ಯುದ್ಧಕ್ಕೆ ಸಿದ್ಧರಾಗಿ, ಹೋರಾಡಿ ಮತ್ತು ಗೆಲ್ಲಿ: ಚೀನಾ ಸೇನೆಗೆ ಕರೆ ನೀಡಿದ ಅಧ್ಯಕ್ಷ ಷಿ ಜಿನ್‌ಪಿಂಗ್

ಯುದ್ಧ ಸನ್ನದ್ಧತೆಗಾಗಿ ತನ್ನ ಎಲ್ಲಾ ಕೆಲಸಗಳನ್ನು ನಿರ್ವಹಿಸಲು, ಹೋರಾಡಲು ಮತ್ತು ಗೆಲ್ಲುವ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅದರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಇಡೀ ಸೇನೆಯು ತನ್ನ ಎಲ್ಲಾ ಶಕ್ತಿಯನ್ನು ವಿನಿಯೋಗಿಸಬೇಕು ಎಂದು ಷಿ ಹೇಳಿದರು.

ಯುದ್ಧಕ್ಕೆ ಸಿದ್ಧರಾಗಿ, ಹೋರಾಡಿ ಮತ್ತು ಗೆಲ್ಲಿ: ಚೀನಾ ಸೇನೆಗೆ ಕರೆ ನೀಡಿದ ಅಧ್ಯಕ್ಷ ಷಿ ಜಿನ್‌ಪಿಂಗ್
ಷಿ ಜಿನ್‌ಪಿಂಗ್
Edited By: ರಶ್ಮಿ ಕಲ್ಲಕಟ್ಟ

Updated on: Nov 09, 2022 | 10:56 PM

ಬೀಜಿಂಗ್: ಚೀನಾದ (China)ರಾಷ್ಟ್ರೀಯ ಭದ್ರತೆ ಅಸ್ಥಿರತೆಯನ್ನು ಎದುರಿಸುತ್ತಿದೆ ಎಂದ ಅಧ್ಯಕ್ಷ ಷಿ ಜಿನ್‌ಪಿಂಗ್ (Xi Jinping) ಯುದ್ಧಕ್ಕೆ ಸಿದ್ಧರಾಗಿ ಎಂದು ಸೇನೆಗಳಿಗೆ ಕರೆ ನೀಡಿದ್ದಾರೆ. ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಷಿ ಜಿನ್‌ಪಿಂಗ್ , ಯುದ್ಧಗಳನ್ನು ಹೋರಾಡಲು ಮತ್ತು ಗೆಲ್ಲುವುದಕ್ಕಾಗಿ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಯುದ್ಧ ಸನ್ನದ್ಧತೆಯನ್ನು ಕಾಪಾಡಿಕೊಳ್ಳಲು  ತನ್ನ ಎಲ್ಲಾ ಶಕ್ತಿಯನ್ನು ವಿನಿಯೋಗಿಸಬೇಕು ಎಂದು PLAಗೆ ಆದೇಶಿಸಿದ್ದಾರೆ. 69 ವರ್ಷದ ಷಿ ಅವರನ್ನು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPC) ಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಸೆಂಟ್ರಲ್ ಮಿಲಿಟರಿ ಕಮಿಷನ್ (CMC) ಮುಖ್ಯಸ್ಥರಾಗಿ ಮರುನೇಮಕಗೊಳಿಸಲಾಗಿದೆ. ಪಕ್ಷದ ಮುಖ್ಯಸ್ಥ, ಮಿಲಿಟರಿ ಮತ್ತು ಪ್ರೆಸಿಡೆನ್ಸಿಯ ಮೂರು ಪ್ರಬಲ ಹುದ್ದೆಗಳನ್ನು ಹೊಂದಿರುವ ಷಿ  ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ಹೊರತುಪಡಿಸಿ 10 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಅಧಿಕಾರದಲ್ಲಿ ಮುಂದುವರಿಯುವ ಏಕೈಕ ನಾಯಕರಾಗಿದ್ದಾರೆ.

ಮಂಗಳವಾರ, ಷಿ ಅವರು ಇಲ್ಲಿ ಸಿಎಂಸಿಯ ಜಂಟಿ ಕಾರ್ಯಾಚರಣೆಗಳ ಕಮಾಂಡ್ ಸೆಂಟರ್ ಅನ್ನು ಪರಿಶೀಲಿಸಿದರು.ಇದು CPC ಕೇಂದ್ರ ಸಮಿತಿ ಮತ್ತು CMC ಯ ಕಾರ್ಯತಂತ್ರದ ಆಜ್ಞೆಗೆ ಪ್ರಮುಖ ಬೆಂಬಲವನ್ನು ನೀಡುತ್ತದೆ. ಕಮಾಂಡ್ ಸೆಂಟರ್‌ಗೆ ಆಗಮಿಸಿದ ನಂತರ, ಚೀನಾದ ನಾಯಕ ಸೇನೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಸಿಎಂಸಿಯ ಮುಖ್ಯಸ್ಥರಾಗಿ ಮೂರನೇ ಅವಧಿಯನ್ನು ಪ್ರಾರಂಭಿಸಿದಾಗ,  ಮಿಲಿಟರಿಯನ್ನುದ್ದೇಶಿ ಮಾತನಾಡಿದ ತಮ್ಮ ಮೊದಲ ಭಾಷಣದಲ್ಲಿ, ಜಗತ್ತು ಒಂದು ಶತಮಾನದಲ್ಲಿ ಕಾಣದಿರುವ ಹೆಚ್ಚು ತೀವ್ರವಾದ ಬದಲಾವಣೆಗಳಿಗೆ ಒಳಗಾಗುತ್ತಿದೆ ಎಂದು ಹೇಳಿದರು.  ಚೀನಾದ ರಾಷ್ಟ್ರೀಯ ಭದ್ರತೆಯು ಅಸ್ಥಿರತೆ ಮತ್ತು ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಅದರ ಮಿಲಿಟರಿ ಕಾರ್ಯಗಳು ಪ್ರಯಾಸದಾಯಕವಾಗಿರುತ್ತವೆ.

ಯುದ್ಧ ಸನ್ನದ್ಧತೆಗಾಗಿ ತನ್ನ ಎಲ್ಲಾ ಕೆಲಸಗಳನ್ನು ನಿರ್ವಹಿಸಲು, ಹೋರಾಡಲು, ಗೆಲ್ಲುವ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅದರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಇಡೀ ಸೇನೆಯು ತನ್ನ ಎಲ್ಲಾ ಶಕ್ತಿಯನ್ನು ವಿನಿಯೋಗಿಸಬೇಕು ಎಂದು ಅವರು ಹೇಳಿದರು ಎಂದು ಸರ್ಕಾರಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾಷ್ಟ್ರೀಯ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ದೃಢವಾಗಿ ಕಾಪಾಡಲು ಮತ್ತು ಪಕ್ಷ ಮತ್ತು ಜನರು ವಹಿಸಿಕೊಟ್ಟ ವಿವಿಧ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಷಿ ಅವರಿಗೆ ಸೂಚನೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಮಿಲಿಟರಿ ನಾಯಕತ್ವವು ಪಿಎಲ್ ಎಯ ಶತಮಾನೋತ್ಸವದ ಗುರಿಯನ್ನು ಸಾಕಾರಗೊಳಿಸುವತ್ತ ಗಮನಹರಿಸಬೇಕು .2027 ರ ವೇಳೆಗೆ PLA ಅನ್ನು ವಿಶ್ವ ದರ್ಜೆಯ ಸಶಸ್ತ್ರ ಪಡೆಯನ್ನಾಗಿ ಮಾಡಬೇಕು. ಇದನ್ನು ಮಾಡಲು ನಾವು ನಮ್ಮ ಕೈಲಾದಷ್ಟು ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಕಳೆದ ತಿಂಗಳು ಪಕ್ಷದ ಕಾಂಗ್ರೆಸ್‌ನಲ್ಲಿ ತಮ್ಮ ಭಾಷಣದ ಸಮಯದಲ್ಲಿ, ಷಿ “ಸ್ಥಳೀಯ ಯುದ್ಧಗಳಲ್ಲಿ ವಿಜಯ” ವನ್ನು ಗುರಿಯಾಗಿಟ್ಟುಕೊಂಡರು. ಅದೇ ವೇಳೆ ಎಲ್ಲಾ ಅಂಶಗಳಲ್ಲಿ ತರಬೇತಿ ಮತ್ತು ಯುದ್ಧದ ಸಿದ್ಧತೆಯನ್ನು ಮಾಡುವಂತೆ ಪಿಎಲ್ಎಗೆ ಹೇಳಿದರು.

“ನಾವು ಮಿಲಿಟರಿ ಪಡೆಗಳ ಸಾಮಾನ್ಯ ಮತ್ತು ವೈವಿಧ್ಯಮಯ ಬಳಕೆಯನ್ನು ಬಲಪಡಿಸುತ್ತೇವೆ, ದೃಢತೆಯೊಂದಿಗೆ ಮಿಲಿಟರಿ ಹೋರಾಟಗಳನ್ನು ಕೈಗೊಳ್ಳುತ್ತೇವೆ, ಸ್ಥಳೀಯ ಯುದ್ಧಗಳನ್ನು ಗೆಲ್ಲುತ್ತೇವೆ” ಎಂದು ಅವರು ಹೇಳಿದರು.

Published On - 9:53 pm, Wed, 9 November 22

Web contact

TV9 Kannada

Read More
Follow Us