ಚೀನಾ ಅದೇಷ್ಟು ಕಠಿಣ ಮತ್ತು ಹೇಯ ಅನ್ನೋದನ್ನ ಮತ್ತೊಮ್ಮೆ ಸಾಬಿತು ಪಡಿಸಿದೆ. ತನ್ನ ದೇಶಕ್ಕಾಗಿ ಹೋರಾಡಿ ಸಾವನ್ನಪ್ಪಿದ ಸೈನಿಕರನ್ನ ಸದ್ದಿಲ್ಲದೆ ಮಣ್ಣು ಮಾಡಿರುವ ಅದು, ಈ ವಿಷಯವನ್ನ ಯಾರಿಗೂ ಹೇಳದಂತೆ ಸತ್ತ ಸೈನಿಕರ ಕುಟುಂಬಗಳಿಗೆ ವಾರ್ನಿಂಗ್ ಕೊಟ್ಟಿದೆ.
ಹೌದು ಜೂನ್ 15ರ ಕರಾಳ ದಿನದಂದು ಭಾರತ ಮತ್ತು ಚೀನಾ ಸೈನಿಕರ ನಡವೆ ಗಲ್ವಾನ್ ಕಣಿವೆಯಲ್ಲಿ ಭಾರೀ ಹೊರಾಟ ನಡಿದಿತ್ತು. ಗಡಿಯಲ್ಲಿ ನಡೆದ ಉಬಯ ದೇಶಗಳ ಸೈನಿಕರ ಮಾರಾಮಾರಿಯಲ್ಲಿ ಭಾರತದ 20 ಸೈನಿಕರು ವೀರಮರಣವನ್ನಪ್ಪಿದ್ದರು. ಹಾಗೇನೇ ಹಲವಾರು ಸೈನಿಕರು ಗಾಯಗೊಂಡಿದ್ದಾರೆ.
ಸುಮಾರು 35 ಚೀನಾ ಸೈನಿಕರ ಸಾವು?
ಇನ್ನು ಚೀನಾದ ಸುಮಾರು 35 ಸೈನಿಕರು ಈ ಮಾರಾಮಾರಿಯಲ್ಲಿ ಸಾವನ್ನಪ್ಪಿದ್ದಾರೆನ್ನಲಾಗಿದೆ. ಹಾಗೇನೇ ನೂರಾರು ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. ಆದ್ರೆ ಚೀನಾ ಈ ಬಗ್ಗೆ ಎಲ್ಲಿಯೂ ತುಟಿ ಪಿಟಕ್ಕೆನ್ನುತ್ತಿಲ್ಲ. ಸದ್ದಿಲ್ಲದೆ ಸಾವನ್ನಪ್ಪಿದ ತನ್ನ ಸೈನಿಕರನ್ನು ಕಳ್ಳ ರೀತಿಯಲ್ಲಿ ಮಣ್ಣು ಮಾಡಿದೆ. ಇಷ್ಟೆ ಅಲ್ಲ ಈ ಬಗ್ಗೆ ಸತ್ತ ಸೈನಿಕರ ಕುಟುಂಬಗಳಿಗೆ ಸೈನಿಕರು ಸಾವನ್ನಪ್ಪಿದ ಬಗ್ಗೆ ಬಾಯಿ ಬಿಡದಂತೆ ತಾಕೀತು ಮಾಡಿದೆಯನ್ನಲಾಗಿದೆ. ಹಾಗೇನೆ ಸತ್ತ ಸೈನಿಕರಿಗೆ ಶ್ರಾದ್ಧವನ್ನು ಕೂಡಾ ಮಾಡದಂತೆ ಕುಟುಂಬಗಳಿಗೆ ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ.
ಹುತಾತ್ಮ ಸೈನಿಕರಗೆ ಸಲಾಮ್ ಅಂದ ಭಾರತ
ಆದ್ರೆ ಭಾರತ ಮಾತ್ರ ಮಾರಾಮಾರಿಯಲ್ಲಿ ಸಾವನ್ನಪ್ಪಿದ ಭಾರತದ ಸೈನಿಕರನ್ನು ವೀರಯೋಧರೆಂದು ಘೋಷಿಸಿದ್ದಲ್ಲದೇ ಅತ್ಯಂತ ಗೌರವಯುತವಾಗಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರೀಯೆ ನಡೆಸಿತ್ತು. ವೀರ ಮರಣವನ್ನಪ್ಪಿದ್ದ ಯೋಧರ ಕುಟುಂಬಗಳಿಗೆ ಪರಿಹಾರವನ್ನೂ ನೀಡಿದೆ. ಇದಾದ ಕೆಲ ದಿನಗಳ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಲಡಾಖ್‌ಗೆ ತೆರಳಿ ಗಾಯಗೊಂಡ ಸೈನಿಕರ ಯೋಗಕ್ಷೇಮ ವಿಚಾರಿಸಿದ್ದಾರೆ.
ತನ್ನ ಸೈನಿಕರು ಸತ್ತೇ ಇಲ್ಲ ಅಂತಿದೆ ಚೀನಾ
ಆದ್ರೆ ಚೀನಾ ಮಾತ್ರ ತನ್ನ ಸೈನಿಕರು ಸತ್ತೇ ಇಲ್ಲ ಅಂತಾ ವಿತಂಡವಾಗಿ ವಾದಿಸುತ್ತಿದೆ. ಆದ್ರೆ ಚೀನಾದ ಈ ಹೃದಯ ಹೀನ ಧೋರಣೆ ಮಾತ್ರ ಸತ್ತ ಸೈನಿಕರ ಕುಟುಂಬಗಳಿಗೆ ಆಕ್ರೋಶ ತರಿಸಿದೆ. ಈ ಬಗ್ಗೆ ಚೀನಾದ ಸೋಷಿಯಲ್ ಮೀಡಿಯಾಗಳಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ತಮ್ಮ ಆಕ್ರೋಶ ಹೊರಹಾಕಿದ್ದಾರೆಂದು ಅಮೆರಿಕ ಮೂಲದ ಸುದ್ದಿ ಸಂಸ್ಥೆ ಬ್ರೀಯಟ್ ಬಾರ್ಟ್ ವರದಿ ಮಾಡಿದೆ.
Published On - 7:44 pm, Tue, 14 July 20