Austria Avalanche: ಆಸ್ಟ್ರಿಯಾದಲ್ಲಿ ಭಾರಿ ಹಿಮಪಾತ: 8 ಮಂದಿ ಸಾವು

|

Updated on: Feb 06, 2023 | 9:29 AM

ಆಸ್ಟ್ರಿಯಾ ಸಂಭವಿಸಿದ ಭಾರಿ ಹಿಮಪಾತದಿಂದ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವರದಿಗಳ ಪ್ರಕಾರ, ಶಾಲಾ ರಜಾದಿನಗಳಲ್ಲಿ ವಿಯೆನ್ನಾದ ಸ್ಕೀ ರೆಸಾರ್ಟ್‌ಗಳು ತುಂಬಿದ್ದವು.

Austria Avalanche: ಆಸ್ಟ್ರಿಯಾದಲ್ಲಿ ಭಾರಿ ಹಿಮಪಾತ: 8 ಮಂದಿ ಸಾವು
ಆಸ್ಟ್ರಿಯಾ ಹಿಮಪಾತ
Image Credit source: The Canberra Times
Follow us on

ಆಸ್ಟ್ರೀಯಾದಲ್ಲಿ ಸಂಭವಿಸಿದ ಭಾರಿ ಹಿಮಪಾತದಿಂದ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವರದಿಗಳ ಪ್ರಕಾರ, ಶಾಲಾ ರಜಾದಿನಗಳಲ್ಲಿ ವಿಯೆನ್ನಾದ ಸ್ಕೀ ರೆಸಾರ್ಟ್‌ಗಳು ಜನರಿಂದ ತುಂಬಿದ್ದವು. ಗಾಳಿ ಮತ್ತು ಹಿಮಪಾತದಿಂದಾಗಿ ಹಿಮಕುಸಿತದ ಅಪಾಯ ಹೆಚ್ಚಾಗಿತ್ತು ಎಂದು ಟೈರೋಲ್ ಮತ್ತು ವೊರಾರ್ಲ್‌ಬರ್ಗ್ ಪ್ರದೇಶಗಳಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ಟೈರೋಲ್ ರಾಜ್ಯದ ಸ್ಮಿರ್ನ್ ನಲ್ಲಿ ಶನಿವಾರ ಸಂಭವಿಸಿದ ಹಿಮಪಾತಕ್ಕೆ ಸಿಲುಕಿ  58 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಸ್ವಿಟ್ಜರ್ಲೆಂಡ್‌ನ ಗಡಿಯಲ್ಲಿರುವ ಸ್ಪೈಸ್ ಪಟ್ಟಣದ ಬಳಿ ಹಿಮಕುಸಿತ ಸಂಭವಿಸಿದಾಗ 42 ವರ್ಷದ ಆಸ್ಟ್ರಿಯಾದ ಆರೋಹಿ ಮತ್ತು ಸ್ಕೀ-ಗೈಡ್ ಮತ್ತು ನಾಲ್ಕು ಸ್ವೀಡಿಷ್ ಸ್ಕೀಯರ್‌ಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ ಅಲ್ಲಿಯೇ, ಸ್ವೀಡನ್‌ನ 43 ವರ್ಷದ ವ್ಯಕ್ತಿಯನ್ನು ರಕ್ಷಿಸಲಾಗಿದೆ.

ಮೂರನೇ ಘಟನೆಯಲ್ಲಿ ಇಬ್ಬರು ಆಸ್ಟ್ರಿಯನ್ ಸ್ಕೀಯರ್‌ಗಳು ಮೃತಪಟ್ಟಿದ್ದಾರೆ. ಶನಿವಾರ ಬೆಳಗ್ಗೆ ತುರ್ತು ಸೇವೆಗಳು ಇಬ್ಬರು ಆಸ್ಟ್ರಿಯಾದ ಸ್ಕೀಯರ್‌ಗಳು, ಒಬ್ಬ ಪುರುಷ ಮತ್ತು ಮಹಿಳೆಯ ಶವಗಳನ್ನು ಪತ್ತೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ ವೇಳೆ ಸಂಭವಿಸಿದ ಹಿಮಕುಸಿತದಲ್ಲಿ 10 ಮಂದಿ ನಾಪತ್ತೆಯಾಗಿದ್ದರು. ಅವರನ್ನು ರಕ್ಷಿಸಲು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. 2,700 ಮೀಟರ್ ಎತ್ತರದ ಟ್ರೀಟ್‌ಕೋಫ್ ಪರ್ವತದ ಮೇಲೆ ಜುಯೆರ್ಸ್ ಮತ್ತು ಲೆಚ್ ಆಮ್ ಅರ್ಲ್‌ಬರ್ಗ್ ನಡುವೆ ಹಿಮಪಾತ ಸಂಭವಿಸಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 8:26 am, Mon, 6 February 23