ಟ್ರಂಪ್‌ಗೆ ಮತ್ತೆ ಬಿಗ್ ಶಾಕ್: 3000 ಕೋಟಿ ರೂ ದಂಡ, ಯಾವುದೇ ನಿಗಮ ಮಂಡಳಿಗೂ ನೇಮಕವಾಗುವಂತಿಲ್ಲ!

| Updated By: ಸಾಧು ಶ್ರೀನಾಥ್​

Updated on: Feb 17, 2024 | 1:56 PM

Donald Trump: ಪ್ರಕರಣದಲ್ಲಿ ಟ್ರಂಪ್ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಅಸಮರ್ಥರಾಗಿದ್ದಾರೆ ಎಂದು ಪ್ರತಿವಾದಿಗಳು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ.. ‘ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡಬೇಡ’ ಎಂದೂ ಟ್ರಂಪ್ ರನ್ನು ಉದ್ದೇಶಿಸಿ ಹೇಳಿದ್ದಾರೆ. 

ಟ್ರಂಪ್‌ಗೆ ಮತ್ತೆ ಬಿಗ್ ಶಾಕ್: 3000 ಕೋಟಿ ರೂ ದಂಡ, ಯಾವುದೇ ನಿಗಮ ಮಂಡಳಿಗೂ ನೇಮಕವಾಗುವಂತಿಲ್ಲ!
ಡೊನಾಲ್ಡ್ ಟ್ರಂಪ್‌ಗೆ ಭಾರೀ ದಂಡ, ನಿಗಮ ಮಂಡಳಿಗೂ ನೇಮಕವಾಗುವಂತಿಲ್ಲ!
Follow us on

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಒಂದೇ ಸಮನೆ ಹೊಡೆತಗಳು ಎದುರಾಗಿವೆ. ಅವರ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ನಾಶಪಡಿಸಿದ ಸಿವಿಲ್ ಪ್ರಕರಣದಲ್ಲಿ ಯುಎಸ್ ಎ ಮಾಜಿ ಅಧ್ಯಕ್ಷರು ಮತ್ತೊಂದು ಕಾನೂನು ಹಿನ್ನಡೆ ಅನುಭವಿಸಿದ್ದಾರೆ. ತಮ್ಮ ಆಸ್ತಿ ಮೌಲ್ಯವನ್ನು ಕೃತ್ರಿಮವಾಗಿ ಹೆಚ್ಚಿಸಿದ್ದಕ್ಕಾಗಿ $ 354.9 ಮಿಲಿಯನ್ (3 ಸಾವಿರ ಕೋಟಿ ರೂ) ದಂಡವನ್ನು ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ನ್ಯೂಯಾರ್ಕ್ ಕೋರ್ಟ್ ಶುಕ್ರವಾರ ಈ ಕುರಿತು ತೀರ್ಪು ನೀಡಿದೆ. ಮೂರು ತಿಂಗಳ ವಿವಾದಾಸ್ಪದ ವಿಚಾರಣೆಯ ನಂತರ, ನ್ಯಾಯಮೂರ್ತಿ ಆರ್ಥರ್ ಎಂಗೊರಾನ್ ತಮ್ಮ ತೀರ್ಪನ್ನು ಪ್ರಕಟಿಸಿದರು. ಈ ವರ್ಷ ಅಧ್ಯಕ್ಷ ಸ್ಥಾನವನ್ನು ಮರಳಿ ಪಡೆಯಲು ಹವಣಿಸುತ್ತಿರುವ ಟ್ರಂಪ್, ಮೂರು ವರ್ಷಗಳ ಕಾಲ ಯಾವುದೇ ನ್ಯೂಯಾರ್ಕ್ ಕಾರ್ಪೊರೇಷನ್‌ ಅಧಿಕಾರಿ ಅಥವಾ ನಿರ್ದೇಶಕರಾಗಿ ಸೇವೆ ಸಲ್ಲಿಸುವುದನ್ನು ಸಹ ನಿಷೇಧಿಸಲಾಗಿದೆ. ಈ ಬೆಳವಣಿಗೆಗಳ ಮಧ್ಯೆ, ಟ್ರಂಪ್ ಅವರ ವಕೀಲರಾದ ಅಲೀನಾ ಹಬ್ಬಾ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

ನ್ಯಾಯಾಲಯವು ಈ ಹಿಂದೆ ಸೆಪ್ಟೆಂಬರ್‌ನಲ್ಲಿ ತಾನು ನೀಡಿದ್ದ ತೀರ್ಪನ್ನು ರದ್ದುಗೊಳಿಸುತ್ತಾ ಟ್ರಂಪ್‌ರ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ನಿಯಂತ್ರಿಸುವ ಆಧಾರ ಕಂಪನಿಗಳನ್ನು ಮುಚ್ಚುವಂತೆ ಆದೇಶಿಸಿದೆ. ಡೊನಾಲ್ಡ್ ಟ್ರಂಪ್ ಅವರ ವ್ಯವಹಾರಗಳ ಮೇಲ್ವಿಚಾರಣೆ ಮಾಡಲು ಸ್ವತಂತ್ರ ಮಾನಿಟರ್ ಮತ್ತು ವಿಶೇಷ ನಿರ್ದೇಶಕರನ್ನು ನೇಮಿಸುತ್ತಿರುವುದರಿಂದ ಇನ್ನು ಮುಂದೆ ಈ ಕಂಪನಿಗಳ ಅಗತ್ಯವಿಲ್ಲ ಎಂದು ಶುಕ್ರವಾರ ತಿಳಿಸಿದೆ. ಪ್ರಕರಣದಲ್ಲಿ ಟ್ರಂಪ್ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಅಸಮರ್ಥರಾಗಿದ್ದಾರೆ ಎಂದು ಪ್ರತಿವಾದಿಗಳು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ.. ‘ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡಬೇಡ’ ಎಂದೂ ಟ್ರಂಪ್ ರನ್ನು ಉದ್ದೇಶಿಸಿ ಹೇಳಿದ್ದಾರೆ.

ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರು ಟ್ರಂಪ್ ಮತ್ತು ಅವರ ಕುಟುಂಬದ ವ್ಯವಹಾರಗಳು ಒಂದು ದಶಕದಲ್ಲಿ ಅದರ ನಿವ್ವಳ ಮೌಲ್ಯವನ್ನು ವರ್ಷಕ್ಕೆ $3.6 ಬಿಲಿಯನ್ ಗೆ ಹೆಚ್ಚಾಗಿದೆ ಎಂದು ತೋರಿಸಿದ್ದಾರೆ. ಸಾಲ ಪಡೆಯುವುದಕ್ಕಾಗಿ ಬ್ಯಾಂಕರ್‌ಗಳಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು. ಇನ್ನೂ ನಾಲ್ಕು ಪ್ರಕರಣಗಳಲ್ಲಿ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಟ್ರಂಪ್ ಬೆಂಬಲಿಗರು ತಮ್ಮ ವಿರುದ್ಧದ ಕಾನೂನು ಕ್ರಮವನ್ನು ರಾಜಕೀಯ ಪ್ರತೀಕಾರದ ಕ್ರಮ ಎಂದು ಬಣ್ಣಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, “ನಾನು ಅನ್ಯಾಯವನ್ನು ಸಹಿಸುವುದಿಲ್ಲ” ಎಂದು ಹೇಳಿದ್ದಾರೆ. ಜ್ಯೂರಿಗಳು ಇಲ್ಲದೆಯೇ ಪ್ರಕರಣವನ್ನು ನಿರ್ಧರಿಸಿದ ಎಂಗೊರಾನ್ ಅವರು ಟ್ರಂಪ್ ಮತ್ತು ಅವರ ಕಂಪನಿಗಳು ನ್ಯೂಯಾರ್ಕ್‌ನಲ್ಲಿ ಚಾರ್ಟರ್ಡ್ ಮಾಡಿದ ಯಾವುದೇ ಹಣಕಾಸು ಸಂಸ್ಥೆಯಿಂದ ಮೂರು ವರ್ಷಗಳವರೆಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದನ್ನು ನಿರ್ಬಂಧಿಸಿದರು. ಇದರಿಂದ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದ ಟ್ರಂಪ್ ಗೆ ಹಿನ್ನಡೆ ಎದುರಾಗಿದೆ.