AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯೋತ್ಪಾದನೆ ವಿರುದ್ಧ ಜೋರ್ಡಾನ್ ಗಟ್ಟಿ ಸಂದೇಶ ರವಾನಿಸಿದೆ; ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಭಯೋತ್ಪಾದನೆ ವಿರುದ್ಧ ಜೋರ್ಡಾನ್ ಗಟ್ಟಿ ಸಂದೇಶ ರವಾನಿಸಿದೆ; ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಸುಷ್ಮಾ ಚಕ್ರೆ
|

Updated on:Dec 15, 2025 | 11:10 PM

Share

ರಾಜ ಅಬ್ದುಲ್ಲಾ II ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಎರಡು ದಿನಗಳ ಭೇಟಿಗಾಗಿ ಜೋರ್ಡಾನ್‌ಗೆ ತೆರಳಿದ್ದಾರೆ. ಮೋದಿಯನ್ನು ರಾಜ ಅಬ್ದುಲ್ಲಾ II ಆತ್ಮೀಯವಾಗಿ ಬರಮಾಡಿಕೊಂಡರು. ಮೂರು ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿರುವ ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ಆಗಮಿಸಿದ ಪ್ರಧಾನಿ ಮೋದಿ, ಜೋರ್ಡಾನ್‌ಗೆ ತಮ್ಮ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹೆಚ್ಚಿಸುತ್ತದೆ ಎಂದು ಈ ಹಿಂದೆ ಹೇಳಿದ್ದರು.

ನವದೆಹಲಿ, ಡಿಸೆಂಬರ್ 15: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಸಂಜೆ ಜೋರ್ಡಾನ್‌ನ ರಾಜ ಅಬ್ದುಲ್ಲಾ II ಇಬ್ನ್ ಅಲ್ ಹುಸೇನ್ ಅವರನ್ನು ಅಮ್ಮನ್‌ನ ಹುಸೇನಿಯಾ ಅರಮನೆಯಲ್ಲಿ ಭೇಟಿಯಾಗಿ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ವಿಷಯಗಳ ಬಗ್ಗೆ ಚರ್ಚಿಸಿದರು. ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜ ಅಬ್ದುಲ್ಲಾ II ಅವರ ನೇತೃತ್ವದಲ್ಲಿ ಜೋರ್ಡಾನ್ ಭಯೋತ್ಪಾದನೆ, ಉಗ್ರವಾದ ಮತ್ತು ಮೂಲಭೂತವಾದದ ವಿರುದ್ಧ ಬಲವಾದ ಮತ್ತು ಕಾರ್ಯತಂತ್ರದ ಸಂದೇಶವನ್ನು ರವಾನಿಸಿದೆ ಎಂದು ಹೇಳಿದರು.

“2018 ರಲ್ಲಿ ನೀವು ಭಾರತಕ್ಕೆ ಭೇಟಿ ನೀಡಿದಾಗ, ನಾವು ಇಸ್ಲಾಮಿಕ್ ಪರಂಪರೆಯ ಕುರಿತಾದ ಸಮ್ಮೇಳನದಲ್ಲಿ ಭಾಗವಹಿಸಿದ್ದೆವು. 2015ರಲ್ಲಿ ವಿಶ್ವಸಂಸ್ಥೆಯ ಸಂದರ್ಭದಲ್ಲಿ, ಹಿಂಸಾತ್ಮಕ ಉಗ್ರವಾದವನ್ನು ಎದುರಿಸುವ ಬಗ್ಗೆ ಕೇಂದ್ರೀಕರಿಸಿದ ಕಾರ್ಯಕ್ರಮದಲ್ಲಿ ನಮ್ಮ ಮೊದಲ ಸಭೆಯೂ ನಡೆದಿತ್ತು ಎಂದು ನಾನು ನೆನಪಿಸಿಕೊಳ್ಳುತ್ತೇನೆ. ಆಗಲೂ, ನೀವು ಈ ವಿಷಯದ ಬಗ್ಗೆ ಸ್ಪೂರ್ತಿದಾಯಕ ಹೇಳಿಕೆಗಳನ್ನು ನೀಡಿದ್ದೀರಿ” ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 15, 2025 11:07 PM