AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೆಬನಾನ್‌ನಲ್ಲಿ ಇಸ್ರೇಲ್ ವೈಮಾನಿಕ ದಾಳಿ: ಹಮಾಸ್ ನಾಯಕ ಮತ್ತು ಮೂವರು ಪ್ಯಾಲೆಸ್ತೀನ್ ಉಗ್ರರ ಹತ್ಯೆ

ನಸ್ರಲ್ಲಾ ಹೊರತುಪಡಿಸಿ, ಇಸ್ರೇಲ್ ಗುಂಪಿನ ಇತರ ಹಿರಿಯ ಕಮಾಂಡರ್‌ಗಳ ಹತ್ಯೆಯನ್ನೂ ಮಾಡಿದೆ. ಇದರಲ್ಲಿ ಹಿಜ್ಬುಲ್ಲಾದ ಕೇಂದ್ರ ಮಂಡಳಿಯ ಉಪ ಮುಖ್ಯಸ್ಥ ನಬಿಲ್ ಕೌಕ್ ಮತ್ತು ಇನ್ನೊಬ್ಬ ಹಿರಿಯ ಕಮಾಂಡರ್ ಅಲಿ ಕರಾಕಿ ಸೇರಿದ್ದಾರೆ. ಕೌಕ್ ಒಂದು ವಾರದ ನಿರಂತರ ದಾಳಿಯಲ್ಲಿ ಕೊಲ್ಲಲ್ಪಟ್ಟ ಹಿಜ್ಬುಲ್ಲಾದ ಏಳನೇ ಹಿರಿಯ ಕಮಾಂಡರ್ ಆಗಿದ್ದಾರೆ.

ಲೆಬನಾನ್‌ನಲ್ಲಿ ಇಸ್ರೇಲ್ ವೈಮಾನಿಕ ದಾಳಿ: ಹಮಾಸ್ ನಾಯಕ ಮತ್ತು ಮೂವರು ಪ್ಯಾಲೆಸ್ತೀನ್ ಉಗ್ರರ ಹತ್ಯೆ
ಇಸ್ರೇಲ್ ವೈಮಾನಿಕ ದಾಳಿ
ರಶ್ಮಿ ಕಲ್ಲಕಟ್ಟ
|

Updated on: Sep 30, 2024 | 3:29 PM

Share

ಲೆಬನಾನ್ ಸೆಪ್ಟೆಂಬರ್ 30: ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ನಡೆಸಿದ ದಾಳಿಯಲ್ಲಿ ಹಿರಿಯ ನಾಯಕರೊಬ್ಬರ ಹತ್ಯೆಯಾಗಿದೆ ಎಂದು ಪ್ಯಾಲೆಸ್ತೀನಿಯನ್ ಉಗ್ರಗಾಮಿ ಗುಂಪು ಹಮಾಸ್ ಸೋಮವಾರ ಹೇಳಿದೆ. ಹಮಾಸ್ ನಾಯಕನನ್ನು ಫತೇಹ್ ಶೆರಿಫ್ ಅಬು ಎಲ್-ಅಮಿನ್ ಎಂದು ಗುರುತಿಸಲಾಗಿದ್ದು, ಆತನ ಜತೆ ಆತನ ಪತ್ನಿ, ಮಗ ಮತ್ತು ಮಗಳನ್ನೂ ಹತ್ಯೆ ಮಾಡಲಾಗಿದೆ. ಸೋಮವಾರ ಮುಂಜಾನೆ ಟೈರ್ ನಗರದಲ್ಲಿನ ಪ್ಯಾಲೆಸ್ತೀನಿಯನ್ ನಿರಾಶ್ರಿತರ ಶಿಬಿರದೊಳಗಿನ ಅವರ ಮನೆಯನ್ನು ಗುರಿಯಾಗಿಸಿಕೊಂಡು ಇಸ್ರೇಲಿ ವೈಮಾನಿಕ ದಾಳಿ ನಡೆಸಿತು.

ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೈನ್ (PFLP), ಹಮಾಸ್ ಜೊತೆಗೆ ಇಸ್ರೇಲ್ ವಿರುದ್ಧ ಹೋರಾಡುವ ಪ್ರತಿರೋಧ ಗುಂಪು ಬೈರುತ್‌ನ ಕೋಲಾ ಜಿಲ್ಲೆಯ ಅಪಾರ್ಟ್ಮೆಂಟ್ ಕಟ್ಟಡದ ಮೇಲಿನ ಮಹಡಿಗೆ ಇಸ್ರೇಲಿ ದಾಳಿ ನಂತರ ಗುಂಪು ಮೂರು ಸದಸ್ಯರನ್ನು ಕಳೆದುಕೊಂಡಿದೆ ಎಂದು ಹೇಳಿದೆ. ಈ ದಾಳಿಯು ರಾಜಧಾನಿಯ ನಗರ ಮಿತಿಯೊಳಗೆ ಇಸ್ರೇಲ್ ನಡೆಸಿದ ಮೊದಲ ದಾಳಿಯಾಗಿದೆ ಎಂದು ವರದಿಯಾಗಿದೆ.

ಇಸ್ರೇಲಿ ಸೇನೆಯು ದಾಳಿಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಉತ್ತರ ಇಸ್ರೇಲ್ ಅನ್ನು ಮತ್ತೆ ‘ಸುರಕ್ಷಿತ’ ಮಾಡಲು ಮತ್ತು ಅದರ ಪ್ರಜೆಗಳನ್ನು ಅವರ ಸಮುದಾಯಗಳಿಗೆ ಹಿಂದಿರುಗಿಸಲು ತನ್ನ ದಾಳಿಗಳನ್ನು ನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದೆ.

ಹಿಬ್ಜುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಕೊಂದ ಕೆಲವು ದಿನಗಳ ನಂತರ, ಇರಾನ್ ಬೆಂಬಲಿತ ಉಗ್ರಗಾಮಿ ಗುಂಪಿನ “ಗುರಿ” ಎಂದು ಹೇಳಿಕೊಂಡ ಪ್ರದೇಶಗಳ ಮೇಲೆ ಇಸ್ರೇಲ್ ಸೋಮವಾರ ಲೆಬನಾನ್ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದೆ.

ನಸ್ರಲ್ಲಾ ಹೊರತುಪಡಿಸಿ, ಇಸ್ರೇಲ್ ಗುಂಪಿನ ಇತರ ಹಿರಿಯ ಕಮಾಂಡರ್‌ಗಳ ಹತ್ಯೆಯನ್ನೂ ಮಾಡಿದೆ. ಇದರಲ್ಲಿ ಹಿಜ್ಬುಲ್ಲಾದ ಕೇಂದ್ರ ಮಂಡಳಿಯ ಉಪ ಮುಖ್ಯಸ್ಥ ನಬಿಲ್ ಕೌಕ್ ಮತ್ತು ಇನ್ನೊಬ್ಬ ಹಿರಿಯ ಕಮಾಂಡರ್ ಅಲಿ ಕರಾಕಿ ಸೇರಿದ್ದಾರೆ. ಕೌಕ್ ಒಂದು ವಾರದ ನಿರಂತರ ದಾಳಿಯಲ್ಲಿ ಕೊಲ್ಲಲ್ಪಟ್ಟ ಹಿಜ್ಬುಲ್ಲಾದ ಏಳನೇ ಹಿರಿಯ ಕಮಾಂಡರ್ ಆಗಿದ್ದಾರೆ.

ಇದನ್ನೂ ಓದಿ: ಹಿಜ್ಬುಲ್ಲಾ ಮುಖ್ಯಸ್ಥನ ಸಾವು: ಭದ್ರತಾ ಮಂಡಳಿ ಸಭೆ ಕರೆದ ಇರಾನ್

ಇಸ್ರೇಲ್‌ನ ಇತ್ತೀಚಿನ ಸರಣಿ ದಾಳಿಗಳಲ್ಲಿ ಲೆಬನಾನ್‌ನಾದ್ಯಂತ ಸುಮಾರು 1,000 ಜನರು ಸಾವಿಗೀಡಾಗಿದ್ದಾರೆ. ಇದರಲ್ಲಿ 6,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪರಿಸರ ಸಚಿವ ನಾಸರ್ ಯಾಸಿನ್ ಸುದ್ದಿ ಸಂಸ್ಥೆ ಎಪಿಗೆ ಸುಮಾರು 2,50,000 ಜನರು ಆಶ್ರಯದಲ್ಲಿ ಆಶ್ರಯ ಪಡೆದಿದ್ದಾರೆ ಮತ್ತು ಸಾವಿರಾರು ಜನರು ತಮ್ಮ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾರೆ ಅಥವಾ ತೆರೆದ ಸ್ಥಳಗಳಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ ಎಂದು ಹೇಳಿದರು. ಪ್ರಧಾನಿ ನಜೀಬ್ ಮಿಟಾಕಿ ಸ್ಥಳಾಂತರವನ್ನು ದೇಶದ ಇತಿಹಾಸದಲ್ಲಿ “ಅತಿದೊಡ್ಡ ದುರಂತ” ಎಂದು ಬಣ್ಣಿಸಿದರು.

ಆಶ್ರಯವನ್ನು ಸಜ್ಜುಗೊಳಿಸಲು ಸರ್ಕಾರಕ್ಕೆ ಮಾರ್ಗವಿಲ್ಲ ಎಂಬುದು ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಮಾನವೀಯ ಗುಂಪಿನ ಮರ್ಸಿ ಕಾರ್ಪ್ಸ್‌ನ ಲೆಬನಾನ್‌ನ ನಿರ್ದೇಶಕಿ ಲೈಲಾ ಅಲ್ ಅಮೈನ್ ಹೇಳಿದ್ದಾರೆ. ಯೆಮನ್‌ನಲ್ಲಿ ಭಾನುವಾರ ನಡೆದ ದಾಳಿಯಲ್ಲಿ ನಾಲ್ವರು ಮೃತಪಟ್ಟು 29 ಮಂದಿ ಗಾಯಗೊಂಡಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ