ಕ್ಯಾಲಿಫೋರ್ನಿಯಾ(California)ದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ(Earthquake) ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ. ಮೆಕ್ಸಿಕೋದ ಸಿವಿಲ್ ಡಿಫೆನ್ಸ್ ಕಚೇರಿಯು ಭೂಕಂಪ ಸಂಭವಿಸಿದ ಜಾಗದಲ್ಲಿ ಯಾವುದೇ ಅನಾಹುತಗಳಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗೆಯೇ ಕರಾವಳಿ ಹತ್ತಿರದ ಜನರು ಮುನ್ನೆಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ.
ಭೂಕಂಪವು 10 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು EMSC ತಿಳಿಸಿದೆ. ಭೂಕಂಪ ಸಂಭವಿಸಿದ ಸ್ವಲ್ಪ ಸಮಯದ ನಂತರ ಯುಎಸ್ ವೆಸ್ಟ್ ಕೋಸ್ಟ್, ಬ್ರಿಟಿಷ್ ಕೊಲಂಬಿಯಾ ಅಥವಾ ಅಲಾಸ್ಕಾಕ್ಕೆ ಸುನಾಮಿ ಅಪಾಯವಿಲ್ಲ ಎಂದು ಹೇಳಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ