AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಸ್ನೇಹದಿಂದ ನನಗೇನೂ ಲಾಭವಾಗಿಲ್ಲ; ಟ್ರಂಪ್ ಆರೋಪಕ್ಕೆ ಮೆಲೋನಿ ಖಡಕ್ ಉತ್ತರ

ಡೊನಾಲ್ಡ್ ಟ್ರಂಪ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ 'ಫೋಟೋ ವಾರ್' ಈಗ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ತುತ್ತತುದಿಗೆ ತಲುಪಿದೆ. ಟ್ರಂಪ್ ಅವರ ಸರಣಿ ಆರೋಪಗಳಿಗೆ ಜಾರ್ಜಿಯಾ ಮೆಲೋನಿ ತಿರುಗೇಟು ನೀಡಿದ್ದಾರೆ. ನನ್ನ ಜೊತೆ ಮತ್ತೆ ಗೆಳೆತನ ಬೆಳೆಸಲು ಮೆಲೋನಿ ಕಾಯುತ್ತಿದ್ದಾರೆ, ಹೀಗಾಗಿ ನನ್ನೊಂದಿಗೆ ಸೆಲ್ಫೀ ಬೇಕೆಂದು ಪದೇಪದೇ ಹಠ ಹಿಡಿದಿದ್ದರು ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಇದರಿಂದ ಮುಜುಗರಕ್ಕೀಡಾಗಿದ್ದ ಮೆಲೋನಿ ಟ್ರಂಪ್​ಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ. ನಿಮ್ಮ ಜೊತೆಗಿನ ಸ್ನೇಹದಿಂದ ನನಗೇನೂ ಲಾಭವಾಗಿಲ್ಲ ಎಂದಿದ್ದಾರೆ.

ನಿಮ್ಮ ಸ್ನೇಹದಿಂದ ನನಗೇನೂ ಲಾಭವಾಗಿಲ್ಲ; ಟ್ರಂಪ್ ಆರೋಪಕ್ಕೆ ಮೆಲೋನಿ ಖಡಕ್ ಉತ್ತರ
MeloniImage Credit source: AP
ಸುಷ್ಮಾ ಚಕ್ರೆ
|

Updated on: Jun 20, 2026 | 10:49 PM

Share

ನವದೆಹಲಿ, ಜೂನ್ 20: ಜಿ7 ಶೃಂಗಸಭೆಯ ಫೋಟೋ ವಿವಾದಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ನಡುವಿನ ವಾಕ್ಸಮರ ತಾರಕಕ್ಕೇರಿದೆ. ಟ್ರಂಪ್ ಅವರ ಅಹಂಕಾರಿ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮೆಲೋನಿ, “ನಿಮ್ಮ ಸ್ನೇಹಿತೆಯಾಗಿರುವುದರಿಂದ ನನಗಂತೂ ಯಾವುದೇ ಸಹಾಯವಾಗಿಲ್ಲ. ನಿಮ್ಮ ಜೊತೆಗಿನ ಸ್ನೇಹದಿಂದ ನನಗೆ ಜನಪ್ರಿಯತೆಯೂ ಬಂದಿಲ್ಲ. ನನ್ನ ಜನಪ್ರಿಯತೆಯ ಬಗ್ಗೆ ಚಿಂತಿಸುವುದು ನಿಮಗೆ ಬೇಡದ ಕೆಲಸ” ಎಂದು ಟ್ರಂಪ್​ಗೆ ನೇರವಾಗಿಯೇ ಖಡಕ್ ಉತ್ತರ ನೀಡಿದ್ದಾರೆ.

ಇಟಲಿ ದೇಶದಲ್ಲಿ ಮೆಲೋನಿ ಜನಪ್ರಿಯತೆ ಕುಸಿಯುತ್ತಿದೆ. ತಮ್ಮ ರೇಟಿಂಗ್ಸ್ ಹೆಚ್ಚಿಸಿಕೊಳ್ಳಲು ಅವರು ನನ್ನ ಸ್ನೇಹಕ್ಕಾಗಿ ಹಂಬಲಿಸುತ್ತಿದ್ದಾರೆ ಎಂಬ ಟ್ರಂಪ್ ಆರೋಪಕ್ಕೆ ಮೆಲೋನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ನಿಮ್ಮ ಕೆಲಸ ಏನಿದೆಯೋ ಅದನ್ನು ನೀವು ನೋಡಿಕೊಳ್ಳಿ. ಇಟಲಿಯಲ್ಲಿ ನನ್ನ ಜನಪ್ರಿಯತೆ ಎಷ್ಟಿದೆ ಎಂಬುದು ನಿಮಗೆ ಸಂಬಂಧಿಸಿದ ವಿಷಯವಲ್ಲ. ನನ್ನ ದೇಶದ ಜನರಿಗೆ ನನ್ನ ಮೇಲೆ ವಿಶ್ವಾಸವಿದೆ” ಎಂದು ಮೆಲೋನಿ ಹೇಳಿದ್ದಾರೆ.

“ನಿಮ್ಮೊಂದಿಗೆ ಆಪ್ತವಾಗಿ ಇರುವುದರಿಂದ ಇಟಲಿಗೆ ಅಥವಾ ನನಗೆ ಯಾವುದೇ ವೈಯಕ್ತಿಕ ಲಾಭವಾಗಿಲ್ಲ. ಹಾಗಾಗಿ ನಾನೇಕೆ ನಿಮ್ಮ ಸ್ನೇಹಕ್ಕಾಗಿ ಹಂಬಲಿಸಲಿ?” ಎಂದು ಮೆಲೋನಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನನ್ನೊಂದಿಗೆ ಫ್ರೆಂಡ್ ಆಗಲು ಮೆಲೋನಿ ಹಾತೊರೆಯುತ್ತಿದ್ದಾರೆ! ಮತ್ತೆ ಹಳೇ ರಾಗ ಹಾಡಿದ ಟ್ರಂಪ್

ಇಟಲಿಯ ನೀತಿಗಳ ಕುರಿತಾದ ಟ್ರಂಪ್ ಕಾಮೆಂಟ್‌ಗಳಿಗೆ ತಿರುಗೇಟು ನೀಡಿದ ಮೆಲೋನಿ, ದೇಶಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದ ಮೇಲೆಯೇ ತೆಗೆದುಕೊಳ್ಳಲಾಗುತ್ತದೆ ಎಂದು ಒತ್ತಿಹೇಳಿದರು. “ಇಟಲಿ ಎಂದಿಗೂ ಒಂದು ಸಾರ್ವಭೌಮ ರಾಷ್ಟ್ರವಾಗಿದೆ. ಏನೇ ಆದರೂ, ನನ್ನ ಜನಪ್ರಿಯತೆಯ ಬಗ್ಗೆ ಚಿಂತಿಸುವುದು ನಿಮಗೆ ಬೇಡದ ಕೆಲಸ. ಅದರ ಬದಲು ನೀವು ನಿಮ್ಮ ಜನಪ್ರಿಯತೆಯ ಕಡೆಗೆ ಗಮನ ಹರಿಸುವುದು ಒಳಿತು” ಎಂದು ಮೆಲೋನಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ, ಫ್ರಾನ್ಸ್ ಜಿ7 ಶೃಂಗಸಭೆಯಲ್ಲಿ ಮೆಲೋನಿ ಅವರು ನನ್ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು “ಮತ್ತೆ ಮತ್ತೆ ಬೇಡಿಕೊಂಡಿದ್ದರು” ಎಂದು ಬರೆದುಕೊಂಡಿದ್ದರು. ಅಷ್ಟೇ ಅಲ್ಲದೆ, ಇರಾನ್ ವಿಚಾರದಲ್ಲಿ ಅಮೆರಿಕಕ್ಕೆ ಇಟಲಿ ಬೆಂಬಲ ನೀಡದ ಕಾರಣ ಮೆಲೋನಿ ಗ್ರಾಫ್ ಇಟಲಿಯಲ್ಲಿ ಕುಸಿಯುತ್ತಿದೆ ಎಂದೂ ಟ್ರಂಪ್ ಲೇವಡಿ ಮಾಡಿದ್ದರು. ಮೆಲೋನಿ ನನ್ನೊಂದಿಗೆ ಮತ್ತೆ ಫ್ರೆಂಡ್​ಶಿಪ್ ಬೆಳೆಸಲು ಹಾತೊರೆಯುತ್ತಿದ್ದಾರೆ, ಅದೇ ಕಾರಣಕ್ಕೆ ನನ್ನೊಂದಿಗೆ ಸೆಲ್ಫಿ ಬೇಕೆಂದು ಹಠ ಹಿಡಿದಿದ್ದರು ಎಂದು ಹೇಳಿಕೆ ನೀಡಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಜಾಗತಿಕ ಮಟ್ಟದಲ್ಲಿ ಮೆಲೋನಿಗೆ ಹಾಗೂ ಇಟಲಿಗೆ ಮುಜುಗರವನ್ನೂ ಉಂಟುಮಾಡಿತ್ತು.

ಇದನ್ನೂ ಓದಿ: ನನ್ನೊಂದಿಗೆ ಫೋಟೋ ಬೇಕೆಂದು ಮೆಲೋನಿ ಬೇಡಿಕೊಂಡಿದ್ದರು; ಟ್ರಂಪ್ ಹೇಳಿಕೆಗೆ ಸಿಡಿದೆದ್ದ ಇಟಲಿ ಪ್ರಧಾನಿ

ಈ ಇಬ್ಬರ ನಡುವಿನ ಈ ವೈಯಕ್ತಿಕ ವಾಕ್ಸಮರ ಈಗ ಅಮೆರಿಕ ಮತ್ತು ಇಟಲಿ ದೇಶಗಳ ನಡುವಿನ ಅಧಿಕೃತ ಬಾಂಧವ್ಯದ ಮೇಲೂ ಪರಿಣಾಮ ಬೀರಲು ಆರಂಭಿಸಿದೆ. ಈ ವಿವಾದದ ಬೆನ್ನಲ್ಲೇ ಇಟಲಿಯ ವಿದೇಶಾಂಗ ಸಚಿವ ಆಂಟೋನಿಯೊ ತಾಜಾನಿ ಅವರು ತಮ್ಮ ನಿಗದಿತ ಅಮೆರಿಕ ಪ್ರವಾಸವನ್ನು ಅಧಿಕೃತವಾಗಿ ರದ್ದುಗೊಳಿಸುವ ಮೂಲಕ ಅಮೆರಿಕಕ್ಕೆ ಪ್ರಬಲ ರಾಜತಾಂತ್ರಿಕ ಸಂದೇಶ ರವಾನಿಸಿದ್ದಾರೆ. ಟ್ರಂಪ್ ಕೇವಲ ಮೆಲೋನಿ ಮಾತ್ರವಲ್ಲದೆ ಒಟ್ಟಾರೆ ನಾಟೋ ಮಿತ್ರರಾಷ್ಟ್ರಗಳನ್ನೂ ಟೀಕಿಸಿರುವುದರಿಂದ, ಐರೋಪ್ಯ ಒಕ್ಕೂಟದ ದೇಶಗಳು ಟ್ರಂಪ್ ಅವರ ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ?
ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ?
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ