Surname: ಗಂಡ ಹೆಂಡತಿಯರಿಗೆ ಪ್ರತ್ಯೇಕ ಸರ್ನೇಮ್ ಹೊಂದಲು ಅವಕಾಶ ಕೊಡಿ ಎಂಬ ಅರ್ಜಿಯನ್ನು ತಿರಸ್ಕರಿಸಿದ ಜಪಾನ್ ನ್ಯಾಯಾಲಯ
ಜಪಾನ್ನ ಸಾರ್ವಜನಿಕರಲ್ಲಿ ಗಂಡ ಹೆಂಡಿರು ಪ್ರತ್ಯೇಕ ಸರ್ನೇಮ್ ಹೊಂದುವ ಬಗ್ಗೆ ಒಲವು ಹೆಚ್ಚುತ್ತಿದೆ. ಜಪಾನ್ನಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾನೂನು ಗಂಡನ ಸರ್ನೇಮ್ನ್ನೇ ಹೆಂಡತಿಯೂ ಇಟ್ಟುಕೊಳ್ಳಬೇಕು ಎಂದು ಹೇಳದೇ ಇದ್ದರೂ, ಶೇಕಡಾ 96ರಷ್ಟು ದಂಪತಿಗಳು ಗಂಡನ ಸರ್ನೇಮ್ ಅನ್ನೇ ಹೆಂಡತಿಗೆ ಇಟ್ಟುಕೊಳ್ಳುವ ಸಂಪ್ರದಾಯ ಹೊಂದಿದ್ದಾರೆ.
ಟೋಕಿಯೋ: ಮದುವೆಯ ನಂತರ ಮಹಿಳೆಯರು ಸರ್ನೇಮ್ ಬದಲಿಸುವುದು ಸರಿಯಲ್ಲ ಎಂದು ವಾದಿಸಿದ್ದ ಅರ್ಜಿಯೊಂದನ್ನು ಜಪಾನಿನ ಉನ್ನತ ಮಟ್ಟದ ನ್ಯಾಯಾಲಯ ತಿರಸ್ಕರಿಸಿದೆ. ಜಪಾನಿನ ಕಾನೂನುಗಳ ಪ್ರಕಾರ ಮದುವೆಯ ನಂತರ ದಂಪತಿಗಳು ಒಂದೇ ಕುಟುಂಬದ ಹೆಸರನ್ನು ಇಟ್ಟುಕೊಳ್ಳಬೇಕಿದ್ದು, ಇದನ್ನು ಪ್ರಶ್ನಿಸಿ ಮೂರು ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಜಪಾನ್ ನ್ಯಾಯಾಲಯ ತಿರಸ್ಕರಿಸಿ ಗಂಡ ಹೆಂಡತಿ ಇಬ್ಬರೂ ಒಂದೇ ಸರ್ನೇಮ್ ಇಟ್ಟುಕೊಳ್ಖಬೇಕು ಎಂದು ಆದೇಶಿಸಿದೆ.
ಈ ಅರ್ಜಿ ಸಲ್ಲಿಸಿದ್ದ ದಂಪತಿಗಳು ಮದುವೆಯ ನಂತರ ಗಂಡ ಮತ್ತು ಹೆಂಡತಿ ಇಬ್ಬರೂ ಪ್ರತ್ಯೇಕ ಸರ್ನೇಮ್ನ್ನು ಇಟ್ಟುಕೊಳ್ಳಲು ಅನುಮತಿ ನೀಡದೇ ಇರುವುದು ತಾರತಮ್ಯದ ನಡೆಯಾಗಿದೆ ಎಂದು ವಾದಿಸಿದ್ದರು. ಆದರೆ ಅವರ ವಾದವನ್ನು ತಳ್ಳಿಹಾಕಿರುವ ಕೋರ್ಟ್ನ ಆದೇಶ ಜಪಾನ್ನಲ್ಲಿ ಇತ್ತೀಚಿಗೆ ಮುನ್ನೆಲೆಗೆ ಬರುತ್ತಿರುವ ಸಿದ್ಧಾಂತಕ್ಕೆ ಹಿನ್ನೆಡೆ ಉಂಟುಮಾಡಿದೆ. ಜಪಾನ್ನಲ್ಲಿ ಅಸ್ತಿತ್ವದಲ್ಲಿರುವ ಗಂಡ ಹೆಂಡತಿ ಇಬ್ಬರೂ ಒಂದೇ ಸರ್ನೇಮ್ ಹೊಂದಿರಬೇಕೆಂಬ ಕಾನೂನು ಲಿಂಗ ಸಮಾನತೆಯನ್ನು ಸಾಧಿಸುವಲ್ಲಿ ಬಲವಾದ ಪೆಟ್ಟು ನೀಡುತ್ತದೆ ಎಂದು ಈ ಅರ್ಜಿ ಸಲ್ಲಿಸಿದ್ದ ದಂಪತಿ ವಾದಿಸಿದ್ದರು.
ಮೂರು ದಂಪತಿಗಳು ಪ್ರತ್ಯೇಕ ಸರ್ನೇಮ್ಗಳೊಂದಿಗೆ ತಮ್ಮ ಮದುವೆಯನ್ನು ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ಈ ಕಾನೂನನ್ನು ವಿರೋಧಿಸಿ ಅರ್ಜಿ ಸಲ್ಲಿಸಿದ್ದರು. ಜಪಾನ್ನ ಸಾರ್ವಜನಿಕರಲ್ಲಿ ಗಂಡ ಹೆಂಡಿರು ಪ್ರತ್ಯೇಕ ಸರ್ನೇಮ್ ಹೊಂದುವ ಬಗ್ಗೆ ಒಲವು ಹೆಚ್ಚುತ್ತಿದೆ. ಜಪಾನ್ನಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾನೂನು ಗಂಡನ ಸರ್ನೇಮ್ ಅನ್ನೇ ಹೆಂಡತಿಯೂ ಇಟ್ಟುಕೊಳ್ಳಬೇಕು ಎಂದು ಹೇಳದೇ ಇದ್ದರೂ, ಶೇಕಡಾ 96ರಷ್ಟು ದಂಪತಿ ಗಂಡನ ಸರ್ನೇಮ್ ಅನ್ನೇ ಹೆಂಡತಿಗೆ ಇಟ್ಟುಕೊಳ್ಳುವ ಸಂಪ್ರದಾಯ ಹೊಂದಿದ್ದಾರೆ.
ಜಪಾನ್ನ ಕೆಲವು ಜನಪ್ರತಿನಿಧಿಗಳು ಈ ಬಗ್ಗೆ ತಟಸ್ಥ ನಿಲುವು ತಳೆದಿದ್ದಾರೆ. ಯಾವ ಸರ್ನೇಮ್ನ್ನು ಬಳಸಬೇಕು ಎಂಬುದನ್ನು ದಂಪತಿಗಳಿಗೇ ಬಿಡುವುದೊಳಿತು ಎಂದು ತಟಸ್ಥ ನಿಲುವು ಹೊಂದಿರುವ ಜನಪ್ರತಿನಿಧಿಗಳು ಪ್ರತಿಪಾದಿಸುತ್ತಾರೆ. ಆದರೆ ಸದ್ಯ ಆಡಳಿತ ನಡೆಸುತ್ತಿರುವ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಮಾತ್ರ ಇದನ್ನು ವಿರೋಧಿಸಿದೆ. ಗಂಡ ಹೆಂಡತಿಯರು ಪ್ರತ್ಯೇಕ ಸರ್ನೇಮ್ ಹೊಂದುವುದು ಕುಟುಂಬದ ಒಗ್ಗಟ್ಟು ಮತ್ತು ಸಂಪ್ರದಾಯಕ್ಕೆ ವಿರೋಧವಾದದ್ದು ಎಂದು ಎಲ್ಡಿಪಿ ವಾದಿಸಿದೆ.
ಇದನ್ನೂ ಓದಿ: ಪ್ಯಾಲಸ್ಟೀನ್ಗೆ 10 ಲಕ್ಷ ಕೊವಿಡ್ ಲಸಿಕೆ ಕಳಿಸಲು ಇಸ್ರೇಲ್ ಸಮ್ಮತಿ: ಎಕ್ಸ್ಪೈರಿ ದಿನಕ್ಕೆ ಹತ್ತಿರದ್ದು ಎಂಬುದೇ ವಿಪರ್ಯಾಸ
Explainer: ಇರಾನ್ ನೂತನ ಅಧ್ಯಕ್ಷ ಇಬ್ರಾಹಿಂ ರೈಸಿ ಯಾರು? ಅಲ್ಲಿನ ಜನರೇಕೆ ಈ ಬಾರಿ ಮತದಾನಕ್ಕೆ ಹಿಂಜರಿದರು?
(Japan Court says married couple must have one surname)