ಇಂದು ಮಹತ್ತರ ನಿರ್ಧಾರ.. ಫೈಜರ್​, ಬಯೋಎನ್​ಟೆಕ್​ ಲಸಿಕೆಗೆ ಫ್ರಾನ್ಸ್ ಅಸ್ತು ಅನ್ನಲಿದೆಯಾ?

| Updated By: ಸಾಧು ಶ್ರೀನಾಥ್​

Updated on: Dec 24, 2020 | 11:59 AM

ಪ್ರಸ್ತುತ ಯುರೋಪ್​ ಫೈಜರ್​, ಬಯೋಎನ್​ಟೆಕ್​ ಸಂಸ್ಥೆಯ ಕೊರೊನಾ ಲಸಿಕೆ ವಿತರಣೆಗೆ ಸೋಮವಾರದಂದು ಅಸ್ತು ಎಂದಿದೆ. ಫ್ರಾನ್ಸ್​ ಸಹ ಯುರೋಪ್​ ಹೆಜ್ಜೆಯನ್ನೇ ಅನುಸರಿಸುವ ಸಾಧ್ಯತೆ ಇರುವುದರಿಂದ ಕೆಲವೇ ದಿನಗಳಲ್ಲಿ ಕೊರೊನಾ ಲಸಿಕೆಗೆ ಅನುಮತಿ ಸಿಗಬಹುದು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇಂದು ಮಹತ್ತರ ನಿರ್ಧಾರ.. ಫೈಜರ್​, ಬಯೋಎನ್​ಟೆಕ್​ ಲಸಿಕೆಗೆ ಫ್ರಾನ್ಸ್ ಅಸ್ತು ಅನ್ನಲಿದೆಯಾ?
ಪ್ರಾತಿನಿಧಿಕ ಚಿತ್ರ
Follow us on

ಫೈಜರ್​, ಬಯೋಎನ್​ಟೆಕ್​ ಸಂಸ್ಥೆ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆ ವಿತರಣೆಗೆ ಅನುಮತಿ ನೀಡುವ ಕುರಿತು ಫ್ರಾನ್ಸ್​ ಇಂದು ನಿರ್ಧರಿಸಲಿದೆ. ಈ ಬಗ್ಗೆ ಫ್ರೆಂಚ್​ ಆರೋಗ್ಯ ನಿರ್ವಹಣಾ ಮಂಡಳಿ ಮಾಧ್ಯಮಗಳಿಗೆ ವಿವರಣೆ ನೀಡಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಫ್ರಾನ್ಸ್ ದೇಶದಲ್ಲಿ ಡಿಸೆಂಬರ್​ 26ರಿಂದ ಕೊರೊನಾ ಲಸಿಕೆ ವಿತರಿಸುವ ಯೋಚನೆ ಇದೆ.

ಪ್ರಸ್ತುತ ಯುರೋಪ್​ ಫೈಜರ್​, ಬಯೋಎನ್​ಟೆಕ್​ ಸಂಸ್ಥೆಯ ಕೊರೊನಾ ಲಸಿಕೆ ವಿತರಣೆಗೆ ಸೋಮವಾರದಂದು ಅಸ್ತು ಎಂದಿದೆ. ಫ್ರಾನ್ಸ್​ ಸಹ ಯುರೋಪ್​ ಹೆಜ್ಜೆಯನ್ನೇ ಅನುಸರಿಸುವ ಸಾಧ್ಯತೆ ಇರುವುದರಿಂದ ಕೆಲವೇ ದಿನಗಳಲ್ಲಿ ಕೊರೊನಾ ಲಸಿಕೆಗೆ ಅನುಮತಿ ಸಿಗಬಹುದು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಈ ನಡುವೆ, ಬ್ರಿಟನ್​ನಲ್ಲಿ ರೂಪಾಂತರಗೊಂಡು ಅತಿವೇಗವಾಗಿ ಹರಡುತ್ತಿರುವ ಹೊಸಾ ಕೊರೊನಾ ವೈರಾಣು ಇದುವರೆಗೆ ಫ್ರಾನ್ಸ್​ನಲ್ಲಿ ಕಂಡುಬಂದಿಲ್ಲ. ಆದ್ದರಿಂದ ಫ್ರಾನ್ಸ್ ಜನತೆ ಭಯಪಡಬೇಕಾದ ಅಗತ್ಯ ಇಲ್ಲ ಎಂದು ಆರೋಗ್ಯಾಧಿಕಾರಿಗಳು ಧೈರ್ಯ ನೀಡಿದ್ದಾರೆ.

ಭಾರತ್​ ಬಯೋಟೆಕ್​ ಕೊರೊನಾ ಲಸಿಕೆ ಬಗ್ಗೆ ಹೆಚ್ಚಿದ ವಿಶ್ವಾಸ: ಕೊವ್ಯಾಕ್ಸಿನ್ ಶೀಘ್ರದಲ್ಲೇ ವಿತರಣೆ?