AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026 Auction: ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

IPL Auction 2026: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (ಐಪಿಎಲ್ 2026) ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ಜರುಗಲಿರುವ ಈ ಹರಾಜಿನಲ್ಲಿ 369 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಇವರಲ್ಲಿ ಗರಿಷ್ಠ 77 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ. ಏಕೆಂದರೆ 10 ಫ್ರಾಂಚೈಸಿಗಳಲ್ಲಿ ಒಟ್ಟು 77 ಸ್ಥಾನಗಳು ಮಾತ್ರ ಖಾಲಿಯಿದ್ದು, ಈ ಸ್ಥಾನಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ.

ಝಾಹಿರ್ ಯೂಸುಫ್
|

Updated on: Dec 16, 2025 | 9:30 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜು ಇಂದು (ಡಿ.16) ನಡೆಯಲಿದೆ. 10 ಫ್ರಾಂಚೈಸಿಗಳ ನಡುವೆ ನಡೆಯಲಿರುವ ಈ ಹರಾಜಿನಲ್ಲಿ ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

1 / 11
ಚೆನ್ನೈ ಸೂಪರ್ ಕಿಂಗ್ಸ್​: ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಹರಾಜಿಗೂ ಮುನ್ನ 12 ಆಟಗಾರರನ್ನು ಬಿಡುಗಡೆ ಮಾಡಿದೆ. ಅದರಂತೆ ಇದೀಗ 43.40 ಕೋಟಿ ರೂ. ಹರಾಜು ಮೊತ್ತ ಹೊಂದಿರುವ ಸಿಎಸ್​ಕೆ ಒಟ್ಟು 9 ಆಟಗಾರರನ್ನು ಖರೀದಿಸಬಹುದು. ಇದರಲ್ಲಿ ನಾಲ್ವರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಬಹುದು. ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5 ಭಾರತೀಯ ಹಾಗೂ 4 ವಿದೇಶಿ ಆಟಗಾರರನ್ನು ಆಯ್ಕೆ ಮಾಡಲು ಅವಕಾಶವಿದೆ.

2 / 11
ಮುಂಬೈ ಇಂಡಿಯನ್ಸ್: ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಒಟ್ಟು 10 ಆಟಗಾರರನ್ನು ಬಿಡುಗಡೆ ಮಾಡಿದ್ದಾರೆ. ಇದೀಗ 20 ಆಟಗಾರರನ್ನು ಹೊಂದಿರುವ ಮುಂಬೈ ಇಂಡಿಯನ್ಸ್​ಗೆ ಇನ್ನೂ 5 ಪ್ಲೇಯರ್ಸ್​ಗಳನ್ನು ಆಯ್ಕೆ ಮಾಡಲು ಅವಕಾಶವಿದೆ. ಅದರಂತೆ 2.75 ಕೋಟಿ ರೂ. ಹರಾಜು ಮೊತ್ತದಲ್ಲಿ ಮುಂಬೈ ಇಂಡಿಯನ್ಸ್ ನಾಲ್ವರು ಭಾರತೀಯರು ಹಾಗೂ ಓರ್ವ ವಿದೇಶಿ ಆಟಗಾರನನ್ನು ಖರೀದಿಸಬಹುದು.

3 / 11
ಸನ್​​ರೈಸರ್ಸ್ ಹೈದರಾಬಾದ್: ಎಸ್​ಆರ್​​ಹೆಚ್ ಫ್ರಾಂಚೈಸಿಯು 10 ಆಟಗಾರರನ್ನು ಬಿಡುಗಡೆ ಮಾಡಿದ್ದಾರೆ. ಅದರಂತೆ ಇದೀಗ 25.50 ಕೋಟಿ ರೂ. ಹೊಂದಿರುವ ಸನ್​ರೈಸರ್ಸ್ ಹೈದರಾಬಾದ್​ 10 ಆಟಗಾರರನ್ನು ಖರೀದಿಸಬಹುದು. ಈ ಹತ್ತರಲ್ಲಿ ಇಬ್ಬರು ವಿದೇಶಿ ಆಟಗಾರರನ್ನು ಕೂಡ ಆಯ್ಕೆ ಮಾಡಬಹುದು.

4 / 11
ಪಂಜಾಬ್ ಕಿಂಗ್ಸ್​: ಐಪಿಎಲ್ ರಿಟೆನ್ಷನ್ ವೇಳೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಒಟ್ಟು 6 ಆಟಗಾರರನ್ನು ರಿಲೀಸ್ ಮಾಡಿದ್ದಾರೆ. ಇದೀಗ 21 ಆಟಗಾರರ ಬಳಗವನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ಹರಾಜಿನ ಮೂಲಕ 11.50 ಕೋಟಿಯಲ್ಲಿ ಒಟ್ಟು ನಾಲ್ವರನ್ನು ಖರೀದಿಸಬಹುದು. ಇದರಲ್ಲಿ ಇಬ್ಬರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಲು ಅವಕಾಶವಿದೆ.

5 / 11
ರಾಜಸ್ಥಾನ್ ರಾಯಲ್ಸ್: ಆರ್​ಆರ್​ ಫ್ರಾಂಚೈಸಿಯು ಒಟ್ಟು 9 ಸ್ಲಾಟ್​​ಗಳನ್ನು ಹೊಂದಿದೆ. ಇದೀಗ 14 ಆಟಗಾರರೊಂದಿಗೆ 16.05 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ರಾಜಸ್ಥಾನ್ ರಾಯಲ್ಸ್ ಹರಾಜಿನ ಮೂಲಕ 8 ಭಾರತೀಯ ಹಾಗೂ ಓರ್ವ ವಿದೇಶಿ ಆಟಗಾರನನ್ನು ಖರೀದಿಸಬಹುದು.

6 / 11
ಲಕ್ನೋ ಸೂಪರ್ ಜೈಂಟ್ಸ್​: ಎಸ್​ಎಲ್​ಜಿ ಫ್ರಾಂಚೈಸಿಯು ಮಿನಿ ಹರಾಜಿನ ಮೂಲಕ 6 ಆಟಗಾರರನ್ನು ಖರೀದಿಸಬಹುದು. 22.95 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ಲಕ್ನೋ ಸೂಪರ್ ಜೈಂಟ್ಸ್​  ತಂಡಕ್ಕೆ ನಾಲ್ವರು ವಿದೇಶಿ ಹಾಗೂ ಇಬ್ಬರು ಭಾರತೀಯರನ್ನು ಆಯ್ಕೆ ಮಾಡಲು ಅವಕಾಶವಿದೆ.

7 / 11
ಕೊಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ಫ್ರಾಂಚೈಸಿಯು 9 ಆಟಗಾರರನ್ನು ಬಿಡುಗಡೆ ಮಾಡಿದ್ದಾರೆ. ಇದೀಗ 12 ಆಟಗಾರರ ಬಳಗವನ್ನು ಹೊಂದಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ ಒಟ್ಟು 13 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಅದರಂತೆ 64.30 ಕೋಟಿ ರೂ.ನಲ್ಲಿ ಕೆಕೆಆರ್ 6 ವಿದೇಶಿ ಆಟಗಾರರು ಹಾಗೂ 7 ಭಾರತೀಯ ಆಟಗಾರರನ್ನು ಖರೀದಿಸಬಹುದು.

8 / 11
ಗುಜರಾತ್ ಟೈಟಾನ್ಸ್​: ಜಿಟಿ ಫ್ರಾಂಚೈಸಿಯು ಮಿನಿ ಹರಾಜಿಗೂ ಮುನ್ನ 5 ಆಟಗಾರರನ್ನು ಬಿಡುಗಡೆ ಮಾಡಿದ್ದಾರೆ. ಅದರಂತೆ ಇದೀಗ 12.90 ಕೋಟಿ ರೂ. ಹರಾಜು ಮೊತ್ತ ಹೊಂದಿರುವ ಗುಜರಾತ್ ಟೈಟಾನ್ಸ್ ನಾಲ್ವರು ವಿದೇಶಿ ಹಾಗೂ ಓರ್ವ ಭಾರತೀಯ ಆಟಗಾರನನ್ನು ಖರೀದಿಸಬಹುದು.

9 / 11
ಡೆಲ್ಲಿ ಕ್ಯಾಪಿಟಲ್ಸ್​: ಡಿಸಿ ಫ್ರಾಂಚೈಸಿಯು ಒಟ್ಟು 7 ಆಟಗಾರರನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ 21.80 ಕೋಟಿ ರೂ. ಹರಾಜು ಮೊತ್ತ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್​ಗೆ 8 ಆಟಗಾರರನ್ನು ಆಯ್ಕೆ ಮಾಡಲು ಅವಕಾಶವಿದೆ. ಈ ಸ್ಲಾಟ್​ಗಳಲ್ಲಿ ಐವರು ವಿದೇಶಿ ಹಾಗೂ ಮೂವರು ಭಾರತೀಯ ಆಟಗಾರರನ್ನು ಆಯ್ಕೆ ಮಾಡಬಹುದು.

10 / 11
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್​ಸಿಬಿ ಫ್ರಾಂಚೈಸಿಯು ಒಟ್ಟು 8 ಆಟಗಾರರನ್ನು ಬಿಡುಗಡೆ ಮಾಡಿದೆ. ಇದೀಗ 17 ಸದಸ್ಯರುಗಳ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 16.40 ಕೋಟಿ ರೂ. ಹರಾಜು ಮೊತ್ತದಲ್ಲಿ 8 ಆಟಗಾರರನ್ನು ಖರೀದಿಸಬಹುದು. ಈ ಎಂಟು ಆಟಗಾರರಲ್ಲಿ ಇಬ್ಬರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಲು ಆರ್​ಸಿಬಿಗೆ ಅವಕಾಶವಿದೆ.

11 / 11
Follow Us
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು

ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ

ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ

ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ

ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ

ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ

ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ

ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ

ಆ.13ರಂದು ಕರ್ನಾಟಕ ಬಂದ್​​ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?

ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆಶಿ, ಕಾರಣ?