ಜಗತ್ತಿನ ಗಮನ ಬೇರೆಡೆ ಸೆಳೆಯಲು ಚೀನಾ ಕುತಂತ್ರ?

|

Updated on: Jun 17, 2020 | 2:40 PM

ಪದೇ ಪದೆ ಎಲ್ಲರ ಜೊತೆಗೂ ಕಿರಿಕ್ ಮಾಡೋ ಡ್ರ್ಯಾಗನ್ ನಾಡು ಚೀನಾ ಯಾರೊಂದಿಗೂ ಉತ್ತಮ ಬಾಂಧವ್ಯವನ್ನ ಹೊಂದಿಲ್ಲ. ಅದರಲ್ಲೂ ನೆರೆಹೊರೆಯ ರಾಷ್ಟ್ರಗಳ ಜತೆ ಸದಾ ಕಿರಿಕಿರಿ ಮಾಡುವ ಡ್ರ್ಯಾಗನ್ ಕಂಡರೆ ಅಂತಾರಾಷ್ಟ್ರೀಯ ಸಮುದಾಯ ಕೂಡ ಉರಿದುರಿದು ಬೀಳ್ತಿದೆ. ಇದು ಚೀನಾವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಬ್ಬಂಟಿಯಾಗಿಸಿದೆ. ಹುಟ್ಟು ಬುದ್ಧಿ ಸುಟ್ಟರೂ ಹೋಗಲ್ಲ ಅನ್ನೋ ಮಾತಿದೆ ನೋಡಿ. ಈ ಡೈಲಾಗ್ ಚೀನಾಗೆ ಪಕ್ಕಾ ಅನ್ವಯಿಸುತ್ತದೆ. ಯಾರ ಜತೆಯಲ್ಲೂ ನೆಮ್ಮದಿಯಾಗಿ ಬದುಕದ ಈ ಸೈಕೋ ಚೀನಾಗೆ ಅದರ ಸೇನೆಯೇ ಮಗ್ಗಲಮುಳ್ಳು. ಅಭಿವೃದ್ಧಿಯತ್ತ […]

ಜಗತ್ತಿನ ಗಮನ ಬೇರೆಡೆ ಸೆಳೆಯಲು ಚೀನಾ ಕುತಂತ್ರ?
Follow us on

ಪದೇ ಪದೆ ಎಲ್ಲರ ಜೊತೆಗೂ ಕಿರಿಕ್ ಮಾಡೋ ಡ್ರ್ಯಾಗನ್ ನಾಡು ಚೀನಾ ಯಾರೊಂದಿಗೂ ಉತ್ತಮ ಬಾಂಧವ್ಯವನ್ನ ಹೊಂದಿಲ್ಲ. ಅದರಲ್ಲೂ ನೆರೆಹೊರೆಯ ರಾಷ್ಟ್ರಗಳ ಜತೆ ಸದಾ ಕಿರಿಕಿರಿ ಮಾಡುವ ಡ್ರ್ಯಾಗನ್ ಕಂಡರೆ ಅಂತಾರಾಷ್ಟ್ರೀಯ ಸಮುದಾಯ ಕೂಡ ಉರಿದುರಿದು ಬೀಳ್ತಿದೆ. ಇದು ಚೀನಾವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಬ್ಬಂಟಿಯಾಗಿಸಿದೆ.

ಹುಟ್ಟು ಬುದ್ಧಿ ಸುಟ್ಟರೂ ಹೋಗಲ್ಲ ಅನ್ನೋ ಮಾತಿದೆ ನೋಡಿ. ಈ ಡೈಲಾಗ್ ಚೀನಾಗೆ ಪಕ್ಕಾ ಅನ್ವಯಿಸುತ್ತದೆ. ಯಾರ ಜತೆಯಲ್ಲೂ ನೆಮ್ಮದಿಯಾಗಿ ಬದುಕದ ಈ ಸೈಕೋ ಚೀನಾಗೆ ಅದರ ಸೇನೆಯೇ ಮಗ್ಗಲಮುಳ್ಳು. ಅಭಿವೃದ್ಧಿಯತ್ತ ದಾಪುಗಾಲು ಇಡುವಾಗಲೇ ಖತರ್ನಾಕ್ ಚೀನಾ ಸೈನಿಕರು ಗಡಿಯಲ್ಲಿ ಪದೇ ಪದೆ ಕಿರಿಕ್ ಮಾಡ್ತಾನೆ ಇದ್ದಾರೆ. ಅತ್ತ ಜಪಾನ್​ನಿಂದ ಇಡಿದು, ರಷ್ಯಾವರೆಗೆ ಎಲ್ಲರ ಜತೆಗೂ ಚೀನಾ ಪದೇ ಪದೆ ಗಡಿ ವಿಚಾರಕ್ಕೆ ಕ್ಯಾತೆ ತೆಗೆಯುತ್ತಲೇ ಇದೆ.

‘ಕೊರೊನಾ’ ಗಿಫ್ಟ್ ಕೊಟ್ಟವರಿಂದ ಭಾರತದ ಜೊತೆ ಗಡಿ ಕಿರಿಕ್
ಚೀನಾದ ವುಹಾನ್​ನಲ್ಲಿ ಜನ್ಮತಾಳಿದ ಕೊರೊನಾ ವೈರಸ್ ಇಡೀ ಜಗತ್ತನ್ನೇ ಹಿಂಡಿ ಹಿಪ್ಪೆ ಮಾಡಿತ್ತು. ಈಗಾಗ್ಲೇ ಲಕ್ಷಾಂತರ ಜನರನ್ನು ಬಲಿಪಡೆದಿರುವ ಕೊರೊನಾ ಹುಟ್ಟೂರು ಇದೇ ಚೀನಾ. ಈ ವೈರಸ್ ಅದೆಷ್ಟು ಡೆಡ್ಲಿ ಅನ್ನೋದು ಗೊತ್ತಿದ್ದರೂ ಚೀನಾ ಮಾತ್ರ ಯಾವುದೇ ಸೀಕ್ರೇಟ್ ರಿವೀಲ್ ಮಾಡಿರಲಿಲ್ಲ. ಇದರ ಪರಿಣಾಮ ವಿಶ್ವದಲ್ಲಿ ಈವರೆಗೂ ಸುಮಾರು 4 ಲಕ್ಷದ 40 ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

ಕೊರೊನಾ ಮೊಳಕೆಯೊಡೆಯುತ್ತಿದ್ದಂತೆ ಇಡೀ ವಿಶ್ವ ಸಮುದಾಯ ಚೀನಾ ಮೇಲೆ ಉರಿದುಬಿದ್ದಿದ್ದವು. ಚೀನಾ ಕಂಡರೆ ವಿಶ್ವದ ಯಾವ ದೇಶಕ್ಕೂ ಆಗ್ತಾನೆ ಇರಲಿಲ್ಲ. ಈ ಹೊತ್ತಲ್ಲೇ ಜಗತ್ತಿನ ಗಮನ ಬೇರೆಡೆ ಸೆಳೆಯಲು ಚೀನಾ ಕುತಂತ್ರ ಮಾಡಿದೆಯಾ ಅನ್ನೋ ಪ್ರಶ್ನೆ ಮೂಡಿದೆ. ಇದೇ ಕಾರಣಕ್ಕೆ ಭಾರತದ ಗಡಿಯಲ್ಲಿ ಚೀನಾ ಕಿರಿಕ್ ಮಾಡಿ, ನಮ್ಮ ಸೈನಿಕರ ಮೇಲೆ ದಾಳಿಯನ್ನೂ ನಡೆಸಿದೆ ಎನ್ನಲಾಗ್ತಿದೆ.

ವಿವಾದಗಳ ಸರದಾರ ‘ಡ್ರ್ಯಾಗನ್’ ನಾಡಿನ ಅಧ್ಯಕ್ಷ!
ಹೌದು ಚೀನಾದ ಅಧ್ಯಕ್ಷ ಜಿನ್​ಪಿಂಗ್ ಮಾಡುತ್ತಿರುವ ಅವಾಂತರಗಳು ಒಂದೆರಡಲ್ಲ. ಇದೇ ಕಾರಣಕ್ಕೆ ಜಿನ್​ಪಿಂಗ್ ಕಂಡ್ರೆ ಸ್ವತಃ ಚೀನಿಯರು ಕೂಡ ಉರಿದುರಿದು ಬೀಳ್ತಾರೆ. ‘ಕೊರೊನಾ’ ನಿಯಂತ್ರಣದ ವೇಳೆ ಚೀನಾ ಸರ್ಕಾರ ಚೀನಿಯರನ್ನು ನಿಕೃಷ್ಟವಾಗಿ ನಡೆಸಿಕೊಂಡಿತ್ತು. ಹಾಗೇ ವಿಶ್ವದ ಇದರ ಜತೆಗೆ ವೈರಸ್​ಗೆ ಸಂಬಂಧಪಟ್ಟ ಮಾಹಿತಿಯನ್ನ ಸರಿಯಾಗಿ ಹಂಚಿಕೊಂಡಿರಲಿಲ್ಲ. ಅಲ್ಲದೆ ಚೀನಾ ಅಧ್ಯಕ್ಷ ಜಿನ್​ಪಿಂಗ್ ಉಡಾಫೆಯ ಮಾತುಗಳನ್ನು ಆಡಿದ್ದರು. ಇದು ಜಿನ್​ಪಿಂಗ್ ವಿರುದ್ಧ ಆಕ್ರೋಶದ ಕಹಳೆ ಮೊಳಗಿಸಿತ್ತು. ಇದೀಗ ಭಾರತದ ಗಡಿಯಲ್ಲಿ ಗಲಾಟೆ ನಡೆದಿರುವುದು, ಜಿನ್​ಪಿಂಗ್ ವಿರುದ್ಧ ಜಾಗತಿಕ ಮಟ್ಟದಲ್ಲಿ ಆಕ್ರೋಶ ಮತಷ್ಟು ಹೆಚ್ಚಾಗುವಂತೆ ಮಾಡಿದೆ.

ಒಟ್ನಲ್ಲಿ ಕೆಟ್ಟಮೇಲೂ ಕೂಡ ನರಿಬುದ್ಧಿ ಚೀನಾ ಬದಲಾಗಲ್ಲ ಅನ್ನೋಕೆ ನಿನ್ನೆ ಜಿನ್​ಪಿಂಗ್ ನೀಡಿದ ಹೇಳಿಕೆಯೇ ಸಾಕ್ಷಿಯಾಗಿದೆ.ಗಡಿಯಲ್ಲಿ ಭಾರತೀಯ ಸೈನಿಕರೇ ಕಿರಿಕ್ ಮಾಡಿದ್ರು ಅಂತಾ ಜಿನ್​ಪಿಂಗ್ ನೀಡಿರುವ ಹೇಳಿಕೆಗೆ ಇಡೀ ಜಗತ್ತು ಬೇಸರ ವ್ಯಕ್ತಪಡಿಸಿದೆ. ಅಲ್ಲದೆ ಚೀನಾ ವಿರುದ್ಧ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಅಸಮಾಧಾನ ಭುಗಿಲೆದ್ದಿದೆ.

Published On - 8:44 am, Wed, 17 June 20