ಚಂದ್ರನಲ್ಲಿ ಕಾಲಿಟ್ಟ ಎರಡನೇ ವ್ಯಕ್ತಿ ಎಂದು ಖ್ಯಾತಿ ಪಡೆದ ಬಜ್ ಆಲ್ಡ್ರಿನ್​​ಗೆ ಮದುವೆ; 93ನೇ ವಯಸ್ಸಲ್ಲಿ ಇದು ನಾಲ್ಕನೇ ವಿವಾಹ

ನನ್ನ 93 ನೇ ಹುಟ್ಟುಹಬ್ಬದಂದು ಮತ್ತು ಲಿವಿಂಗ್ ಲೆಜೆಂಡ್ಸ್ ಆಫ್ ಏವಿಯೇಷನ್‌ನಿಂದ ನಾನು ಗೌರವಿಸಲ್ಪಡುವ ದಿನದಂದು ನನ್ನ ಬಹುಕಾಲದ ಪ್ರೇಯಸಿ ಡಾ. ಅಂಕಾ ಫೌರ್ ಜತೆ ವಿವಾಹವಾಗಿದ್ದೇನೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ ಎಂದು ಆಲ್ಡ್ರಿನ್ ಟ್ವೀಟ್ ಮಾಡಿದ್ದಾರೆ.

ಚಂದ್ರನಲ್ಲಿ ಕಾಲಿಟ್ಟ ಎರಡನೇ ವ್ಯಕ್ತಿ ಎಂದು ಖ್ಯಾತಿ ಪಡೆದ ಬಜ್ ಆಲ್ಡ್ರಿನ್​​ಗೆ ಮದುವೆ; 93ನೇ ವಯಸ್ಸಲ್ಲಿ ಇದು ನಾಲ್ಕನೇ ವಿವಾಹ
ಅಂಕಾ ಫೌರ್ ಜತೆ ಮದುವೆಯಾದ ಬಜ್ ಆಲ್ಡ್ರಿನ್
Edited By:

Updated on: Jan 22, 2023 | 8:39 PM

1969 ರಲ್ಲಿ ಅಪೊಲೊ 11 ಮಿಷನ್ (Apollo 11 mission) ಸಮಯದಲ್ಲಿ ಚಂದ್ರನ (Moon) ಮೇಲೆ ಇಳಿದ ಮೊದಲ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಾದ ಬಜ್ ಆಲ್ಡ್ರಿನ್ (Buzz Aldrin) ಕೆಲವು ದಿನಗಳ ಹಿಂದೆ ಅವರ 93 ನೇ ಹುಟ್ಟುಹಬ್ಬದಂದು ತಮ್ಮ ದೀರ್ಘಕಾಲದ ಪ್ರೇಯಸಿಯನ್ನು ವಿವಾಹವಾಗಿದ್ದಾರೆ. ಮಾಜಿ ಗಗನಯಾತ್ರಿ ಮತ್ತು ಕೊರಿಯನ್ ವಾರ್ ಫೈಟರ್ ಪೈಲಟ್ ಆಲ್ಡ್ರಿನ್, ತಮ್ಮ ವ್ಯವಹಾರವಾದ ಬಜ್ ಆಲ್ಡ್ರಿನ್ ವೆಂಚರ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ ಅಂಕಾ ಫೌರ್(63) ರೊಂದಿಗಿನ ಅವರ ವಿವಾಹದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ನನ್ನ 93 ನೇ ಹುಟ್ಟುಹಬ್ಬದಂದು ಮತ್ತು ಲಿವಿಂಗ್ ಲೆಜೆಂಡ್ಸ್ ಆಫ್ ಏವಿಯೇಷನ್‌ನಿಂದ ನಾನು ಗೌರವಿಸಲ್ಪಡುವ ದಿನದಂದು ನನ್ನ ಬಹುಕಾಲದ ಪ್ರೇಯಸಿ ಡಾ. ಅಂಕಾ ಫೌರ್ ಜತೆ ವಿವಾಹವಾಗಿದ್ದೇನೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಲಾಸ್ ಏಂಜಲೀಸ್‌ನಲ್ಲಿ ನಡೆದ ಸಣ್ಣ ಖಾಸಗಿ ಸಮಾರಂಭದಲ್ಲಿ ನಾವು ಪವಿತ್ರ ದಾಂಪತ್ಯಕ್ಕೆ ಕಾಲಿಟ್ಟಿದ್ದು, ಓಡಿ ಹೋಗಿ ಮದುವೆಯಾಗುವ ಟೀನೇಜರ್​​ಗಳಂತೆ ಉತ್ಸುಕರಾಗಿದ್ದೇವೆ ಎಂದು ಆಲ್ಡ್ರಿನ್ ಟ್ವಿಟರ್​​ನಲ್ಲಿ ಬರೆದಿದ್ದಾರೆ.


ಕಪ್ಪು ಬೋ ಟೈ ಮತ್ತು ಬ್ಯಾಡ್ಜ್‌ಗಳಿರುವ ಟುಕ್ಸೆಡೊವನ್ನು ಧರಿಸಿರುವ ಆಲ್ಡ್ರಿನ್ ತನ್ನ ಸಂಗಾತಿ ಫೌರ್‌ನೊಂದಿಗೆ ಪೋಸ್ ನೀಡುತ್ತಿರುವುದನ್ನು ಈ ಫೋಟೊದಲ್ಲಿ ಕಾಣಬಹುದು. ಫೌರ್ ಅವರನ್ನು ವಿವಾಹವಾಗುವ ಮೊದಲು ಆಲ್ಡ್ರಿನ್ ಮೂರು ಬಾರಿ ವಿವಾಹವಾಗಿ ವಿಚ್ಛೇದನ ಪಡೆದಿದ್ದರು
ಜನವರಿ 20, 1930 ರಂದು ಜನಿಸಿದ ಆಲ್ಡ್ರಿನ್, 1969 ರ ಅಪೊಲೊ 11 ಮಿಷನ್‌ನಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಅವರೊಂದಿಗೆ ಚಂದ್ರನ ಮೇಲೆ ಇಳಿದಾಗ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ್ದರು.

ಇದನ್ನೂ ಓದಿ: Los Angeles Shooting: ಅಮೆರಿಕದಲ್ಲಿ ಚೀನಿ ಹೊಸ ವರ್ಷಾಚರಣೆ ವೇಳೆ ಗುಂಡಿನ ದಾಳಿ; 10 ಮಂದಿ ಸಾವು

ಮೆನಿ ಮೆನಿ ಹ್ಯಾಪಿ ರಿಟರ್ನ್ಸ್, Buzz ಮತ್ತು Anca! ನಿಮ್ಮಿಬ್ಬರಿಗೂ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. “ನೀವು ಚಂದ್ರನ ಮೇಲೆ ಇರಬೇಕು! ಆದರೆ ನಿಮ್ಮಿಬ್ಬರಿಗೂ ಅಭಿನಂದನೆಗಳು” ಎಂದು ಮತ್ತೊಬ್ಬರು ಹೇಳಿದ್ದಾರೆ. “ವೆಲ್ಡನ್ ಬಝ್, ನೀವು ಚಂದ್ರನ ಮೇಲೆ ಇರಬೇಕು” ಎಂದು ಇನ್ನೊಬ್ಬ ಬಳಕೆದಾರರು ಅಭಿನಂದಿಸಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 8:34 pm, Sun, 22 January 23