ಚೀನಾದ ಈ ವ್ಯಕ್ತಿಯೊಬ್ಬ ಹೋಟೆಲ್‌ಗಳಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಆತ ಈಗಾಗಲೇ 63 ಹೋಟೆಲ್‌ಗಳಿಗೆ ವಂಚಿಸಿದ್ದಾನೆ. ಹೋಟೆಲ್‌ಗಳಿಗೆ ಹೋಗಿ ಬಳಸಿದ ಕಾಂಡೋಮ್, ಕೆಲವೊಮ್ಮೆ ಸತ್ತ ಜಿರಳೆಗಳು ಇನ್ನೂ ಕೆಲವೊಮ್ಮೆ ಕೂದಲುಗಳಿವೆ ಎಂದು ಶುಚಿತ್ವದ ಬಗ್ಗೆ ದೂರು ನೀಡಿ ಫ್ರೀಯಾಗಿ ಉಳಿಯುತ್ತಿದ್ದ ಎನ್ನಲಾಗಿದೆ.
ಕಾಲೇಜು ಶುಲ್ಕವನ್ನು ಪಾವತಿಸಲು ಕೂಡ ಅವನ ಬಳಿ ಹಣವಿರಲಿಲ್ಲ, ಹಾಗಾಗಿ ಹಾಸ್ಟೆಲ್ನಲ್ಲಿರುವುದು ಕನಸಿನ ಮಾತು. ದಿನಕ್ಕೊಂದು ಹೋಟೆಲ್‌ಗಳಿಗೆ ಹೋಗಿ ಇದೇ ರೀತಿ ವಂಚಿಸಿ ಫ್ರೀಯಾಗಿಯೇ ಉಳಿದುಕೊಳ್ಳುತ್ತಿದ್ದ. 10 ತಿಂಗಳ ಅವಧಿಯಲ್ಲಿ 300ಕ್ಕೂ ಹೆಚ್ಚು ಹೋಟೆಲ್‌ಗಳಿಗೆ ಈತ ವಂಚಿಸಿದ್ದಾನೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ. ಹಾಸ್ಟೆಲ್ನಲ್ಲಿ ಉಳಿದುಕೊಳ್ಳಲು ಹಣವಿಲ್ಲದ ಕಾರಣ ಈ ದಾರಿ ಹಿಡಿದಿದ್ದ. ಆತ ಇಲ್ಲಿಯವರೆಗೆ 4,39,700 ರೂ. ವಂಚಿಸಿದ್ದಾನೆ.
ಝೆಜಿಯಾಂಗ್ ಪ್ರಾಂತ್ಯದ ಲಿನ್ಹೈನಲ್ಲಿನ ಪೊಲೀಸರು, ಜಿಯಾಂಗ್ ಕೆಲವೊಮ್ಮೆ ಒಂದೇ ದಿನದಲ್ಲಿ ಅನೇಕ ಹೋಟೆಲ್‌ಗಳಿಗೆ ಹೋಗುತ್ತಿದ್ದ, ಅವರ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದ. ಶುಚಿತ್ವದ ಬಗ್ಗೆ ದೂರು ನೀಡಿ ಒಮ್ಮೆ ಕೂದಲಿದೆ, ಮತ್ತೊಮ್ಮೆ ಯಾವುದೋ ಕೀಟವಿದೆ ಹೀಗೆ ಹತ್ತು ಹಲವಾರು ಕಾರಣ ನೀಡಿ ಅಂದು ಹೋಟೆಲ್ನ ಬಿಲ್ ಪಾವತಿಸದೆ ಹೋಗುತ್ತಿದ್ದ.
ಮತ್ತಷ್ಟು ಓದಿ: Viral : ನಡುರಸ್ತೆಯಲ್ಲೇ ಅಪ್ಪ ಮಗಳ ಕ್ಯೂಟ್ ಡಾನ್ಸ್, ಎಷ್ಟು ಚೆಂದ ನೋಡಿ
ಒಂದು ದಿನ ಇದೇ ರೀತಿ ಘಟನೆ ಹೋಟೆಲ್ವೊಂದರಲ್ಲಿ ನಡೆದಾಗ ಅಲ್ಲಿನ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರು ಬಂದು ತಪಾಸಣೆ ನಡೆಸಿದಾಗ ಆತನ ಬ್ಯಾಗ್ನಲ್ಲಿ 23 ಪ್ಯಾಕೆಟ್ಗಳಿದ್ದವು, ಅದರಲ್ಲಿ ಕೂದಲು, ಜಿರಳೆಗಳಿದ್ದವು. ಇದು ಪ್ರದೇಶದಾದ್ಯಂತ ಮಧ್ಯಮ ಶ್ರೇಣಿಯ ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:34 am, Sun, 1 December 24