ಬ್ರಿಟನ್ ದೇಶದಲ್ಲಿ ಕೊವಿಡ್ 2ನೇ ಅಲೆ ಆರಂಭವಾಗುತ್ತಿದ್ದಂತೆ ಹೊಸ ಚರ್ಚೆಗಳು ಹುಟ್ಟಿಕೊಂಡಿವೆ. ಕೊರೊನಾ ವೈರಾಣು ರೂಪಾಂತರಗೊಂಡಿರುವ ಕಾರಣ ಈಗಾಗಲೇ ತಯಾರಾದ ಸೋಂಕನ್ನು ಸದೆಬಡಿಯಲು ಸಜ್ಜಾದ ಲಸಿಕೆಗಳು ವ್ಯರ್ಥವಾಗಬಹುದು ಎಂಬ ಅಭಿಪ್ರಾಯವು ಕೇಳಿಬರುತ್ತಿದೆ. ಆದರೆ, ಈ ಎಲ್ಲಾ ಸಂಶಯಗಳಿಗೆ ಲಸಿಕೆ ತಯಾರಿಕಾ ಕಂಪನಿ ಬಯೋಎನ್ಟೆಕ್ (BioNTech) ಮುಖ್ಯಸ್ಥ ಉಗುರ್ ಸಹಿನ್ ತೆರೆ ಎಳೆದಿದ್ದಾರೆ.
ಬಯೋಎನ್ಟೆಕ್ ಸಂಸ್ಥೆ ತಯಾರಿಸಿದ ಕೊರೊನಾ ಲಸಿಕೆ ರೂಪಾಂತರಗೊಂಡ ವೈರಾಣು ವಿರುದ್ಧವೂ ಪರಿಣಾಮಕಾರಿ ಎಂದು ಉಗುರ್ ಸಹಿನ್ ಭರವಸೆ ವ್ಯಕ್ತಪಡಿಸಿದ್ದಾರೆ. ಸದ್ಯ ಹೊಸ ಪ್ರಭೇದದ ಕೊರೊನಾ ಕುರಿತು ಅಧ್ಯಯನ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರ ಅಧಿಕೃತವಾಗಿ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಫೈಜರ್-ಬಯೋಎನ್ಟೆಕ್ ತಯಾರಿಸಿದ ಲಸಿಕೆ ಕುರಿತು ನಮಗೆ ಭರವಸೆ ಇದೆ. ಕೊರೊನಾ ವೈರಾಣು ರೂಪಾಂತರಗೊಂಡರೂ ಮೊದಲಿನ ವೈರಾಣುವಿನಲ್ಲಿದ್ದ ಶೇ.99ರಷ್ಟು ಪ್ರೋಟೀನ್ ಅಂಶವನ್ನು ಇದು ಹೊಂದಿರುತ್ತದೆ. ಆದ್ದರಿಂದ, ಈಗಾಗಲೇ ತಯಾರಾದ ಕೊರೊನಾ ಲಸಿಕೆಯು ಹೊಸ ಮಾದರಿಯ ವೈರಾಣುವಿನ ವಿರುದ್ಧ ಪರಿಣಾಮಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಕೊರೊನಾ ಹುಟ್ಟಿದ ಚೀನಾದಲ್ಲೇ ಲಸಿಕೆ ಸಿದ್ಧಪಡಿಸುತ್ತಿದೆಯೇ ಫೈಜರ್? ವೈರಲ್ ಆಯ್ತು ಫೋಟೋ
Published On - 5:04 pm, Tue, 22 December 20