ಮಾಲ್ಡೀವ್ಸ್‌ನ ಕರಾಳ ಮುಖ: ದ್ವೀಪದಲ್ಲಿ ಪ್ರವಾಸಿಗರು ಅನುಭವಿಸಿದ ನೋವಿನ ಕತೆಗಳು
ಮಾರ್ಚ್ 2023ರಲ್ಲಿ, ಇಬ್ಬರು ಬ್ರಿಟಿಷ್ ಪುರುಷರು ಮಾಲ್ಡೀವ್ಸ್‌ನ ದ್ವೀಪ ದಲ್ಲಿ ಮುಳುಗಿ ಸಾವಿಗೀಡಾಗಿದ್ದರು. 46 ಮತ್ತು 65 ವರ್ಷ ವಯಸ್ಸಿನ ಈ ಪ್ರವಾಸಿಗರು ಹಿಂದೂ ಮಹಾಸಾಗರದ ಸುಂದರವಾದ ಅಟಾಲ್ ಬಳಿ ಎರಡು ವಿಭಿನ್ನ ಘಟನೆಗಳಲ್ಲಿ ಮುಳುಗಿ ಸಾವಿಗೀಡಾಗಿದ್ದರು. ರಕ್ಷಣಾ ಪ್ರಯತ್ನಗಳ ಹೊರತಾಗಿಯೂ, ಇಬ್ಬರನ್ನೂ ಬದುಕಿಸಲು ಸಾಧ್ಯವಾಗಲಿಲ್ಲ.
ದೆಹಲಿ ಜನವರಿ 08: ಮಾಲ್ಡೀವ್ಸ್ (Maldives) ಎಂದರೆ ಯಾವಾಗಲೂ ಕಡಲತೀರಗಳು ಮತ್ತು ಮನಸೂರೆಗೊಳ್ಳುವ ಸಾಗರದ ನೋಟಗಳಲ್ಲ. ಸಂಪೂರ್ಣವಾಗಿ ದ್ವೀಪಗಳ ದೇಶವಾದ ಮಾಲ್ಡೀವ್ಸ್‌ನಲ್ಲಿ ವಿಹಾರಕ್ಕೆ ಬಂದವರು, ಶಾರ್ಕ್ ದಾಳಿಗೆ (shark attacks) ಬಲಿಯಾಗುವುದರಿಂದ ಹಿಡಿದು ಲೈಂಗಿಕ ದೌರ್ಜನ್ಯದವರೆಗೆ (sexual assault) ಅನೇಕ ನೋವುಗಳನ್ನು ಅನುಭವಿಸಿದ್ದಾರೆ. ಜೂನ್ 2023 ರಲ್ಲಿ ಚೀನಾದ ಮಹಿಳೆಯೊಬ್ಬರು ಮಾಲ್ಡೀವ್ಸ್‌ನ ರಿಟ್ಜ್ ಕಾರ್ಲ್‌ಟನ್ ಐಷಾರಾಮಿ ರೆಸಾರ್ಟ್‌ನಲ್ಲಿ ತಂಗಿದ್ದಾಗ ಸಿಬ್ಬಂದಿಯೊಬ್ಬರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಆರೋಪಿಸಿದಾಗ ಆಡಳಿತ ಮತ್ತು ಪೊಲೀಸರು ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು!
ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ಮಂತ್ರಿಗಳ ಇತ್ತೀಚಿನ ಅವಹೇಳನಕಾರಿ ಹೇಳಿಕೆಗಳು ದೇಶದ ಕಟುವಾದ ವಾಸ್ತವವನ್ನು ಮುನ್ನೆಲೆಗೆ ತಂದಿದೆ. ಕಾಲಕಾಲಕ್ಕೆ, ಮಾಲ್ಡೀವ್ಸ್‌ನಲ್ಲಿ ಕೆಲವು ಸಂದರ್ಭಗಳಲ್ಲಿ ಪ್ರವಾಸಿಗರು ಲೈಂಗಿಕ ದೌರ್ಜನ್ಯ, ಕಿರುಕುಳ ಮತ್ತು ಸಾವಿಗೆ ಬಲಿಯಾಗುತ್ತಾರೆ.
ಐಷಾರಾಮಿ ರೆಸಾರ್ಟ್‌ನಲ್ಲಿ ಸಿಬ್ಬಂದಿಯಿಂದ ಚೀನಾ ಮಹಿಳೆ ಅತ್ಯಾಚಾರ
ಮಹಿಳೆ ತನ್ನ ಕುಟುಂಬವನ್ನು ಸಂಪರ್ಕಿಸಲು ಬಟ್ಲರ್‌ನ ಫೋನ್ ಬಳಸಿದ ನಂತರ ಆತ ತನ್ನ ಕೋಣೆಗೆ ಪ್ರವೇಶಿಸಿ ತನ್ನ ಮೇಲೆ ಅತ್ಯಾಚಾರವೆಸಗಿದ. ತನಗೆ ಸಂಭವಿಸಿದ ಭಯಾನಕತೆಯ ಬಗ್ಗೆ ರೆಸಾರ್ಟ್ ಆಡಳಿತ ಮತ್ತು ಮಾಲ್ಡೀವಿಯನ್ ಪೊಲೀಸರಿಗೆ ತಿಳಿಸಿದಾಗ ಅವರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಹಿಳೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಆರೋಪಿಸಿದ್ದರು.
I was then asked to leave the hotel at the earliest. And that it’s a case between police and Usham and nothing ti do with the hotel. And that they can no longer arrange my accommodation. I left the hotel and there wasn’t even an apology
— XuYitong (@YolyYitong) June 18, 2023
ಅತ್ಯಾಚಾರದ ನಂತರ ತನ್ನ ದೇಹದ ಮೇಲೆ ಆದರ ಗಾಯದ ಚಿತ್ರಗಳನ್ನೂ ಮಹಿಳೆ ಹಂಚಿಕೊಂಡಿದ್ದಾಳೆ. ಈ ಭೀಕರ ಘಟನೆಯ ಬಗ್ಗೆ ಮ್ಯಾನೇಜ್‌ಮೆಂಟ್‌ಗೆ ಮಾಡಿದ ಇಮೇಲ್ ಕೂಡಾ ಆ ಟ್ವೀಟ್ ನಲ್ಲಿತ್ತು. ಸಲಹೆ ಕೇಳಲು ನಿಮ್ಮ ಸಿಬ್ಬಂದಿಗೆ ಮಾತ್ರ ನೀವು ತರಬೇತಿ ನೀಡುತ್ತೀರಿ. @RitzCarlton ನಿಮ್ಮ ಹೋಟೆಲ್‌ನಲ್ಲಿ ನಾನು ಅತ್ಯಾಚಾರಕ್ಕೊಳಗಾಗಿದ್ದೇನೆ ಮತ್ತು ನೀವು ಏನನ್ನೂ ಮಾಡಿಲ್ಲ. ಉಚಿತ ವಾಸ್ತವ್ಯವನ್ನು ಪಡೆಯಲು ನಾನು ಇದನ್ನು ಮಾಡಿದ್ದೇನೆ ಎಂದು ನೀವು ನನಗೆ ಹೇಳಿದ್ದೀರಿ. ನಾನು ಹೋಟೆಲ್‌ಗೆ ಪೂರ್ಣ ಮೊತ್ತವನ್ನು ಪಾವತಿಸಿದೆ. ನಾನು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಚೈನೀಸ್, ನನ್ನ ಕುಟುಂಬವು ಪ್ರಸಿದ್ಧ ಮತ್ತು ಶ್ರೀಮಂತವಾಗಿದೆ ಎಂದು ಮಹಿಳೆ ತನ್ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಬ್ರಿಟಿಷ್ ಪ್ರವಾಸಿಗರು ಸಮುದ್ರದಲ್ಲಿ ಮುಳುಗಿ ಸಾವಿಗೀಡಾಗಿದ್ದರು
ಮಾರ್ಚ್ 2023ರಲ್ಲಿ, ಇಬ್ಬರು ಬ್ರಿಟಿಷ್ ಪುರುಷರು ಮಾಲ್ಡೀವ್ಸ್‌ನ ದ್ವೀಪ ದಲ್ಲಿ ಮುಳುಗಿ ಸಾವಿಗೀಡಾಗಿದ್ದರು. 46 ಮತ್ತು 65 ವರ್ಷ ವಯಸ್ಸಿನ ಈ ಪ್ರವಾಸಿಗರು ಹಿಂದೂ ಮಹಾಸಾಗರದ ಸುಂದರವಾದ ಅಟಾಲ್ ಬಳಿ ಎರಡು ವಿಭಿನ್ನ ಘಟನೆಗಳಲ್ಲಿ ಮುಳುಗಿ ಸಾವಿಗೀಡಾಗಿದ್ದರು. ರಕ್ಷಣಾ ಪ್ರಯತ್ನಗಳ ಹೊರತಾಗಿಯೂ, ಇಬ್ಬರನ್ನೂ ಬದುಕಿಸಲು ಸಾಧ್ಯವಾಗಲಿಲ್ಲ.
46 ವರ್ಷದ ವ್ಯಕ್ತಿ ರಾಸ್ಧೂ ಅಟಾಲ್ ತೀರದಲ್ಲಿರುವ ಹ್ಯಾಮರ್‌ಹೆಡ್ ಶಾರ್ಕ್ ಪಾಯಿಂಟ್‌ನಲ್ಲಿ ಡೈವ್ ಮಾಡುವಾಗ ಮುಳುಗಿ ಸಾವನ್ನಪ್ಪಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಅದೇ ದಿನ, 65 ವರ್ಷದ ವ್ಯಕ್ತಿ ಅದೇ ದ್ವೀಪದ ಕರಾವಳಿಯ ನೀರಿನಲ್ಲಿ ಮುಳುಗಿ ಸತ್ತರು. ಅಲಿಫ್ ಅಲಿಫ್ ಅಟಾಲ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಮಾಲ್ಡೀವ್ಸ್‌ನಲ್ಲಿ ಬಿಕಿನಿ ಧರಿಸಿದ್ದ ಮಹಿಳೆಯ ಬಂಧನ
ಫೆಬ್ರವರಿ 2020 ರಲ್ಲಿ, ಮಾಲ್ಡೀವ್ಸ್‌ನಲ್ಲಿ ಯುರೋಪಿಯನ್ ಮಹಿಳೆಯೊಬ್ಬರು ಬಿಕಿನಿ ಧರಿಸಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಕಾಫು ಅಟಾಲ್‌ನಲ್ಲಿರುವ ಮಾಫುಶಿ ದ್ವೀಪದಲ್ಲಿ ಮಾಲ್ಡೀವಿಯನ್ ಪೊಲೀಸರು ಬಂಧಿಸಿರುವ ಮಹಿಳೆಯೊಬ್ಬರು, ಬಿಕಿನಿ ಧರಿಸಿ ಮತ್ತು ಬ್ರಿಟಿಷ್ ಉಚ್ಚಾರಣೆಯೊಂದಿಗೆ ಮಾತನಾಡುತ್ತಿರುವ ದೃಶ್ಯಗಳು ವೈರಲ್ ಆಗಿತ್ತು.
Municipality level disputes are the job of this president 🤣🤣🤣🤣 https://t.co/0Yyj37MWAH
— Candid_Shweta (@CandidShweta) January 6, 2024
ವಿಡಿಯೊದಲ್ಲಿ, ಪೊಲೀಸರಿಂದ “ಲೈಂಗಿಕ ದೌರ್ಜನ್ಯ” ಎಂದು ಆರೋಪಿಸಿ ಮಹಿಳೆ ಪ್ರತಿಭಟಿಸುತ್ತಾಳೆ, ಆದರೆ ಪ್ರತಿರೋಧದ ನಡುವೆ ಅಧಿಕಾರಿಗಳು ಕೈಕೋಳ ಹಾಕಲು ಪ್ರಯತ್ನಿಸಿದರು. ಮತ್ತೊಬ್ಬ ವ್ಯಕ್ತಿಯು ಅವಳನ್ನು ಟವೆಲ್‌ನಿಂದ ಮುಚ್ಚಲು ಪ್ರಯತ್ನಿಸುತ್ತಾನೆ. ಆಮೇಲೆ ಆಕೆ ಬೀಚ್ ಪ್ರದೇಶದಿಂದ ದೂರ ಹೋಗುತ್ತಾಳೆ.
ಮಾಲ್ಡೀವ್ಸ್‌ನಲ್ಲಿ ಸ್ನಾರ್ಕೆಲಿಂಗ್ ಮಾಡುವಾಗ ಪ್ರವಾಸಿ ಸಾವು
ಸ್ನಾರ್ಕ್ಲಿಂಗ್ ಮಾಡುವಾಗ ಸಣ್ಣ ದೋಣಿಗೆ ಡಿಕ್ಕಿ ಹೊಡೆದು ಪೋಲಿಷ್ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡರು. ಮಾಲ್ಡೀವ್ಸ್ ಪೊಲೀಸ್ ಸೇವೆಯ (ಎಂಪಿಎಸ್) ವಕ್ತಾರರು ಈ ಘಟನೆಯು ಕಳೆದ ವರ್ಷ ಜನವರಿಯಲ್ಲಿ ಕಾಫು ಹವಳದ ತುಲುಸ್ಧೂ ದ್ವೀಪದಲ್ಲಿ ಸಂಭವಿಸಿದೆ ಎಂದು ಹೇಳಿದ್ದಾರೆ
52 ವರ್ಷದ ಪ್ರವಾಸಿಗರನ್ನು ತುಳುಸ್ಧೂ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು ಆದರೆ ಅಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಮಹಿಳೆ ಮೇಲೆ ಶಾರ್ಕ್ ದಾಳಿ
ಏಪ್ರಿಲ್ 2023 ರಲ್ಲಿ ಶಾರ್ಕ್ ದಾಳಿಯ ವಿಡಿಯೊ ವೈರಲ್ ಆಗಿತ್ತು. ಫ್ರೀ ಡ್ರೈವರ್ ಆಗಿರುವ ಮಹಿಳೆ, ಕಾರ್ಮೆನ್ ಕ್ಯಾನೋವಾಸ್ ಸೆರ್ವೆಲ್ಲೊ ಮಾಲ್ಡೀವ್ಸ್‌ನಲ್ಲಿ ರಜಾದಿನಗಳಲ್ಲಿದ್ದರು. ಅವರು ವಾವು ಅಟಾಲ್‌ನಲ್ಲಿ ಸ್ನಾರ್ಕೆಲಿಂಗ್ ಮತ್ತು ಫ್ರೀ ಡೈವಿಂಗ್‌ಗೆ ಹೋಗಿದ್ದರ. ತನ್ನ 45-ನಿಮಿಷದ ನೀರೊಳಗಿನ ಅನುಭವದ ಸಮಯದಲ್ಲಿ, ನರ್ಸ್ ಆಗಿರುವ ಸೆರ್ವೆಲ್ಲೊ ಅವರಿ ತನ್ನನ್ನು ಶಾರ್ಕ್‌ನಿಂದ ಪ್ರಚೋದನೆಯಿಲ್ಲದೆ ಸುತ್ತುವರೆದಿದೆ ಎಂಬುದು ಗೊತ್ತಾಯ್ತು. ಅಷ್ಟರಲ್ಲಿ ಶಾರ್ಕ್ ಆಕೆಯ ಎಡ ಭುಜಕ್ಕೆ ಕಚ್ಚಿದ್ದು, ಅಲ್ಲಿ ಆರು ಇಂಚು ಅಗಲದ ಗಾಯವಾಗಿತ್ತು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ