ಗಾಜಾದ ಮಸೀದಿ, ಶಾಲೆ ಮೇಲೆ ಇಸ್ರೇಲ್ ವೈಮಾನಿಕ ದಾಳಿ, 18 ಮಂದಿ ಸಾವು

|

Updated on: Oct 06, 2024 | 11:06 AM

ಗಾಜಾದ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದೆ, ಅಲ್ಲಿನ ಮಸೀದಿ ಹಾಗೂ ಶಾಲೆಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ 18 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಗಾಜಾಪಟ್ಟಿಯಲ್ಲಿರುವ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುತ್ತಿದ್ದ ಮಸೀದಿ ಹಾಗೂ ಶಾಲೆಯ ಮೇಲೆ ಇಸ್ರೇಲ್ ದಾಳಿ ನಡೆಸಿದೆ. 93 ಜನರು ಗಾಯಗೊಂಡಿದ್ದಾರೆ. ಮೊಟ್ಟಮೊದಲು 2023 ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ಜನರನ್ನು ಕೊಂದಿತ್ತು ಅಷ್ಟೇ ಅಲ್ಲದೆ 250 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿತ್ತು.

ಗಾಜಾದ ಮಸೀದಿ, ಶಾಲೆ ಮೇಲೆ ಇಸ್ರೇಲ್ ವೈಮಾನಿಕ ದಾಳಿ, 18 ಮಂದಿ ಸಾವು
ವೈಮಾನಿಕ ದಾಳಿ
Image Credit source: Rappler
Follow us on

ಗಾಜಾದ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದೆ, ಅಲ್ಲಿನ ಮಸೀದಿ ಹಾಗೂ ಶಾಲೆಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ 18 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಗಾಜಾಪಟ್ಟಿಯಲ್ಲಿರುವ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುತ್ತಿದ್ದ ಮಸೀದಿ ಹಾಗೂ ಶಾಲೆಯ ಮೇಲೆ ಇಸ್ರೇಲ್ ದಾಳಿ ನಡೆಸಿದೆ. 93 ಜನರು ಗಾಯಗೊಂಡಿದ್ದಾರೆ. ಮೊಟ್ಟಮೊದಲು 2023 ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ಜನರನ್ನು ಕೊಂದಿತ್ತು ಅಷ್ಟೇ ಅಲ್ಲದೆ 250 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿತ್ತು.

ಗಾಜಾದ ಮೇಲೆ ಇಸ್ರೇಲ್‌ನ ನಂತರದ ಮಿಲಿಟರಿ ದಾಳಿಯು ಸುಮಾರು 42,000 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದೆ.
ಗುರುವಾರವೂ ನಡೆದಿತ್ತು ದಾಳಿ ಇಸ್ರೇಲ್‌ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದ್ದು, ಲೆಬನಾನ್‌ ಮತ್ತು ಗಾಜಾ ಪಟ್ಟಿಯ ಮೇಲೆ ಗುರುವಾರ ಇಸ್ರೇಲ್‌ ಮುಗಿಬಿದ್ದಿದೆ. ಬೈರೂತ್‌ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿದ್ದು, 40ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

ಇರಾನ್‌ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್‌ ದಾಳಿ ನಡೆಸಿದ್ದು ಲೆಬನಾನ್‌ ಹಾಗೂ ಗಾಜಾ ಪಟ್ಟಿಯ ಮೇಲೆ ಬಾಂಬ್‌ ಸುರಿಮಳೆ ಮಾಡಿದೆ. ಗಾಜಾ ಪಟ್ಟಿಯ ಮೇಲೂ ದಾಳಿ ನಡೆಸಿದ್ದು ಹಮಾಸ್‌ ಮುಖ್ಯಸ್ಥ ರಾವಿ ಮುಷ್ತಾಹನನ್ನು ಹತ್ಯೆ ಮಾಡಿದ್ದೇವೆ ಎಂದು ಇಸ್ರೇಲ್‌ ಸೇನೆ ಹೇಳಿದೆ. ಇಸ್ರೇಲ್‌ ನಡೆಸಿರುವ ದಾಳಿಯಿಂದಾಗಿ ಸುಮಾರು 12 ಲಕ್ಷ ಮಂದಿಯನ್ನು ಲೆಬನಾನ್‌ನಿಂದ ಸ್ಥಳಾಂತರಿಸಲಾಗಿದೆ ಎಂದು ಲೆಬನಾನ್‌ ಪ್ರಧಾನಿ ನಜೀಬ್‌ ಮಿಕಾತಿ ಹೇಳಿದ್ದಾರೆ.

ಮತ್ತಷ್ಟು ಓದಿ: ಲೆಬನಾನ್‌ನಲ್ಲಿ ಇಸ್ರೇಲ್ ವೈಮಾನಿಕ ದಾಳಿ: ಹಮಾಸ್ ನಾಯಕ ಮತ್ತು ಮೂವರು ಪ್ಯಾಲೆಸ್ತೀನ್ ಉಗ್ರರ ಹತ್ಯೆ

ಹಮಾಸ್‌ ನಾಯಕನ ಹತ್ಯೆ: ಗಾಜಾ ಪಟ್ಟಿಯಲ್ಲಿ ಅಡಗಿಕೊಂಡಿರುವ ಹಮಾಸ್‌ ನಾಯಕರನ್ನು ಗುರಿ ಯಾಗಿಸಿ ಇಸ್ರೇಲ್‌ ವಾಯುದಾಳಿ ನಡೆಸಿದ್ದು, ಗಾಜಾ ಸರಕಾರದ ಮುಖ್ಯಸ್ಥ ರಾವಿ ಮುಷ್ತಾಹ ಹಾಗೂ ಇತರ ನಾಯಕರು ಹತ್ಯೆಗೀಡಾಗಿದ್ದಾರೆ. ಉತ್ತರ ಗಾಜಾದ ನೆಲಮಾಳಿಗೆಯಲ್ಲಿ ಇವರೆಲ್ಲರೂ ಅವಿತುಕೊಂಡಿದ್ದರು ಎಂದು ಇಸ್ರೇಲ್‌ ಸೇನೆ ಹೇಳಿದೆ. ಲೆಬನಾನ್‌ನ ರಾಜಧಾನಿ ಬೈರೂತ್‌ ಮೇಲೆ ನಡೆದ ವಾಯುದಾಳಿಯ ಬಳಿಕ ಪ್ರತಿಕ್ರಿಯಿಸಿರುವ ಇಸ್ರೇಲ್‌ ಸೇನೆ ಕಳೆದ ಕೆಲವು ದಿನಗಳಲ್ಲಿ 15ಕ್ಕೂ ಹೆಚ್ಚು ಮಂದಿ ಹಿಜ್ಬುಲ್ಲಾ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ