
ಫಿಲಿಪೈನ್ಸ್ನಲ್ಲಿ ಡಜನ್ಗಟ್ಟಲೆ ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಬ್ರೇಕ್ ಫೇಲ್ ಆಗಿ 100 ಅಡು ಆಳದ ಕಂದಕಕ್ಕೆ ಬಿದ್ದ ಪರಿಣಾಮ 17 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿರುವ ಎಂಟು ಮಂದಿ ಸ್ಥಿತಿ ಗಂಭೀರವಾಗಿದೆ. ನಾಲ್ವರ ಆರೋಗ್ಯ ಸ್ಥಿರವಾಗಿದೆ. ಆಂಟಿಕ್ ಗವರ್ನರ್ ರೋಡೋರಾ ಕ್ಯಾಡಿಯಾವೊ ತಿಳಿಸಿದ್ದಾರೆ.
ಇಲಾಯ್ಲೋ ಪ್ರಾಂತ್ಯದಿಂದ ಪ್ರಯಾಣಿಕರನ್ನು ಹೊತ್ತಿದ್ದ ಬಸ್ ಮಂಗಳವಾರ ಮಧ್ಯಾಹ್ನ ಆಂಟಿಕಲ್ ಕುಲಾಸಿ ಪಟ್ಟಣಕ್ಕೆ ತೆರಳುತ್ತಿದ್ದಾಗ ಬ್ರೇಕ್ ಫೇಲಾಗಿತ್ತು. 30 ಮೀಟರ್ (98.5 ಅಡಿ) ಕಂದಕಕ್ಕೆ ಬಿದ್ದಿದೆ ಪರಿಣಾಮ 17 ಮಂದಿ ಸಾವನ್ನಪ್ಪಿದ್ದಾರೆ.
ಆ ಪ್ರದೇಶದಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಈಗ ಕೆಲವೇ ದಿನಗಳ ಅಂತರದಲ್ಲಿ ಬಿದ್ದ ಎರಡನೇ ಬಸ್ ಇದಾಗಿದೆ.
ಪ್ರಯಾಣಿಕರಲ್ಲಿ ನಾಲ್ವರು ಕೀನ್ಯಾದ ಪ್ರಜೆಯಾಗಿದ್ದಾರೆ, ಚಾಲಕ ಪದೇ ಪದೇ ಹಾರ್ನ್ ಮಾಡುತ್ತಿದ್ದ ಯಾಕೆಂದರೆ ಆಗಲೇ ಆತ ಬಸ್ನ ನಿಯಂತ್ರಣ ಕಳೆದುಕೊಂಡುಬಿಟ್ಟಿದ್ದ.
ಮತ್ತಷ್ಟು ಓದಿ:ನಿಲ್ಲಿಸಿದ್ದ ಟ್ರಕ್ಗೆ ಬಿಹಾರ ಸಚಿವರ ಬೆಂಗಾವಲು ವಾಹನ ಡಿಕ್ಕಿ, ಓರ್ವ ಸಾವು, ನಾಲ್ವರಿಗೆ ಗಾಯ
ಮೃತಪಟ್ಟವರಲ್ಲಿ ಒಂದು ಮಗು ಕೂಡ ಇತ್ತು, ಕ್ರಿಸ್ಮಸ್ ಸಮಯದಲ್ಲಿ ಈ ಅಪಘಾತವು ಮನಸ್ಸಿಗೆ ಮತ್ತಷ್ಟು ನೋವು ತಂದಿದೆ ಎಂದು ಕ್ಯಾಡಿಯಾವೋ ಹೇಳಿದ್ದಾರೆ.
ಒಟ್ಟು 53 ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ, ಪರಿಶೀಲಿಸಬೇಕಿದೆ ಎಂದಿದ್ದಾರೆ. ರಸ್ತೆಯ ವಿನ್ಯಾಸವು ದೋಷಪೂರಿತವಾಗಿರಬಹುದು ಹೀಗಾಗಿ ಲೋಕೋಪಯೋಗಿ ಮತ್ತು ಹೆದ್ದಾರಿಗಳ ಇಲಾಖೆಯ ಗಮನಕ್ಕೆ ತಂದಿದ್ದೇವೆ ಎಂದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ