ಬ್ರೆಜಿಲ್: ಮಗಳನ್ನು ಕೊಂದು, ದೇಹವನ್ನು ಕತ್ತರಿಸಿ ತಿಂಗಳುಗಳ ಕಾಲ ಫ್ರಿಡ್ಜ್​ನಲ್ಲಿಟ್ಟಿದ್ದ ಮಹಿಳೆಯ ಬಂಧನ

|

Updated on: Aug 31, 2023 | 2:35 PM

ಮಗಳನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿರುವ ಆರೋಪದ ಮೇಲೆ ಬ್ರೆಜಿಲ್​ನಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. ಸ್ಥಳೀಯ ಸುದ್ದಿ ವಾಹಿನಿ ನೀಡಿರುವ ಮಾಹಿತಿ ಪ್ರಕಾರ 9 ವರ್ಷದ ಮಗಳನ್ನು ಹತ್ಯೆ ಮಾಡಿ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಸುಮಾರು 3 ತಿಂಗಳವರೆಗೆ ಫ್ರಿಜ್​ನಲ್ಲಿ ಇರಿಸಿದ್ದಳು. 30 ವರ್ಷದ ರುತ್ ಫ್ಲೋರಿಯಾನೊ ಎಂಬ ಮಹಿಳೆಯನ್ನು ಶನಿವಾರ (ಆಗಸ್ಟ್ 26) ಬಂಧಿಸಲಾಗಿದೆ. ಮಾದಕ ದ್ರವ್ಯ ಸೇವಿಸಿ ಬಾಲಕಿಯನ್ನು ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.

ಬ್ರೆಜಿಲ್: ಮಗಳನ್ನು ಕೊಂದು, ದೇಹವನ್ನು ಕತ್ತರಿಸಿ ತಿಂಗಳುಗಳ ಕಾಲ ಫ್ರಿಡ್ಜ್​ನಲ್ಲಿಟ್ಟಿದ್ದ ಮಹಿಳೆಯ ಬಂಧನ
ಪೊಲೀಸ್
Follow us on

ಮಗಳನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿರುವ ಆರೋಪದ ಮೇಲೆ ಬ್ರೆಜಿಲ್​ನಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. ಸ್ಥಳೀಯ ಸುದ್ದಿ ವಾಹಿನಿ ನೀಡಿರುವ ಮಾಹಿತಿ ಪ್ರಕಾರ, 9 ವರ್ಷದ ಮಗಳನ್ನು ಹತ್ಯೆ ಮಾಡಿ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಸುಮಾರು 3 ತಿಂಗಳವರೆಗೆ ಫ್ರಿಜ್​ನಲ್ಲಿ ಇರಿಸಿದ್ದಳು. 30 ವರ್ಷದ ರುತ್ ಫ್ಲೋರಿಯಾನೊ ಎಂಬ ಮಹಿಳೆಯನ್ನು ಶನಿವಾರ (ಆಗಸ್ಟ್ 26) ಬಂಧಿಸಲಾಗಿದೆ. ಮಾದಕ ದ್ರವ್ಯ ಸೇವಿಸಿ ಬಾಲಕಿಯನ್ನು ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.

ಆಕೆಯ ಇಬ್ಬರು ಮಕ್ಕಳು ಈಗ ಪೊಲೀಸರ ಆರೈಕೆಯಲ್ಲಿದ್ದಾರೆ. ಫ್ಲೋರಿಯಾನೋ ತನ್ನ ಮಗಳು ಸಿಲ್ವಾಳಾನ್ನು ಕತ್ತರಿಸಲು ಸುಲಭ ಮಾರ್ಗ ಯಾವುದು ಎಂದು ಗೂಗಲ್​ನಲ್ಲಿ ಸರ್ಚ್​ ಮಾಡಿದ್ದಳು. ಮಹಿಳೆ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದು, ಆತನ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ತಾನು ಆ ವ್ಯಕ್ತಿಯನ್ನು ಭೇಟಿಯಾಗಿದ್ದೆ ಮತ್ತು ಸಿಲ್ವಾ ಕೊಲ್ಲಲ್ಪಟ್ಟ ಅದೇ ಸಮಯದಲ್ಲಿ ಅವನನ್ನು ತನ್ನ ಮನೆಗೆ ಆಹ್ವಾನಿಸಿದ್ದೆ ಎಂದು ಹೇಳಿದ್ದಾಳೆ.

ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ, ಫ್ಲೋರಿಯಾನೊ ಡ್ರಗ್ಸ್ ಸೇವಿಸಿ ಬಾಲಕಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಫ್ಲೋರಿಯಾನೊ ಅವರು ದೇಹದ ಭಾಗಗಳನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿದರು ಮತ್ತು ಅದನ್ನು ಹತ್ತಿರದ ಒಳಚರಂಡಿಗೆ ಎಸೆದಿದ್ದಳು.

ಮತ್ತಷ್ಟು ಓದಿ: ಮುಂಬೈ: ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಆಕೆಯ ತಮ್ಮನನ್ನೇ ಹತ್ಯೆ ಮಾಡಿ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದ ವ್ಯಕ್ತಿಯ ಬಂಧನ

ಆಗಸ್ಟ್​ 6 ರಂದು ಸಿಲ್ವಾಳ ಹುಟ್ಟುಹಬ್ಬ ಅದಕ್ಕೂ ಮೊದಲು ಅಥವಾ ಹುಟ್ಟುಹಬ್ಬದ ಬಳಿಕ ಹತ್ಯೆಯಾಗಿದ್ದಾಳೋ ಎಂಬುದು ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:34 pm, Thu, 31 August 23