಗಿದೆ, ಎರಡು ಬಾರಿ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದ.

ಥಮಿಕ ತನಿಖೆಯಲ್ಲಿ ಉದ್ದೇಶಪೂರ್ವಕವಾಗಿಯೇ ತಡೆಗೋಡೆಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್(Joe Biden) ​ನನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ ಎನ್ನುವ ಆರೋಪ ಹೊರಿಸಲಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ