ಅಮೆರಿಕದ ವೈಟ್​ಹೌಸ್​ ಬಳಿ ತಡೆಗೋಡೆಗೆ ಟ್ರಕ್​ ಡಿಕ್ಕಿ, ಪತ್ತೆಯಾಯ್ತು ನಾಜಿ ಫ್ಲ್ಯಾಗ್, ಜೋ ಬೈಡನ್​ ಹತ್ಯೆಗೆ ಸಂಚು ನಡೆದಿತ್ತಾ?

|

Updated on: May 24, 2023 | 7:59 AM

ಅಮೆರಿಕದ ಶ್ವೇತಭವನದ ಮೈದಾನದ ಪಕ್ಕದಲ್ಲಿರುವ ಭದ್ರತಾ ತಡೆಗೋಡೆಗಳಿಗೆ ಟ್ರಕ್​ ಒಂದು ಡಿಕ್ಕಿ ಹೊಡೆದಿದ್ದು, ಚಾಲಕನನ್ನು ಬಂಧಿಸಲಾಗಿದೆ. ಟ್ರಕ್​ನಲ್ಲಿ ನಾಜಿಯ ಫ್ಲ್ಯಾಗ್​ ಕಂಡುಬಂದಿದೆ.

ಅಮೆರಿಕದ ವೈಟ್​ಹೌಸ್​ ಬಳಿ ತಡೆಗೋಡೆಗೆ ಟ್ರಕ್​ ಡಿಕ್ಕಿ, ಪತ್ತೆಯಾಯ್ತು ನಾಜಿ ಫ್ಲ್ಯಾಗ್, ಜೋ ಬೈಡನ್​ ಹತ್ಯೆಗೆ ಸಂಚು ನಡೆದಿತ್ತಾ?
ಟ್ರಕ್ ಅಪಘಾತ
Follow us on

ಅಮೆರಿಕದ ಶ್ವೇತಭವನದ ಮೈದಾನದ ಪಕ್ಕದಲ್ಲಿರುವ ಭದ್ರತಾ ತಡೆಗೋಡೆಗಳಿಗೆ ಟ್ರಕ್​ ಒಂದು ಡಿಕ್ಕಿ ಹೊಡೆದಿದ್ದು, ಚಾಲಕನನ್ನು ಬಂಧಿಸಲಾಗಿದೆ. ಟ್ರಕ್​ನಲ್ಲಿ ನಾಜಿಯ ಫ್ಲ್ಯಾಗ್​ ಕಂಡುಬಂದಿದೆ. ಟ್ರಕ್​ನಲ್ಲಿ ಸ್ವಸ್ತಿಕ್ ಚಿಹ್ನೆಯ ಬಾವುಟವೊಂದು ಪತ್ತೆಯಾಗಿದೆ, ಎರಡು ಬಾರಿ ತಡೆಗೋಡೆಗೆ ಚಾಲಕ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಉದ್ದೇಶಪೂರ್ವಕವಾಗಿಯೇ ತಡೆಗೋಡೆಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್(Joe Biden) ​ನನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ ಎನ್ನುವ ಆರೋಪ ಹೊರಿಸಲಾಗಿದೆ.

ವಾಹನದ ಚಾಲಕನನ್ನು ಮಿಸೌರಿಯ ಚೆಸ್ಟರ್‌ಫೀಲ್ಡ್‌ನ ಸಾಯಿ ವರ್ಷಿತ್ ಕಂದುಲಾ (19) ಎಂದು ಗುರುತಿಸಲಾಗಿದೆ. ಹತ್ತಿರದ ಹೋಟೆಲ್​ನಲ್ಲಿರುವ ಜನರನ್ನು ಅಪಘಾತದ ನಂತರ ಸ್ಥಳಾಂತರಿಸಲಾಯಿತು.

ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ, ಉದ್ಯಾನದ ಸುತ್ತಲಿನ ಕೆಲವು ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳನ್ನು ಮುಚ್ಚಲಾಗಿದೆ ತನಿಖೆ ಪ್ರಗತಿಯಲ್ಲಿದೆ.

ಮತ್ತಷ್ಟು ಓದಿ: Ukraine: ಕೊನೆಗೂ ಯುದ್ಧ ಭೂಮಿ ಉಕ್ರೇನ್​ಗೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, 500 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರ ಸಹಾಯ

ವಾಷಿಂಗ್ಟನ್‌ನಲ್ಲಿ ವಾಸಿಸುವ 25 ವರ್ಷದ ಪೈಲಟ್ ಝಬೋಜಿ, ಲಫಯೆಟ್ಟೆ ಸ್ಕ್ವೇರ್‌ನ ಹತ್ತಿರ ಜಾಗಿಂಗ್ ಮಾಡುತ್ತಿದ್ದಾಗ ಅಪಘಾತದ ಶಬ್ದ ಕೇಳಿದ್ದರು. ಬಳಿಕ ಅಪಘಾತವನ್ನು ತಮ್ಮ ಫೋನ್​ನಲ್ಲಿ ಸೆರೆಹಿಡಿದಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ