Ukraine: ಕೊನೆಗೂ ಯುದ್ಧ ಭೂಮಿ ಉಕ್ರೇನ್‌ಗೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, 500 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರ ಸಹಾಯ
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಉಕ್ರೇನ್‌ನ ಕೈವ್‌ಗೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿಗಳನ್ನು ಉಲ್ಲೇಖಿಸಿದೆ.
ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ಉಕ್ರೇನ್‌ನ (Ukraine) ಕೈವ್‌ಗೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿಗಳನ್ನು ಉಲ್ಲೇಖಿಸಿದೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಒಂದು ವರ್ಷದ ನಂತರ ಯುಎಸ್ ಅಧ್ಯಕ್ಷ ಜೋ ಬೈಡನ್ ಸೋಮವಾರ ಕೈವ್‌ಗೆ ಅಚ್ಚರಿಯ ಪ್ರವಾಸ ಮಾಡಿದರು ಎಂದು ಎಎಫ್‌ಪಿ ವರದಿ ಮಾಡಿದೆ.
ಜೋ ಬೈಡನ್ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಉಕ್ರೇನಿಯನ್ ರಾಜಧಾನಿಯಲ್ಲಿ ಭೇಟಿಯಾಗಿದ್ದು, ಸಂಘರ್ಷದ ಪ್ರಾರಂಭದ ನಂತರ ದೇಶಕ್ಕೆ ಅವರ ಮೊದಲ ಭೇಟಿ. ನಾವು ಉಕ್ರೇನ್‌ಗೆ 500 ಮಿಲಿಯನ್ ಸಹಾಯವನ್ನು ಘೋಷಿಸುತ್ತೇವೆ ಎಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇದು ಜಾವೆಲಿನ್‌ಗಳು, ಹೊವಿಟ್ಜರ್‌ಗಳು ಮತ್ತು ಫಿರಂಗಿ ಮದ್ದುಗುಂಡುಗಳನ್ನು ಒಳಗೊಂಡಿರುತ್ತದೆ. ನಂತರ, ರಷ್ಯಾವನ್ನು ಬೆಂಬಲಿಸಲು ಪ್ರಯತ್ನಿಸುತ್ತಿರುವ ಕಂಪನಿಗಳ ವಿರುದ್ಧ ನಾವು ಹೆಚ್ಚುವರಿ ನಿರ್ಬಂಧಗಳನ್ನು ಘೋಷಿಸುತ್ತೇವೆ ಎಂದು ಕೈವ್‌ನಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
US President Joe Biden lands in Ukraine’s Kyiv in a surprise visit, reports Kyiv Post
(file pic) pic.twitter.com/uSOJaucFdX
— ANI (@ANI) February 20, 2023
ಯುದ್ಧ ಪೀಡಿತ ಉಕ್ರೇನ್‌ಗೆ ಅಮೆರಿಕ ಅಧ್ಯಕ್ಷ ಬೈಡೆನ್ ಭೇಟಿ ನೀಡುವ ಮೂಲಕ ರಪ್ಯಾಕ್ಕೆ ತಿರುಗೇಟು ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಬೈಡೆನ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಕೀವ್ ನಗರದ ರಸ್ತೆಯಲ್ಲಿ ಓಡಾಡಿದ್ದಾರೆ. ಕೀವ್ ಭೇಟಿಯಿಂದ ಇದು ರಷ್ಯಾ ಅಧ್ಯಕ್ಷರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಮತ್ತೊಂದೆಡೆ ಮಾಸ್ಕೋಗೆ ಚೀನಾ ವಿದೇಶಾಂಗ ಕಾರ್ಯದರ್ಶಿ ಭೇಟಿ ನೀಡಿದ್ದಾರೆ.
ಸಮವಸ್ತ್ರ ಧರಿಸಿದ ಉಕ್ರೇನಿಯನ್ ಮಿಲಿಟರಿ ಅಧಿಕಾರಿಗಳು ದಾರಿಯೂದ್ದಕ್ಕೂ ಸಾಲಾಗಿ ನಿಂತಿದ್ದರು. ಬಿಡೆನ್ ಮತ್ತು ಝೆಲೆನ್ಸ್ಕಿ ರಷ್ಯಾ-ಉಕ್ರೇನಿಯನ್ ಯುದ್ಧದಲ್ಲಿ ಮಡಿದ ವೀರ ಸಮಾಧಿಯ ಮೇಲೆ ಹೂವುಗಳನ್ನು ಇಟ್ಟು ಗೌರವ ಸಲ್ಲಿಸಿದ್ದಾರೆ. ಐರೋಪ್ಯ ಒಕ್ಕೂಟವು ತನ್ನ ಉತ್ಪಾದನೆಯನ್ನು ವೇಗಗೊಳಿಸಲು ಮತ್ತು ಕೈವ್‌ನ ಹೋರಾಟಕ್ಕೆ ಸಹಾಯ ಮಾಡಲು ಹೆಚ್ಚು ಅಗತ್ಯವಿರುವ ಯುದ್ಧಸಾಮಗ್ರಿಗಳ ವಿತರಣೆಯನ್ನು ವೇಗಗೊಳಿಸಲು ಪ್ರಯತ್ನಿಸುತ್ತಿದೆ. ಐರೋಪ್ಯ ಒಕ್ಕೂಟವು ತನ್ನ ಉತ್ಪಾದನೆಯನ್ನು ವೇಗಗೊಳಿಸಲು ಮತ್ತು ಕೈವ್‌ನ ಹೋರಾಟಕ್ಕೆ ಸಹಾಯ ಮಾಡಲು ಹೆಚ್ಚು ಅಗತ್ಯವಿರುವ ಯುದ್ಧಸಾಮಗ್ರಿಗಳ ವಿತರಣೆಯನ್ನು ವೇಗಗೊಳಿಸಲು ಪ್ರಯತ್ನಿಸುತ್ತಿದೆ.
Published On - 3:49 pm, Mon, 20 February 23