ಲಿಬಿಯಾ ಕರಾವಳಿಯಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ವಲಸಿಗರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಈ ಮಾಹಿತಿ ನೀಡಿದೆ. ಲಿಬಿಯಾದ ವಾಯುವ್ಯ ಕರಾವಳಿಯಲ್ಲಿರುವ ಜುವಾರಾದಿಂದ ಹೊರಟ ವಲಸಿಗರು ಹೆಚ್ಚಿನ ಅಲೆಗಳ ಹೊಡೆತದಿಂದಾಗಿ ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ.
ನೈಜೀರಿಯಾ, ಗ್ಯಾಂಬಿಯಾ ಮತ್ತು ಇತರ ಆಫ್ರಿಕನ್ ದೇಶಗಳಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ – ಸುಮಾರು 86 ವಲಸಿಗರು ಹಡಗಿನಲ್ಲಿದ್ದರು ಎಂದು ಹೇಳಲಾಗಿದೆ. 25 ಜನರನ್ನು ರಕ್ಷಿಸಲಾಗಿದೆ. ಬದುಕುಳಿದವರೆಲ್ಲರೂ ಉತ್ತಮ ಸ್ಥಿತಿಯಲ್ಲಿದ್ದಾರೆ. ಲಿಬಿಯಾ ಮತ್ತು ಟುನೀಶಿಯಾ ಇಟಲಿಯ ಮೂಲಕ ಯುರೋಪ್ ತಲುಪುವ ಭರವಸೆಯಲ್ಲಿ ಅಪಾಯಕಾರಿ ಸಮುದ್ರ ಪ್ರಯಾಣವನ್ನು ಬೆಳೆಸಿ ಪ್ರಾಣವನ್ನು ಅಪಾಯಕ್ಕೆ ತಂದೊಡ್ಡುತ್ತಿದ್ದಾರೆ.
ಟುನೀಶಿಯಾ ಮತ್ತು ಲಿಬಿಯಾದಿಂದ ಈ ವರ್ಷ 153,000 ಕ್ಕೂ ಹೆಚ್ಚು ವಲಸಿಗರು ಇಟಲಿಗೆ ಆಗಮಿಸಿದ್ದಾರೆ. ಲಿಬಿಯಾದಿಂದ ಇಟಲಿಗೆ ಹೋಗುವ ಮಾರ್ಗದಲ್ಲಿ 750 ಜನರನ್ನು ತುಂಬಿದ ಮೀನುಗಾರಿಕಾ ದೋಣಿ ಆಡ್ರಿಯಾನಾ ಜೂನ್ 14 ರಂದು ನೈಋತ್ಯ ಗ್ರೀಸ್‌ನಲ್ಲಿ ಮುಳುಗಿತ್ತು.
ಮತ್ತಷ್ಟು ಓದಿ: ಉತ್ತರ ಪ್ರದೇಶ: ಗಂಗಾ ನದಿಯಲ್ಲಿ ದೋಣಿ ಮುಳುಗಿ 3 ಮಂದಿ ಸಾವು
ಹಡಗಿನಲ್ಲಿ ಮುಖ್ಯವಾಗಿ ಸಿರಿಯನ್ನರು, ಪಾಕಿಸ್ತಾನಿಗಳು ಮತ್ತು ಈಜಿಪ್ಟಿನವರು ಇದ್ದರು. 104 ಮಂದಿ ಮಾತ್ರ ಬದುಕುಳಿದಿದ್ದು, 82 ಮೃತದೇಹಗಳು ಪತ್ತೆಯಾಗಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ