ಚೀನಾ ಭೂಕಂಪ: ಚೀನಾದಲ್ಲಿ 5.5 ತೀವ್ರತೆಯ ಭೂಕಂಪ, 74 ಮನೆಗಳು ಕುಸಿತ, 21 ಜನರಿಗೆ ಗಾಯ, 10 ಮಂದಿ ನಾಪತ್ತೆ

|

Updated on: Aug 06, 2023 | 8:33 AM

China Earthquake: ಚೀನಾದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪರಿಣಾಮವಾಗಿ 74 ಮನೆಗಳು ಕುಸಿದಿವೆ, 21 ಮಂದಿಗೆ ಗಾಯಗಳಾಗಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ.

ಚೀನಾ ಭೂಕಂಪ: ಚೀನಾದಲ್ಲಿ 5.5 ತೀವ್ರತೆಯ ಭೂಕಂಪ, 74 ಮನೆಗಳು ಕುಸಿತ, 21 ಜನರಿಗೆ ಗಾಯ, 10 ಮಂದಿ ನಾಪತ್ತೆ
ಭೂಕಂಪ
Follow us on

ಚೀನಾದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪರಿಣಾಮವಾಗಿ 74 ಮನೆಗಳು ಕುಸಿದಿವೆ, 21 ಮಂದಿಗೆ ಗಾಯಗಳಾಗಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ. ಡೆಝೌ ನಗರದ ಪಿಂಗ್ಯುವಾನ್ ಕೌಂಟಿಯಲ್ಲಿ 5.5 ತೀವ್ರತೆಯ ಭೂಕಂಪನದ ಅನುಭವವಾಗಿದೆ. ಭಾನುವಾರ ಸ್ಥಳೀಯ ಕಾಲಮಾನ 2.30ಕ್ಕೆ ಕಂಪನ ಸಂಭವಿಸಿದೆ ಎನ್ನಲಾಗಿದೆ. ಭೂಕಂಪದ ಕೇಂದ್ರಬಿಂದುವು ಡೆಝೌ ನಗರದ ದಕ್ಷಿಣಕ್ಕೆ 26 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿದೆ.

ಶನಿವಾರದಂದು, ಅಫ್ಘಾನಿಸ್ತಾನದಲ್ಲಿ 5.8 ರಿಕ್ಟರ್ ಮಾಪಕ ತೀವ್ರತೆಯ ಭೂಕಂಪನವೂ ಸಂಭವಿಸಿತ್ತು. ಭೂಕಂಪದ ಕೇಂದ್ರಬಿಂದು ಹಿಂದೂಕುಶ್ ಪ್ರದೇಶವಾಗಿತ್ತು. ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೂಡ 4.7 ತೀವ್ರತೆಯ ಭೂಕಂಪ ಸಂಭವಿಸಿತ್ತು.ಭೂಕಂಪದ ಕೇಂದ್ರಬಿಂದು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಆಗಿತ್ತು.

ಮತ್ತಷ್ಟು ಓದಿ: New Zealand Earthquake: ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ 6.1 ತೀವ್ರತೆಯ ಭೂಕಂಪ

ಫೆಬ್ರವರಿ 6 ರಂದು ಟರ್ಕಿಯಲ್ಲಿ ಸಂಭವಿಸಿದ ತೀವ್ರ ಭೂಕಂಪವು ದೊಡ್ಡ ವಿನಾಶವನ್ನು ಉಂಟುಮಾಡಿತು ಮತ್ತು ಟರ್ಕಿ ಮತ್ತು ಸಿರಿಯಾದಲ್ಲಿ 44 ಸಾವಿರಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು. ಸಾರಿಗೆ, ಸಂವಹನ ಮತ್ತು ವಿದ್ಯುತ್ ಸರಬರಾಜು ಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿ ತೈಲ ಮತ್ತು ಅನಿಲ ಪೈಪ್‌ಲೈನ್‌ಗಳಲ್ಲಿ ಯಾವುದೇ ಸೋರಿಕೆ ಕಂಡುಬಂದಿಲ್ಲ.

ಭೂಕಂಪದ ನಂತರ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಮಾರ್ಗದರ್ಶನ ನೀಡಲು ಶಾಂಡೊಂಗ್ ಪ್ರಾಂತ್ಯಕ್ಕೆ ತುರ್ತು ಮತ್ತು ರಕ್ಷಣಾ ತಂಡವನ್ನು ಕಳುಹಿಸಲಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:33 am, Sun, 6 August 23