ಕೆನಡಾದ ಎಂಟು ನಗರಗಳಿಂದ ಭಾರತ ವಿರೋಧಿ ಸಂಚು ರೂಪಿಸಲಾಗುತ್ತಿದೆ: ಗುಪ್ತಚರ ಮಾಹಿತಿ

|

Updated on: Oct 30, 2023 | 2:32 PM

ಕೆನಡಾದ ಕೆಲವು ನಗರಗಳಲ್ಲಿ ಭಾರತ ವಿರೋಧಿ ಪೋಸ್ಟರ್‌ಗಳನ್ನು ಹಾಕಲಾಗಿದೆ. ಭಯೋತ್ಪಾದಕರು ಮತ್ತು ಖಲಿಸ್ತಾನ್ ಬೆಂಬಲಿಗರು ಈ ನಗರಗಳಿಗೆ ಬಂದು ಹೋಗುತ್ತಿದ್ದಾರೆ ಎಂದು ಏಜೆನ್ಸಿಗಳು ಹೇಳಿವೆ. ಕೆಲವು ಧಾರ್ಮಿಕ ಸ್ಥಳಗಳ ವ್ಯವಸ್ಥಾಪನಾ ಸಮಿತಿಗಳು ಸಹ ಅವರಿಗೆ ಸಹಾಯ ಮಾಡುತ್ತಿವೆ. ಏಜೆನ್ಸಿಗಳು ಅಂತಹ ಗುರುದ್ವಾರ ವ್ಯವಸ್ಥಾಪಕರ ಪಟ್ಟಿಯನ್ನು ಸಹ ಸಿದ್ಧಪಡಿಸಿವೆ.

ಕೆನಡಾದ ಎಂಟು ನಗರಗಳಿಂದ ಭಾರತ ವಿರೋಧಿ ಸಂಚು ರೂಪಿಸಲಾಗುತ್ತಿದೆ: ಗುಪ್ತಚರ ಮಾಹಿತಿ
Follow us on

ಒಟ್ಟಾವಾ ಅಕ್ಟೋಬರ್ 30: ಪಂಜಾಬ್‌ನಲ್ಲಿ (Punjab) ಖಲಿಸ್ತಾನಿ (khalistan )ಪ್ರಚಾರವನ್ನು ಉತ್ತೇಜಿಸಲು ಕೆನಡಾದ ಎಂಟು ನಗರಗಳಿಂದ ಸಂಚು ಮಾಡಲಾಗುತ್ತಿದೆ. ಕೆನಡಾದ (Canada) ಕೆಲವು ಗುರುದ್ವಾರಗಳನ್ನೂ ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಖಲಿಸ್ತಾನ್ ಬೆಂಬಲಿಗರು ಮತ್ತು ಅವರ ನಿಕಟವರ್ತಿಗಳ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ಗುಪ್ತಚರ ಸಂಸ್ಥೆಗಳು ಪಂಜಾಬ್ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ವಿದೇಶದಲ್ಲಿ ಅಡಗಿರುವ ಭಯೋತ್ಪಾದಕರು ಪಂಜಾಬ್ ವಾತಾವರಣವನ್ನು ಹಾಳು ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆ ಹೇಳಿರುವುದಾಗಿ ಟಿವಿ9 ಪಂಜಾಬಿ ವರದಿ ಮಾಡಿದೆ.

ರಾಜ್ಯ ಸರ್ಕಾರಕ್ಕೆ ಕಳುಹಿಸಿದ ವರದಿಯಲ್ಲಿ, ಗುಪ್ತಚರ ಸಂಸ್ಥೆಗಳು ಇತ್ತೀಚೆಗೆ ಭಯೋತ್ಪಾದಕ ನಿಜ್ಜಾರ್ ಹತ್ಯೆಯಾದ ಕೆನಡಾದ ನಗರವನ್ನು ಉಲ್ಲೇಖಿಸಿವೆ. ಕೆನಡಾದ ಕೆಲವು ನಗರಗಳಲ್ಲಿ ಭಾರತ ವಿರೋಧಿ ಪೋಸ್ಟರ್‌ಗಳನ್ನು ಹಾಕಲಾಗಿದೆ. ಭಯೋತ್ಪಾದಕರು ಮತ್ತು ಖಲಿಸ್ತಾನ್ ಬೆಂಬಲಿಗರು ಈ ನಗರಗಳಿಗೆ ಬಂದು ಹೋಗುತ್ತಿದ್ದಾರೆ ಎಂದು ಏಜೆನ್ಸಿಗಳು ಹೇಳಿವೆ. ಕೆಲವು ಧಾರ್ಮಿಕ ಸ್ಥಳಗಳ ವ್ಯವಸ್ಥಾಪನಾ ಸಮಿತಿಗಳು ಸಹ ಅವರಿಗೆ ಸಹಾಯ ಮಾಡುತ್ತಿವೆ. ಏಜೆನ್ಸಿಗಳು ಅಂತಹ ಗುರುದ್ವಾರ ವ್ಯವಸ್ಥಾಪಕರ ಪಟ್ಟಿಯನ್ನು ಸಹ ಸಿದ್ಧಪಡಿಸಿವೆ. ಭಾರತದಲ್ಲಿ ಅವರ ಹತ್ತಿರದ ಮತ್ತು ಆತ್ಮೀಯರನ್ನು ಟ್ರ್ಯಾಕ್ ಮಾಡಲು ಈ ಪಟ್ಟಿಯನ್ನು ಪಂಜಾಬ್ ಸರ್ಕಾರದೊಂದಿಗೆ ಹಂಚಿಕೊಳ್ಳಲಾಗಿದೆ.

ಖಲಿಸ್ತಾನ್ ಬೆಂಬಲಿಗರ ಪರವಾಗಿ ಕೆನಡಾದ ಪ್ರಧಾನಿ ಜಸ್ಟೀನ್ ಟ್ರುಡೊ ಹೇಳಿಕೆ ನೀಡಿದ ನಂತರ ಸರ್ರೆ, ಬ್ರಾಂಪ್ಟನ್ ಮತ್ತು ವ್ಯಾಂಕೋವರ್‌ನಲ್ಲಿ ಭಾರತ ವಿರೋಧಿ ಪ್ರಚಾರ ಹೆಚ್ಚಾಗಿದೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ. ಕೆನಡಾದ ಕೆಲವು ನಗರಗಳಲ್ಲಿ ಖಲಿಸ್ತಾನಿ ಅಭಿಯಾನಕ್ಕೆ ಹೆಚ್ಚಿನ ಉತ್ತೇಜನ ನೀಡಲು ಜನಾಭಿಪ್ರಾಯ ಸಂಗ್ರಹಿಸಲು ಸಿದ್ಧತೆ ಆರಂಭಿಸಲಾಗಿದೆ ಎಂದು ಸಂಸ್ಥೆಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: ಕೆನಡಾದವರಿಗೆ ವೀಸಾ ಸೇವೆಗಳನ್ನು ಪುನರಾರಂಭಿಸಿದ ಭಾರತ

ಪಂಜಾಬ್ ನಲ್ಲಿ ಅಮೃತಪಾಲ್ ಸಿಂಗ್ ಬಂಧನಕ್ಕೆ ಸಂಬಂಧಿಸಿದಂತೆ ಕೆನಡಾದಲ್ಲಿ ಧರ್ಮದ ನೆಪದಲ್ಲಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಇದರೊಂದಿಗೆ, ಪಂಜಾಬ್ ಪೊಲೀಸ್‌ನ ಗುಪ್ತಚರ ವಿಭಾಗದ ಅಧಿಕಾರಿಯ ಪ್ರಕಾರ, ಕೆನಡಾದ ಎಂಟು ನಗರಗಳಲ್ಲಿ ಹೆಸರುಗಳು ಹೊರಬಂದಿರುವ ಖಲಿಸ್ತಾನಿಗಳ ನಿಕಟ ಸಂಬಂಧಿಗಳ ಮೇಲೂ ನಿಗಾ ಇರಿಸಲಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ