AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್​​ಗೆ ಲಾಹೋರ್ ಹೈಕೋರ್ಟ್ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್​​ಗೆ ಲಾಹೋರ್ ಹೈಕೋರ್ಟ್ ಸೋಮವಾರ ಜಾಮೀನು ನೀಡಿದೆ. ಚುನಾವಣಾ ಆಯೋಗದ ಹೊರಗೆ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಖಾನ್​​ಗೆ ಜಾಮೀನು ನೀಡಲಾಗಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್​​ಗೆ ಲಾಹೋರ್ ಹೈಕೋರ್ಟ್ ಜಾಮೀನು
ಇಮ್ರಾನ್ ಖಾನ್
Follow us
ರಶ್ಮಿ ಕಲ್ಲಕಟ್ಟ
|

Updated on:Feb 20, 2023 | 10:16 PM

ಇಸ್ಲಾಮಾಬಾದ್: ಚುನಾವಣಾ ಆಯೋಗದ ಹೊರಗೆ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್​​ಗೆ(Imran Khan) ಲಾಹೋರ್ ಹೈಕೋರ್ಟ್ ಸೋಮವಾರ ರಕ್ಷಣಾತ್ಮಕ ಜಾಮೀನು (protective bail) ನೀಡಿದೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಮುಖ್ಯಸ್ಥರ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ತಮ್ಮ ನಾಯಕನಿಗೆ ಒಗ್ಗಟ್ಟು ಪ್ರದರ್ಶಿಸಲು ನ್ಯಾಯಾಲಯದ ಸಂಕೀರ್ಣದ ಹೊರಗೆ ಜಮಾಯಿಸಿದರು. ಖಾನ್ ಜಾಮೀನು ಅರ್ಜಿಯ ವಿಚಾರಣೆಗೂ ಮುನ್ನ ಲಾಹೋರ್ ಹೈಕೋರ್ಟ್‌ನ ಮುಖ್ಯ ದ್ವಾರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಕಳೆದ ವಾರ, ಈ ಪ್ರಕರಣದಲ್ಲಿ ಇಸ್ಲಾಮಾಬಾದ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಮಧ್ಯಂತರ ಜಾಮೀನು ವಿಸ್ತರಣೆಗೆ ಖಾನ್ ಮಾಡಿದ ಮನವಿಯನ್ನು ತಿರಸ್ಕರಿಸಿತು. ಪಾಕಿಸ್ತಾನದ ಮಾಜಿ ಪ್ರಧಾನಿ ಕಳೆದ ವರ್ಷದ ಗುಂಡಿನ ದಾಳಿಯಿಂದ ಚೇತರಿಸಿಕೊಂಡಿಲ್ಲ. ಹಾಗಾಗಿ ಖಾನ್ ಅವರಿಗೆ ಖುದ್ದಾಗಿ ಹಾಜರಾಗುವುದಕ್ಕೆ ಒಂದು ಬಾರಿ ವಿನಾಯಿತಿ ನೀಡುವಂತೆ ಖಾನ್ ಅವರ ವಕೀಲ ಬಾಬರ್ ಅವನ್ ನ್ಯಾಯಾಲಯವನ್ನು ಕೋರಿದ್ದರು.

ಕಳೆದ ವರ್ಷ ನವೆಂಬರ್‌ನಲ್ಲಿ, ಪಂಜಾಬ್‌ನ ವಜೀರಾಬಾದ್ ಪಟ್ಟಣದಲ್ಲಿ ನಡೆದ ರ್ಯಾಲಿಯಲ್ಲಿ ಖಾನ್ ಮೇಲೆ ಗುಂಡಿನ ದಾಳಿ ನಡೆದಿದ್ದು ಅವರಿಗೆ ಗಾಯಗಳಾಗಿತ್ತು.

ಇದನ್ನೂ ಓದಿUkraine: ಕೊನೆಗೂ ಯುದ್ಧ ಭೂಮಿ ಉಕ್ರೇನ್​ಗೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, 500 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರ ಸಹಾಯ

ನ್ಯಾಯಾಧೀಶ ರಾಜಾ ಜವಾದ್ ಅಬ್ಬಾಸ್ ನೇತೃತ್ವದ ಇಸ್ಲಾಮಾಬಾದ್‌ನಲ್ಲಿರುವ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು (ಎಟಿಸಿ) ಮಧ್ಯಂತರ ಜಾಮೀನು ವಿಸ್ತರಿಸಲು ಪಿಟಿಐ ಮುಖ್ಯಸ್ಥರ ಮನವಿಯನ್ನು ತಿರಸ್ಕರಿಸಿತು, ನ್ಯಾಯಾಲಯದ ಮುಂದೆ ಹಾಜರಾಗಲು ಸಾಕಷ್ಟು ಸಮಯವನ್ನು ನೀಡಲಾಗಿದೆ ಆದರೆ ಅವರು ಹಾಜರಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.ಸಾಮಾನ್ಯ ವ್ಯಕ್ತಿಗೆ ನೀಡದ ಯಾವುದೇ ಪರಿಹಾರವನ್ನು ಖಾನ್‌ನಂತಹ “ಪ್ರಬಲ ವ್ಯಕ್ತಿ” ಗೆ ನ್ಯಾಯಾಲಯ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದರು.

ಕಳೆದ ವರ್ಷ, ಪಕ್ಷದ ನಿಧಿಯ ವಿವರಗಳನ್ನು ಮರೆಮಾಚಿದ್ದಕ್ಕಾಗಿ 70 ವರ್ಷದ ನಾಯಕನನ್ನು ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಅನರ್ಹಗೊಳಿಸಿದ ನಂತರ ಇಮ್ರಾನ್ ಖಾನ್ ಅವರ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:43 pm, Mon, 20 February 23

ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ
VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು
VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು
ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ
ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ