ತನಗೆ ವಿಧಿಸಿದ್ದ ಮರಣದಂಡನೆಯಿಂದ ತಪ್ಪಿಸಿಕೊಳ್ಳಲು ಡ್ರಗ್ ಪೆಡ್ಲರ್ ಒಬ್ಬ ಸುರಂಗ ತೋಡಿ ಕಾರಾಗೃಹದಿಂದ ಪರಾರಿಯಾಗಿರುವ ಘಟನೆ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಬೆಳಕಿಗೆ ಬಂದಿದೆ.
ಚೀನಾ ಮೂಲದ ಕಾಯಿ ಚ್ಯಾಂಗ್ಪಾನ್ ಎಂಬ ಡ್ರಗ್ ಪೆಡ್ಲರ್ಗೆ ಇಂಡೋನೇಷ್ಯಾ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಹಾಗಾಗಿ, ಅದರಿಂದ ತಪ್ಪಿಸಿಕೊಳ್ಳಲು ಸ್ಕೆಚ್ ಹಾಕಿದ್ದ ಕಾಯಿ ತನ್ನ ಸೆಲ್ನ ಕೆಳಗೆ ಸರಿಸುಮಾರು 100 ಅಡಿ ಉದ್ದದ ಸುರಂಗವನ್ನು ತೋಡಿ ಅದರ ಮೂಲಕ ಕಾರಾಗೃಹದ ಮುಖ್ಯ ಒಳಚರಂಡಿಯನ್ನು ತಲುಪಿದ್ದಾನೆ.
ಒಳಚರಂಡಿ ಮುಖಾಂತರ ಸಾಗಿದ ಕಾಯಿ ಚ್ಯಾಂಗ್ಪಾನ್ ಬಳಿಕ ರಸ್ತೆ ತಲುಪಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಅಂದ ಹಾಗೆ, ಬರೋಬ್ಬರಿ 100 ಅಡಿ ಉದ್ದದ ಸುರಂಗ ತೋಡಲು ಇವನಿಗೆ ಹೇಗೆ ಸಾಧ್ಯವಾಯ್ತು ಅನ್ನೋ ಯೋಚನೆಯಲ್ಲಿದ್ದ ಜೈಲಿನ ಸಿಬ್ಬಂದಿಗೆ ಕಾಯಿ ಜೈಲಿನ ತೋಟದಲ್ಲಿ ಬಳಸುತ್ತಿದ್ದ ಸಲಕರಣೆಗಳನ್ನ ಕದ್ದು ತಂದು ಸುರಂಗ ತೋಡಿದ ಎಂದು ಮತ್ತೊಬ್ಬ ಕೈದಿ ಮಾಹಿತಿ ಕೊಟ್ಟಿದ್ದಾನಂತೆ.