ಹಿಂದು ದೇಗುಲಕ್ಕೆ ಮಂಜೂರಾದ ಜಾಗ ಹಿಂಪಡೆದಿದ್ದ ಪಾಕ್​ ಸಿಡಿಎ; ತೀವ್ರ ಟೀಕೆಯ ಬೆನ್ನಲ್ಲೇ ಮತ್ತೆ ಮಂಜೂರು

| Updated By: Lakshmi Hegde

Updated on: Nov 09, 2021 | 2:36 PM

ಇಸ್ಲಮಾಬಾದ್​​ ಮತ್ತು ಸುತ್ತಲಿನ ನಗರಗಳಲ್ಲಿ ಏನಿಲ್ಲವೆಂದರೂ ಸುಮಾರು 3000 ಹಿಂದೂ ಕುಟುಂಬಗಳು ವಾಸಿಸುತ್ತಿವೆ. ಪಾಕಿಸ್ತಾನದಲ್ಲಿ ಹಿಂದುಗಳು ಅಲ್ಪಸಂಖ್ಯಾತರು. ಇಡೀ ದೇಶದಲ್ಲಿ ಒಟ್ಟಾರೆ 75 ಲಕ್ಷ ಹಿಂದೂಗಳಷ್ಟೇ ವಾಸವಾಗಿದ್ದಾರೆ.

ಹಿಂದು ದೇಗುಲಕ್ಕೆ ಮಂಜೂರಾದ ಜಾಗ ಹಿಂಪಡೆದಿದ್ದ ಪಾಕ್​ ಸಿಡಿಎ; ತೀವ್ರ ಟೀಕೆಯ ಬೆನ್ನಲ್ಲೇ ಮತ್ತೆ ಮಂಜೂರು
ಸಾಂಕೇತಿಕ ಚಿತ್ರ
Follow us on

ಇಸ್ಲಮಾಬಾದ್​​ನಲ್ಲಿ ಹಿಂದೂ ದೇವಸ್ಥಾನ ಕಟ್ಟಿಸಲು ಜಾಗ ಮಂಜೂರು ಮಾಡಿ, ಬಳಿಕ ಅದನ್ನು ರದ್ದುಗೊಳಿಸಿದ್ದ ಪಾಕಿಸ್ತಾನ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ (CDA) ತೀವ್ರ ಟೀಕೆಯ ಬಳಿಕ ತನ್ನ ಆದೇಶವನ್ನು ಹಿಂಪಡೆದಿದೆ.   ಇಸ್ಲಮಾಬಾದ್​​ನ ಸೆಕ್ಟರ್​ ಎಚ್​ 9/12ರಲ್ಲಿ ಹಿಂದೂ ದೇಗುಲ ನಿರ್ಮಾಣಕ್ಕಾಗಿ ಜಾಗವನ್ನು ಮಂಜೂರು ಮಾಡಲಾಗಿತ್ತು. ಅದರೆ ಫೆಬ್ರವರಿಯಲ್ಲಿ ಮತ್ತೆ ಆ ಮಂಜೂರಾತಿಯನ್ನು ರದ್ದುಗೊಳಿಸಲಾಗಿತ್ತು. ಅದಾದ ಬಳಿಕ ವಿವಿಧ ಕಡೆಗಳಿಂತ ತೀವ್ರ ಟೀಕೆ ಕೇಳಿಬಂದಿತ್ತು. ಇಸ್ಲಮಾಬಾದ್​ ಹೈಕೋರ್ಟ್​​ನಲ್ಲಿ ಈ ಸಂಬಂಧ ವಿಚಾರಣೆ ಕೂಡ ನಡೆಯುತ್ತಿತ್ತು. 

ಇಸ್ಲಮಾಬಾದ್​ನ ಹಸಿರು ವಲಯದಲ್ಲಿ ಯಾವುದೇ ಹೊಸ ಕಟ್ಟಡಗಳ ನಿರ್ಮಾಣವನ್ನು ಫೆಡರಲ್​ ಕ್ಯಾಬಿನೆಟ್​ ನಿಷೇಧಿಸಿದ ನಂತರ, ಹಿಂದೂ ದೇವಸ್ಥಾನಕ್ಕೆ ಮಂಜೂರಾಗಿದ್ದ ಜಾಗವನ್ನು ಹಿಂಪಡೆಯಲಾಗಿತ್ತು ಎಂದು ಸಿಡಿಎ ಪರ ವಕೀಲ ಜಾವೇದ್​ ಇಕ್ಬಾಲ್​ ನ್ಯಾಯಾಲಯಕ್ಕೆ ತಿಳಿಸಿದ್ದರು.  ಇಸ್ಲಮಾಬಾದ್​​ ಮತ್ತು ಸುತ್ತಲಿನ ನಗರಗಳಲ್ಲಿ ಏನಿಲ್ಲವೆಂದರೂ ಸುಮಾರು 3000 ಹಿಂದೂ ಕುಟುಂಬಗಳು ವಾಸಿಸುತ್ತಿವೆ. ಪಾಕಿಸ್ತಾನದಲ್ಲಿ ಹಿಂದುಗಳು ಅಲ್ಪಸಂಖ್ಯಾತರು. ಇಡೀ ದೇಶದಲ್ಲಿ ಒಟ್ಟಾರೆ 75 ಲಕ್ಷ ಹಿಂದೂಗಳಷ್ಟೇ ವಾಸವಾಗಿದ್ದಾರೆ. ಅದರಲ್ಲೂ ಹೆಚ್ಚಾಗಿ ಇರುವುದು ಸಿಂಧ್​ ಪ್ರಾಂತ್ಯದಲ್ಲಿ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಿಂದೂ ಮತ್ತು ಇನ್ನಿತರ ಅಲ್ಪಸಂಖ್ಯಾತರ ಮೇಲೆ ದಾಳಿ ಆಗಾಗ ನಡೆಯುತ್ತಿರುತ್ತದೆ. ಹಿಂದೂ ದೇವಾಲಯಗಳ ಧ್ವಂಸದಂತಹ ದುಷ್ಕೃತ್ಯದ ಬಗ್ಗೆಯೂ ವರದಿ ಆಗುತ್ತಿರುತ್ತದೆ.  ಕಳೆದ ವರ್ಷ ಸಿಂಧ್​ನ ಮಾತಾ ರಾಣಿ ಭಟಿಯಾನಿ ಮಂದಿರ, ಖೈಬರ್​ ಪಕ್ತುಂಖ್ವಾ ಪ್ರಾಂತ್ಯದ ಕರಕ್​ನಲ್ಲಿರುವ ಹಿಂದೂ ದೇವಾಲಯ ಸೇರಿ ಹಲವು ದೇವಸ್ಥಾನಗಳ ಮೇಲೆ ದಾಳಿ ನಡೆದಿತ್ತು.

ಇದನ್ನೂ ಓದಿRafale deal ರಾಹುಲ್ ಗಾಂಧಿ ಉತ್ತರಿಸಲಿ: ಹೊಸ ರಫೇಲ್ ವರದಿ ಕುರಿತು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ