ಲಾಹೋರ್: ಪಾಕಿಸ್ತಾನದ ಲಾಹೋರ್ನ ಜನವಸತಿ ಪ್ರದೇಶದಲ್ಲಿ ಸ್ಫೋಟಗೊಂಡ ಪರಿಣಾಮ ಇಬ್ಬರು ಮೃತಪಟ್ಟಿದ್ದು, 17 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮುಂಬೈ ಉಗ್ರದಾಳಿಯ ಮಾಸ್ಟರ್ ಮೈಂಡ್ ಆಗಿರುವ, ಜಮಾತ್ ಉದ್ ದವಾಹ್ ಸಂಘಟನೆ ಮುಖ್ಯಸ್ಥ ಹಫೀಜ್ ಮಹಮ್ಮದ್ ಸೈಯದ್ನ ಜೋಹಾರ್ ಪಟ್ಟಣದಲ್ಲಿರುವ ನಿವಾಸದ ಸಮೀಪವೇ ಸ್ಫೋಟಗೊಂಡಿದ್ದಾಗಿ ವರದಿಯಾಗಿದೆ.
ಸ್ಥಳದಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ. ಅಲ್ಲಿ ನಿಜಕ್ಕೂ ನಡೆದಿದ್ದೇನು ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಕೂಡ ಆಗಮಿಸಿದೆ ಎಂದು ಲಾಹೋರ್ ಕ್ಯಾಪಿಟಲ್ ಸಿಟಿ ಪೊಲೀಸ್ ಅಧಿಕಾರಿ ಗುಲಾಮ್ ಮಹಮ್ಮದ್ ಡೋಗರ್ ಹೇಳಿದ್ದಾರೆ.
ಪಾಕಿಸ್ತಾನ ಪಂಜಾಬ್ನ ಮುಖ್ಯಮಂತ್ರಿ ಉಸ್ಮಾನ್ ಸ್ಫೋಟದ ಬಗ್ಗೆ ಪೊಲೀಸರಿಂದ ವರದಿ ಕೇಳಿದ್ದಾರೆ. ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಬೇಕು ಎಂದು ಸೂಚಿಸಿದ್ದಾರೆ. ಇದರೊಂದಿಗೆ ಕೇಂದ್ರ ಆಂತರಿಕ ವ್ಯವಹಾರಗಳ ಸಚಿವ ಶೇಖ್ ರಶೀದ್ ಅವರೂ ಘಟನೆಯ ವಿವರ ಪಡೆದಿದ್ದಾರೆ. ಬ್ಲಾಸ್ಟ್ ಸಂಬಂಧ ತನಿಖೆ ನಡೆಸಲು ಲಾಹೋರ್ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದೂ ಹೇಳಿದ್ದಾರೆ.
Blast near Mumbai terror attack mastermind Hafiz Saeed In Pakistan