ಬಾಂಗ್ಲಾದೇಶದ ಹಿಂದೂ ಪರ ವಕೀಲ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಬಂಧನ

|

Updated on: Nov 25, 2024 | 6:02 PM

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸೆ, ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿದ್ದ ಹಿಂದೂ ಪರ ವಕೀಲ ಹಾಗೂ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ಬಂಧಿಸಿದ್ದಾರೆ. ಇದೀಗ ಇದು ಹಿಂದೂ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಬಾಂಗ್ಲಾದೇಶದ ಹಿಂದೂ ಪರ ವಕೀಲ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಬಂಧನ
ವಕೀಲ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ
Follow us on

ಬಾಂಗ್ಲಾದೇಶದಲ್ಲಿ ಗಲಭೆಯ ನಂತರ ಇದೀಗ ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಪರ ವಕೀಲರಾಗಿರುವ ಖ್ಯಾತ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಬಾಂಗ್ಲಾದೇಶ ರಾಜಧಾನಿಯಲ್ಲಿ  ಬೃಹತ್ ಹಿಂದೂ ರ್ಯಾಲಿಯನ್ನು ನಡೆಸಿದ್ದಾರೆ,  ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಧ್ವನಿ ಎತ್ತಿದ್ದಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ಹೋರಾಟಗಾರರು ಹೇಳಿದ್ದಾರೆ. ಇನ್ನು ಈ ಬಗ್ಗೆ ಎಕ್ಸ್​​ ಮೂಲಕ ರಾಧಾರಾಮನ್ ದಾಸ್ ಎಂಬುವವರು ಟ್ವೀಟ್​​ ಮಾಡಿದ್ದಾರೆ. ಹಿಂದೂ ಸನ್ಯಾಸಿ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಮುಖ್ಯ ನಾಯಕ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ಢಾಕಾ ಬಂಧಿಸಿದ್ದಾರೆ. ಇದು ದೊಡ್ಡ ಅಘಾತ ಹಾಗೂ ಪೊಲೀಸರು ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಹೇಳಿದ್ದಾರೆ.

ದಾಸ್ ಅವರನ್ನು ಢಾಕಾ ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗಲಾಗಿದೆ ಎಂದು ಢಾಕಾ ವಿಮಾನ ನಿಲ್ದಾಣ ವ್ಯವಸ್ಥಾಪಕರು ಹೇಳಿದ್ದಾರೆ. ಢಾಕಾ ಪೊಲೀಸರು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.  ಅವರು ಖಾಸಗಿ ವಾಹನವನ್ನು ಬಿಟ್ಟು, ಪೊಲೀಸ್​​​  ವಾಹನದಲ್ಲಿ,  ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ಕೃಷ್ಣ ದಾಸ್ ಅವರು ಬಾಂಗ್ಲಾದೇಶದ ಹಿಂದೂಗಳ ಹಕ್ಕುಗಳ ಪ್ರಮುಖ ಧ್ವನಿಯಾಗಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಇಸ್ಕಾನ್ ಉಗ್ರ ಸಂಘಟನೆಯೆಂದು ಘೋಷಿಸಿದ ಬಾಂಗ್ಲಾದೇಶ!

ಅಲ್ಪಸಂಖ್ಯಾತರ ಮೇಲಿನ ದಾಳಿಗಳು ರಾಜಕೀಯ, ಕೋಮುವಾದವಲ್ಲ: ಯೂನಸ್

ಬಾಂಗ್ಲಾದೇಶ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ತಮ್ಮ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಯ ವಿಷಯವನ್ನು “ಉತ್ಪ್ರೇಕ್ಷಿತ” ಎಂದು ಹೇಳಿದ್ದರು ಮತ್ತು ಭಾರತವು ಅದನ್ನು ವಾಖ್ಯಾನಿಸಿದ ವಿಧಾನವನ್ನು ಪ್ರಶ್ನಿಸಿದ್ದರು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಕೋಮುವಾದಕ್ಕಿಂತ ಹೆಚ್ಚು ರಾಜಕೀಯವಾಗಿದೆ ಎಂದು ಮುಹಮ್ಮದ್ ಯೂನಸ್ ಸಂದರ್ಶನವೊಂದರಲ್ಲಿ ಹೇಳಿದರು.

 

Published On - 5:55 pm, Mon, 25 November 24