ಸ್ವಲ್ಪವೂ ಬಿಡುವು ಪಡೆಯದೆ ಕೆಲಸ ಮಾಡಿಸಿದರೆ ಯಂತ್ರಗಳೇ ಹಾಳಾಗುತ್ತವೆ ಇನ್ನು ಮನುಷ್ಯ ಬದುಕಲು ಸಾಧ್ಯವೇ?. ರಜೆ ಪಡೆಯದೆ ನಿರಂತರ 104 ದಿನಗಳ ಕಾಲ ಕೆಲಸ ಮಾಡಿದ ವ್ಯಕ್ತಿಯೊಬ್ಬ ಅಂಗಾಂಗ್ಯ ವೈಫಲ್ಯದಿಂದ ಸಾವನ್ನಪ್ಪಿರುವ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದಲ್ಲಿ ಕಾರ್ಮಿಕ ಕಾನೂನುಗಳು ಕೂಡ ಅಷ್ಟು ಕಠಿಣವಾಗಿಲ್ಲ, ಅದಕ್ಕಾಗಿಯೇ ಚೀನಾ ಉತ್ಪಾದನಾ ವಲಯದ ಕೇಂದ್ರವಾಗಿದೆ. ಇತ್ತೀಚೆಗೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದರು.
ಕಂಪನಿಯು ಆತನನ್ನು ಗುಲಾಮನಂತೆ ನಡೆಸಿಕೊಂಡಿತ್ತು ಎಂದು ಹೇಳಲಾಗುತ್ತಿದೆ, ಅವರು 104 ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದರು, ಅಷ್ಟೇ ಅಲ್ಲದೆ ದಿನಕ್ಕೆ 8 ಗಂಟೆಗಳಲ್ಲ ಓವರ್ ಟೈಮ್ ಕೂಡ ಮಾಡಿದ್ದರು. ಬಳಿಕ ಅವರ ಆರೋಗ್ಯ ಹದಗೆಟ್ಟಿತ್ತು.
ಏಪ್ರಿಲ್ 6 ರಂದು ಅವರು ಒಂದು ದಿನ ರಜೆ ತೆಗೆದುಕೊಂಡಿದ್ದರು. ಮೇ 25 ರಂದು, ಅವರ ಆರೋಗ್ಯವು ಹದಗೆಟ್ಟಿತು ಮತ್ತು ಮೂರು ದಿನಗಳ ನಂತರ ಅವರ ಸ್ಥಿತಿ ಗಂಭೀರವಾಯಿತು. ಶ್ವಾಸಕೋಶದ ಸೋಂಕು ಮತ್ತು ಉಸಿರಾಟದ ತೊಂದರೆಯಿಂದ ಜೂನ್ 1 ರಂದು ನಿಧನರಾದರು.
ಮತ್ತಷ್ಟು ಓದಿ: Video : ವಂದೇ ಭಾರತ್ ಟ್ರೈನ್ ಓಡಿಸಲು ಲೋಕೋ ಪೈಲೆಟ್ಸ್ಗಳ ಕಿತ್ತಾಟ, ಈ ದೃಶ್ಯ ನೋಡಿ ನೆಟ್ಟಿಗರು ಸುಸ್ತೋ ಸುಸ್ತು
ಸತತವಾಗಿ ನಲವತ್ತೆಂಟು ಗಂಟೆಗಳ ಕಾಲ ಡ್ಯೂಟಿ ಮಾಡಿದ ಅವರು ಇದ್ದಕ್ಕಿದ್ದಂತೆ ಫ್ಯಾಕ್ಟರಿಯಲ್ಲಿ ಕುಸಿದು ಬಿದ್ದಿದ್ದರು. ಸಹೋದ್ಯೋಗಿಗಳು ಆಸ್ಪತ್ರೆಗೆ ಕೂಡಲೇ ಕರೆದೊಯ್ದಿದ್ದರು, ಅತಿಯಾದ ದೈಹಿಕ ಶ್ರಮದಿಂದಾಗಿ ಅವರ ದೇಹದಲ್ಲಿನ ಅಂಗಗಳು ವಿಫಲಗೊಂಡಿದ್ದವು. ಕಂಪನಿಯು ಕನಿಷ್ಠ ಕಾಳಜಿಯನ್ನೂ ತೋರಿಸಲಿಲ್ಲ. ಬಳಿಕ ಅವರು ಅಸುನೀಗಿದ್ದರು.
ಉದ್ಯೋಗಿಯ ಕುಟುಂಬ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯದಲ್ಲಿ ಕಂಪನಿಯು ಒಂದು ರೂಪಾಯಿಯನ್ನೂ ನೀಡುವುದಿಲ್ಲ ಎಂದು ವಾದಿಸಿತ್ತು. ನಾವು ಚೀನಾದ ಕಾರ್ಮಿಕ ಕಾನೂನುಗಳ ಪ್ರಕಾರ ಕಾರ್ಯನಿರ್ವಹಿಸಿದ್ದೇವೆ. ಅಲ್ಲದೆ, ಹೆಚ್ಚಿನ ಸಮಯ ಕೆಲಸ ಮಾಡಲು ಕೇಳಲಿಲ್ಲ ಎಂದು ಕಂಪನಿಯು ಮೃತ ವ್ಯಕ್ತಿಯನ್ನು ದೂರಿದೆ.
ಆದರೆ ಎಲ್ಲಾ ಕಂಪನಿಯು ಹೇಳುವುದು ಇದನ್ನೇ, ಆದರೆ ಉದ್ಯೋಗಿ ಸಾವನ್ನಪ್ಪಲು ಒತ್ತಡವೇ ಕಾರಣ ಎಂದು ಉದ್ಯೋಗಿ ಪರ ವಕೀಲರು ವಾದಿಸಿದರು. ಕೊನೆಯಲ್ಲಿ, ಕಂಪನಿಯು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಚೀನಾದ ನ್ಯಾಯಾಲಯವು ತೀರ್ಮಾನಿಸಿತು. 56 ಸಾವಿರ ಡಾಲರ್ ಪರಿಹಾರ ನೀಡುವಂತೆ ಆದೇಶಿಸಿದೆ. ಅಂದರೆ ಚೀನಾದ ಯುವಾನ್ ನಲ್ಲಿ ನಾಲ್ಕು ಲಕ್ಷ. ಆದರೆ ಇದು ಅತಿ ಕಡಿಮೆ ಮೊತ್ತದ ಪರಿಹಾರವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:12 am, Sun, 8 September 24