ಕೊರೊನಾ ಔಷಧಿ ತಯಾರಿಕೆಯನ್ನು ಹ್ಯಾಕ್ ಮಾಡಲು ಯತ್ನಿಸಿದೆ ದುರುಳ ಚೀನಾ!

| Updated By: ಸಾಧು ಶ್ರೀನಾಥ್​

Updated on: Aug 01, 2020 | 5:00 PM

ವಾಷಿಂಗ್ಟನ್‌: ಕೊರೊನಾ ಮಾರಿಯಿಂದ ಮುಕ್ತಿ ಕಾಣಲು ಜಗತ್ತಿನಾದ್ಯಂತ ವಿವಿಧ ಕಂಪನಿಗಳು ಔಷಧ ಕಂಡುಹಿಡಿಯಲು ತಮ್ಮೆಲ್ಲೆ ಶಕ್ತಿಯನ್ನ ಧಾರೆಯೆರೆಯುತ್ತಿವೆ. ಆದ್ರೆ ದುರುಳ ಚೀನಾ ಮಾತ್ರ ಬೆವರು ಸುರಿಸದೇ ಕಳ್ಳದಾರಿಯಲ್ಲಿ ಔಷಧ ಪಡೆಯಲು ನೋಡುತ್ತಿದೆ. ಇದಕ್ಕಾಗಿ ಅದು ಅಮೆರಿಕದ ಪ್ರಮುಖ ವ್ಯಾಕ್ಸಿನ್‌ ಕಂಪನಿ ಮೊಡೆರ್ನಾ್‌ ಮೇಲೆ ತನ್ನ ಹ್ಯಾಕರ್‌ಗಳ ಮೂಲಕ ದಾಳಿ ನಡೆಸುತ್ತಿದೆ. ಹೌದು ದುರುಳ ಚೀನಾ ತನ್ನ ಕುಟಿಲ ಬುದ್ಧಿಯನ್ನ ಜಗತ್ತಿನಾದ್ಯಂತ ತೋರಿಸುತ್ತಿದೆ. ಕೊರೊನಾ ವೈರಸ್‌ ಜನಕ ಚೀನಾಗೆ ಅದರ ಮದ್ದು ಕಂಡು ಹಿಡಿಯಲು ಆಗುತ್ತಿಲ್ಲ. ಹೀಗಾಗಿ ಅಮೆರಿಕದ […]

ಕೊರೊನಾ ಔಷಧಿ ತಯಾರಿಕೆಯನ್ನು ಹ್ಯಾಕ್ ಮಾಡಲು ಯತ್ನಿಸಿದೆ ದುರುಳ ಚೀನಾ!
Follow us on

ವಾಷಿಂಗ್ಟನ್‌: ಕೊರೊನಾ ಮಾರಿಯಿಂದ ಮುಕ್ತಿ ಕಾಣಲು ಜಗತ್ತಿನಾದ್ಯಂತ ವಿವಿಧ ಕಂಪನಿಗಳು ಔಷಧ ಕಂಡುಹಿಡಿಯಲು ತಮ್ಮೆಲ್ಲೆ ಶಕ್ತಿಯನ್ನ ಧಾರೆಯೆರೆಯುತ್ತಿವೆ. ಆದ್ರೆ ದುರುಳ ಚೀನಾ ಮಾತ್ರ ಬೆವರು ಸುರಿಸದೇ ಕಳ್ಳದಾರಿಯಲ್ಲಿ ಔಷಧ ಪಡೆಯಲು ನೋಡುತ್ತಿದೆ. ಇದಕ್ಕಾಗಿ ಅದು ಅಮೆರಿಕದ ಪ್ರಮುಖ ವ್ಯಾಕ್ಸಿನ್‌ ಕಂಪನಿ ಮೊಡೆರ್ನಾ್‌ ಮೇಲೆ ತನ್ನ ಹ್ಯಾಕರ್‌ಗಳ ಮೂಲಕ ದಾಳಿ ನಡೆಸುತ್ತಿದೆ.

ಹೌದು ದುರುಳ ಚೀನಾ ತನ್ನ ಕುಟಿಲ ಬುದ್ಧಿಯನ್ನ ಜಗತ್ತಿನಾದ್ಯಂತ ತೋರಿಸುತ್ತಿದೆ. ಕೊರೊನಾ ವೈರಸ್‌ ಜನಕ ಚೀನಾಗೆ ಅದರ ಮದ್ದು ಕಂಡು ಹಿಡಿಯಲು ಆಗುತ್ತಿಲ್ಲ. ಹೀಗಾಗಿ ಅಮೆರಿಕದ ಪ್ರಮಖ ಕಂಪನಿ ಮೊಡೆರ್ನಾ ಮೇಲೆ ತನ್ನ ಹ್ಯಾಕರ್‌ಗಳನ್ನು ಛೂ ಬಿಟ್ಟಿದೆ. ಈ ಹ್ಯಾಕರ್‌ಗಳು ಮೊಡೆರ್ನಾ ಕಂಪನಿಯ ಔಷಧಿಯ ಫಾರ್ಮುಲಾವನ್ನು ಕದಿಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

ಚೀನಾದ ಈ ಕಳ್ಳ ಖದೀಮರ ಸುಳಿವು ಅರಿತ ಕಂಪನಿ ಅಮೆರಿಕದ ಸರ್ಕಾರಕ್ಕೆ ಈ ಬಗ್ಗೆ ದೂರು ನೀಡಿದೆ. ಹೀಗಾಗಿ ಅಮೆರಿಕದ ಫೆಡರಲ್‌ ಬ್ಯೂರೋ ಆಫ್‌ ಇನ್‌ವೆಸ್ಟಿಗೇಶನ್‌ ಮೆಸೆಚುಸೆಟ್ಸ್‌ನಲ್ಲಿರುವ ಮೊಡೆರ್ನಾ ಕಂಪನಿಗೆ ಫುಲ್‌ ಸೆಕ್ಯುರಿಟಿ ನೀಡಿದೆ.

ಆದ್ರೆ ಚೀನಾ ಸರ್ಕಾರ ಮಾತ್ರ ಇದನ್ನು ನಿರಾಕರಿಸಿದೆ. ನಾವೇ ಔಷಧಿಯನ್ನ ತಯಾರಿಸುವಲ್ಲಿ ಮುಂಚೂಣಿಯಲ್ಲಿದ್ದೇವೆ. ಹೀಗಿರುವಾಗ ಕಳವು ಮಾಡುವುದೆಲ್ಲಿಂದ ಬಂತು? ಎಂದು ಆರೋಪವನ್ನ ನಿರಾಕರಿಸಿದೆೆ.

ಅಂದ ಹಾಗೆ ಮೊಡೆರ್ನಾ ಕಂಪನಿಯ ವ್ಯಾಕ್ಸಿನ್‌ ಭಾರೀ ಭರವಸೆ ಮೂಡಿಸಿದ್ದು,  ಪ್ರಮುಖ ಮೂರು ಔಷಧಿಗಳಲ್ಲಿ ಅದೂ ಒಂದು. ಈಗಾಗಲೇ ಪ್ರಾಥಮಿಕ ಹಂತದ ಟ್ರಯಲ್ಸ್‌ ನಡೆಸಿರುವ ಮೊಡೆರ್ನಾ ಕಂಪನಿ ಇನ್ನು ಕೆಲವೇ ದಿನಗಳಲ್ಲಿ ನಿರ್ಣಾಯಕ ಹಂತದ ಮಾನವ ಪರೀಕ್ಷೆ ನಡೆಸಲಿದೆ. ಇದಾದ ನಂತರ ವ್ಯಾಕ್ಸಿನ್‌ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ.