ಚೀನಾ(China)ವು ಮೊದಲ ಬಾರಿಗೆ ಬಾಹ್ಯಾಕಾಶ(Space)ಕ್ಕೆ ನಾಗರಿಕರನ್ನು ಕಳುಹಿಸಲು ಮುಂದಾಗಿದೆ. ಮಂಗಳವಾರ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಸಿಬ್ಬಂದಿಯ ಕಾರ್ಯಾಚರಣೆಯ ಭಾಗವಾಗಿ ಚೀನಾ ತನ್ನ ಮೊದಲ ನಾಗರಿಕ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ ಎಂದು ದೇಶದ ಚೀನಾ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಇಲ್ಲಿಯವರೆಗೆ, ಬಾಹ್ಯಾಕಾಶಕ್ಕೆ ಕಳುಹಿಸಲಾದ ಎಲ್ಲಾ ಚೀನೀ ಗಗನಯಾತ್ರಿಗಳು ಪೀಪಲ್ಸ್ ಲಿಬರೇಶನ್ ಆರ್ಮಿಯ ಭಾಗವಾಗಿದ್ದರು.
ಬಾಹ್ಯಾಕಾಶಕ್ಕೆ ತೆರಳಲಿರುವ ಪೇಲೋಡ್ ತಜ್ಞ ಗುಯಿ ಹೈಚಾವೋ ಬೀಜಿಂಗ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಗುಯಿ ಬಾಹ್ಯಾಕಾಶ ವಿಜ್ಞಾನದ ಪ್ರಾಯೋಗಿಕ ಪೇಲೋಡ್‌ಗಳ ಆನ್-ಆರ್ಬಿಟ್ ಕಾರ್ಯಾಚರಣೆಗೆ ಪ್ರಮುಖವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಲಿನ್ ಹೇಳಿದರು.
ಮತ್ತಷ್ಟು ಓದಿ: ಇಸ್ರೋದ ಆರ್‌ಎಲ್‌ವಿ-ಟಿಡಿ ಕಾರ್ಯಾಚರಣೆ: ಭವಿಷ್ಯದ ಬಾಹ್ಯಾಕಾಶ ಪ್ರವಾಸಕ್ಕೆ ಮುನ್ನುಡಿಯೇ?
ಅವರು ಮಂಗಳವಾರ ಬೆಳಗ್ಗೆ 9.31ಕ್ಕೆ (0131 GMT) ವಾಯುವ್ಯ ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಟೇಕ್ ಆಫ್ ಆಗಲಿದ್ದಾರೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಚೀನಾ ಕೂಡ ಚಂದ್ರನ ಮೇಲೆ ನೆಲೆಯನ್ನು ನಿರ್ಮಿಸಲು ಯೋಜಿಸುತ್ತಿದೆ ಮತ್ತು ದೇಶದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತವು 2029 ರ ವೇಳೆಗೆ ಸಿಬ್ಬಂದಿ ಚಂದ್ರನ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.
ಚೀನಾ ಕಂಡುಹಿಡಿದ ನಿಗೂಢ ಬಾಹ್ಯಾಕಾಶ ವಿಮಾನ ಈ ದಿನಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಕಳೆದ 9 ತಿಂಗಳಿಂದ ಬಾಹ್ಯಾಕಾಶ ವಿಮಾನವು ಬಾಹ್ಯಾಕಾಶದಲ್ಲಿ ಸುತ್ತುತ್ತಿತ್ತು. ಮೇ ತಿಂಗಳ ಆರಂಭಿಕ ದಿನಗಳಲ್ಲಿ, ಈ ಬಾಹ್ಯಾಕಾಶ ವಿಮಾನವು ಭೂಮಿಗೆ ಮರಳಿದಾಗ, ಅದು ಹೆಚ್ಚು ಚರ್ಚೆಯಾಯಿತು. ಆದಾಗ್ಯೂ, ಚೀನಾ ತನ್ನ ಹೊಸ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಬಹುತೇಕ ರಹಸ್ಯವಾಗಿರಿಸಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ