
ಸಿಡ್ನಿ, ಡಿಸೆಂಬರ್ 15: ಸಿಡ್ನಿ(Sydney)ಯ ಬೊಂಡಿ ಬೀಚ್‌ನಲ್ಲಿ ಪಾಕಿಸ್ತಾನದ ತಂದೆ-ಮಗ ಇಬ್ಬರೂ ಸೇರಿ ಸಾರ್ವಜನಿಕರ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ 12 ಮಂದಿ ಪ್ರಾಣ ಕಳೆದುಕೊಂಡಿದ್ದರು. ಹಾಗೆಯೇ ಈ ಇಬ್ಬರು 6 ಬಂದೂಕುಗಳನ್ನು ಖರೀದಿಸ್ದರು, ಎಲ್ಲದಕ್ಕೂ ಪರವಾನಗಿ ಕೂಡ ಇತ್ತು, ಎಲ್ಲವನ್ನೂ ಈ ದಾಳಿಯಲ್ಲಿ ಬಳಕೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಸ್ಟ್ರೇಲಿಯಾದ ಅತಿದೊಡ್ಡ ನಗರದಲ್ಲಿ ಅತಿ ದೊಡ್ಡ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಬೋಂಡಿ ಬೀಚ್‌ನಲ್ಲಿ ಭಾನುವಾರ ಸಂಜೆ 6.47ಕ್ಕೆ ಗುಂಡಿನ ದಾಳಿ ನಡೆದಿದೆ. ದಾಳಿಕೋರರು ಜನಸಮೂಹದ ಮೇಲೆ ಗುಂಡು ಹಾರಿಸಿ 10 ರಿಂದ 87 ವರ್ಷ ವಯಸ್ಸಿನ 15 ಜನರನ್ನು ಕೊಂದಿದ್ದಾರೆ.
ನಲವತ್ತೆರಡು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ. ಬಂದೂಕುಧಾರಿಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಇಬ್ಬರು ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ. ಹಲ್ಲೆಕೋರರಲ್ಲಿ ಒಬ್ಬ 50 ವರ್ಷದವನಾಗಿದ್ದು, ಅಧಿಕಾರಿಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಆತ ಸಾವನ್ನಪ್ಪಿದ್ದಾನೆ. ಅವನ ಜತೆ ಆತನ ಮಗನೂ ಇದ್ದ, ಅವರು ಪಾಕಿಸ್ತಾನದವರು ಎನ್ನುವ ಮಾಹಿತಿ ಲಭ್ಯವಾಗಿದೆ. ಆಸ್ಟ್ರೇಲಿಯಾದ ಮಾಧ್ಯಮಗಳು ಅವರನ್ನು ಸಾಜಿದ್ ಅಕ್ರಮ್ ಮತ್ತು ಅವರ ಮಗ ನವೀದ್ ಅಕ್ರಮ್ ಎಂದು ಗುರುತಿಸಿವೆ.
ತಂದೆಗೆ ಆರು ಬಂದೂಕುಗಳನ್ನು ಹೊಂದಲು ಪರವಾನಗಿ ನೀಡಲಾಗಿದ್ದು, ಇವೆಲ್ಲವನ್ನೂ ಗುಂಡಿನ ದಾಳಿಯಲ್ಲಿ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನವೀದ್ ಅಕ್ರಮ್ ಯಾರು? ತನಿಖಾಧಿಕಾರಿಗಳು ಶಂಕಿತನನ್ನು ನ್ಯೂ ಸೌತ್ ವೇಲ್ಸ್‌ನ ಅಲ್-ಮುರಾದ್ ಸಂಸ್ಥೆಯ ವಿದ್ಯಾರ್ಥಿ ಎಂದು ಗುರುತಿಸಿದ್ದಾರೆ , ಇದು ಅರೇಬಿಕ್ ಮತ್ತು ಕುರಾನ್ ಅನ್ನು ಕಲಿಸುತ್ತದೆ. ತನಿಖಾಧಿಕಾರಿಗಳು ಅವನ ಶೈಕ್ಷಣಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಪ್ರಸ್ತುತ, ಭಯೋತ್ಪಾದಕ ದಾಳಿಗೂ ಅವನ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಕಂಡುಬಂದಿದೆ.
ಮತ್ತಷ್ಟು ಓದಿ: ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಗುಂಡಿನ ದಾಳಿ ನಡೆಸಿದವರು ಪಾಕಿಗಳು
ನವೀದ್ ಅಕ್ರಮ್ ಸಿಡ್ನಿಯ ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ಇಸ್ಲಾಮಾಬಾದ್‌ನ ಹಮ್ದಾರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದ.ಅಲ್-ಮುರಾದ್ ಸಂಸ್ಥೆಯಲ್ಲಿಯೂ ವ್ಯಾಸಂಗ ಮಾಡಿದ್ದ, ಇತ್ತೀಚೆಗೆ ಆತ ತನ್ನ ಕೆಲಸವನ್ನು ಕಳೆದುಕೊಂಡಿದ್ದ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ. ನೈಋತ್ಯ ಸಿಡ್ನಿಯ ಉಪನಗರವಾದ ಬೋನಿರಿಗ್‌ನಲ್ಲಿರುವ ನವೀದ್ ಅಕ್ರಮ್ ಅವರ ಮನೆಯ ಮೇಲೆ ಭದ್ರತಾ ಸಂಸ್ಥೆಗಳು ದಾಳಿ ನಡೆಸಿವೆ.
ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಶಂಕಿತನ ಕಾರಿನಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ