ನವದೆಹಲಿ: ಎರಡು ದಿನಗಳ ಅಧಿಕೃತ ಭೇಟಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ಫ್ರಾನ್ಸ್ಗೆ (France) ತಲುಪಿದ್ದಾರೆ. ಅವರನ್ನು ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಎಲಿಜಬೆತ್ ಬೋರ್ನ್ ಸ್ವಾಗತಿಸಿದರು. ಪ್ಯಾರಿಸ್ ತಲುಪಿದ ಬೆನ್ನಲ್ಲೇ ಮೋದಿ ಅವರು, ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿಯಾದರು. ಇದೇ ವೇಳೆ, ‘ಭಾರತ್ ಮಾತಾ ಕಿ ಜೈ’ ಘೋಷಣೆ ಮುಗಿಲುಮುಟ್ಟಿತು.
ಭಾರತೀಯ ಸಮುದಾಯದವರ ಭೇಟಿ ವೇಳೆ ಮಹಿಳೆಯೊಬ್ಬರು ಪ್ರಧಾನಿ ಮೋದಿ ಅವರಿಗೆ ಹಾಡು ಹಾಡುವ ಮೂಲಕ ಸ್ವಾಗತ ಕೋರಿದರು. ಮೋದಿ ಅವರ ಭೇಟಿಯಿಂದ ಭಾರತೀಯ ಮೂಲದ ಜನರಲ್ಲಿ ಉತ್ಸಾಹ ಗರಿಗೆದರಿತು.
#WATCH | France: A woman of the Indian diaspora dedicates a song to PM Narendra Modi after he met them in Paris pic.twitter.com/hY4QpKjITO
— ANI (@ANI) July 13, 2023
ಪ್ಯಾರಿಸ್ನಲ್ಲಿರುವ ಭಾರತೀಯ ವಲಸಿಗರಿಂದ ಆತ್ಮೀಯ ಸ್ವಾಗತ ದೊರೆಯಿತು! ಪ್ರಪಂಚದಾದ್ಯಂತ, ನಮ್ಮ ಸಮುದಾಯದವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಶ್ರದ್ಧೆ ಮತ್ತು ಶ್ರಮಶೀಲ ಸ್ವಭಾವಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
A warm welcome by the Indian diaspora in Paris! Across the world, our diaspora has made a mark for themselves and are admired for their diligence and hardworking nature. pic.twitter.com/NtQCSmpCt3
— Narendra Modi (@narendramodi) July 13, 2023
ಭಾರತ-ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲೇ ಮೋದಿ ಅವರು ಫ್ರಾನ್ಸ್ಗೆ ಭೇಟಿ ನೀಡಿದ್ದಾರೆ. ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯ ಪ್ರಮುಖ ಅತಿಥಿಯಾಗಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ