ವಾಷಿಂಗ್ಟನ್: ಕ್ಯೂಬಾ, ಚೀನಾ ಮತ್ತು ಇತರೆಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವಾಗ “ಹವಾನಾ ಸಿಂಡ್ರೋಮ್” (Havana Syndrome) ಲಕ್ಷಣ ಕಾಣಿಸಿಕೊಂಡ ಸಿಐಎ(Central Intelligence Agency) ಸಿಬ್ಬಂದಿ ಮತ್ತು ರಾಜತಾಂತ್ರಿಕರಿಗೆ ಪರಿಹಾರ ನೀಡಲು ಅಮೆರಿಕ ಸರ್ಕಾರ ಸರ್ವಾನುಮತದಿಂದ ಶಾಸನವನ್ನು ಅಂಗೀಕರಿಸಿದೆ. ಅಮೆರಿಕದ ರಾಜತಾಂತ್ರಿಕರಿಗೆ ಮೊದಲು 2016 ರಲ್ಲಿ ಕ್ಯೂಬಾದಲ್ಲಿ ಮತ್ತು ನಂತರ 2018 ರಲ್ಲಿ ಚೀನಾದಲ್ಲಿ ಹವಾನಾ ಸಿಂಡ್ರೋಮ್ ಕಾಣಿಸಿಕೊಂಡಿತ್ತು . ದೀರ್ಘಾವಧಿಯ ಆರೋಗ್ಯ ಪರಿಣಾಮಗಳನ್ನು ಉಂಟುಮಾಡುವ ಚುಚ್ಚುವ ಶಬ್ದಗಳನ್ನು ಅವರು ಅನುಭವಿಸಿದ್ದಾರೆ ಎಂದು ರಾಜತಾಂತ್ರಿಕರು ಹೇಳಿದ್ದಾರೆ. ರಷ್ಯಾ, ತಜಕಿಸ್ತಾನ್, ಆಸ್ಟ್ರಿಯಾ ಮತ್ತು ಹಲವಾರು ಆಫ್ರಿಕನ್ ದೇಶಗಳಲ್ಲಿನ ಅಮೆರಿಕದ ರಾಜತಾಂತ್ರಿಕರು ವಾಕರಿಕೆ ಮತ್ತು ತಲೆತಿರುಗುವಿಕೆಯಂತಹ ಹವಾನಾ ಸಿಂಡ್ರೋಮ್ ರೋಗಲಕ್ಷಣಗಳನ್ನು ಅನುಭವಿಸಿದ್ದಾರೆ ಎಂದು ವರದಿ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ್ ಜೊತೆಗಿದ್ದ ಕೇಂದ್ರ ಗುಪ್ತಚರ ಸಂಸ್ಥೆಯ ಅಧಿಕಾರಿಯೊಬ್ಬರು ಹವಾನಾ ಸಿಂಡ್ರೋಮ್ ಎಂದು ಕರೆಯಲ್ಪಡುವ ನಿಗೂಢ ನರಸಂಬಂಧಿ ಕಾಯಿಲೆಯ (neurological illness) ಲಕ್ಷಣಗಳನ್ನು ಅನುಭವಿಸಿದರು. ಇದು ಅಮೆರಿಕದ ರಾಜತಾಂತ್ರಿಕರು ಮತ್ತು ವಿಶ್ವದ ಅನೇಕ ಭಾಗಗಳಲ್ಲಿರುವನ ಗೂಢಚಾರರನ್ನು ಬಾಧಿಸಿದೆ ಎಂದು ಎಂದು ಅನೇಕ ಮಾಧ್ಯಮ ವರದಿಗಳು ಹೇಳಿವೆ. ಮಂಗಳವಾರ ಅಪರಿಚಿತ ಅಧಿಕಾರಿಗೆ ತಕ್ಷಣವೇ ವಿಲಕ್ಷಣವಾದ ಮಿದುಳಿನ ರೋಗಲಕ್ಷಣಗಳನ್ನು ಪರೀಕ್ಷಿಸಲಾಯಿತು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಗ್ರೇನ್, ವಾಕರಿಕೆ, ನೆನಪಿನ ಕೊರತೆ ಮತ್ತು ತಲೆತಿರುಗುವಿಕೆ ಸೇರಿದಂತೆ 200ರಷ್ಟು ಅಮೆರಿಕದ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರು ಅನಾರೋಗ್ಯದ ಲಕ್ಷಣಗಳನ್ನು ವರದಿ ಮಾಡಿದ್ದಾರೆ. ಕ್ಯೂಬಾದ ಯುಎಸ್ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾದ ಅಮೆರಿಕನ್ ಅಧಿಕಾರಿಗಳು 2016 ರಲ್ಲಿ ರೋಗಲಕ್ಷಣಗಳನ್ನು ಮೊದಲು ವರದಿ ಮಾಡಿದ್ದರು.
ಏನಿದು ಹವಾನಾ ಸಿಂಡ್ರೋಮ್?
ಇದು ಮೈಗ್ರೇನ್, ವಾಕರಿಕೆ, ನೆನಪಿನ ಕೊರತೆ, ತಲೆ ಸುತ್ತು ಮತ್ತು ತೀವ್ರ ತಲೆನೋವುಗಳಿಗೆ ಕಾರಣವಾಗುವ ಒಂದು ನಿಗೂಢ ಕಾಯಿಲೆಯಾಗಿದೆ. ಇದೊಂದು ಅದೃಶ್ಯ ಸ್ಫೋಟ ತರಂಗ ಹೊಡೆದಂತಿರುತ್ತದೆ ಎಂದು ಕಾಯಿಲೆಗೊಳಗಾದವರು ಎಂದು ವಿವರಿಸುತ್ತಾರೆ. ವೈದ್ಯರು, ವಿಜ್ಞಾನಿಗಳು, ಗುಪ್ತಚರ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳು ಎಲ್ಲರೂ ಹವಾನಾ ಸಿಂಡ್ರೋಮ್‌ಗೆ ಕಾರಣವಾದ ಕಾರಣಗಳನ್ನು ತನಿಖೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದೆಲ್ಲವೂ ಶಬ್ದದಿಂದ ಪ್ರಾರಂಭವಾಗುತ್ತದೆ, “ಝೇಂಕರಿಸುವಿಕೆ”, “ಲೋಹವನ್ನು ರುಬ್ಬುವುದು” ಮತ್ತು “ಚುಚ್ಚುವ ಕೀರಲು ಧ್ವನಿಯಂತಹ” ಶಬ್ದಗಳು ಕೇಳಿಸುತ್ತವೆ ಎಂದು ಕೆಲವರು ಹೇಳುತ್ತಾರೆ. ಆದಾಗ್ಯೂ ಇದನ್ನು ನಿರ್ದಿಷ್ಟ ಧ್ವನಿ ಎಂದು ವಿವರಿಸಲು ಸಾಧ್ಯವಾಗಿಲ್ಲ.
ರಾಯಿಟರ್ಸ್ ವರದಿಯ ಪ್ರಕಾರ ಯುಎಸ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಅತ್ಯಂತ ಸಮರ್ಥನೀಯ ಸಿದ್ಧಾಂತವೆಂದರೆ “ನಿರ್ದೇಶಿತ, ಪಲ್ಸ್ ರೇಡಿಯೋ ಫ್ರೀಕ್ವೆನ್ಸಿ ಎನರ್ಜಿ” (directed, pulsed radio frequency energy) ಸಿಂಡ್ರೋಮ್ ಗೆ ಕಾರಣವಾಗುತ್ತದೆ. ಆದರೆ ಯಾವುದನ್ನೂ ನಿರ್ಣಾಯಕವಾಗಿ ಹೇಳಲು ಕಠಿಣ ಪುರಾವೆಗಳು ಇನ್ನೂ ಸಿಕ್ಕಿಲ್ಲ.
ಸೆಪ್ಟೆಂಬರ್ 2017 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ “ಹವಾನಾದಲ್ಲಿನ ಅಮೆರಿಕ ರಾಯಭಾರ ಕಚೇರಿಯಲ್ಲಿರುವ 19 ಅಮೇರಿಕನ್ ಅಧಿಕಾರಿಗಳು ಸೋನಿಕ್ ದಾಳಿಯಿಂದ (sonic harassment attacks) ಬಳಲಿದ್ದಾರೆ. ಇದು ಮಿದುಳಿನ ಗಾಯ, ಶ್ರವಣ ನಷ್ಟ ಮತ್ತು ಇತರ ರೋಗಲಕ್ಷಣಗಳನ್ನು ಒಳಗೊಂಡಿವೆ ಎಂದು ಹೇಳುತ್ತಾರೆ.
ಬಿಬಿಸಿ ಈ ರೋಗ ಲಕ್ಷಣಗಳ ಬಗ್ಗೆ ಇಲಿನಾಯ್ಸ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಜೇಮ್ಸ್ ಲಿನ್ ಅಲರ ಹೇಳಿಕೆಯನ್ನು ಉಲ್ಲೇಖಿಸಿದ್ದು ಮೈಕ್ರೋವೇವ್‌ನಿಂದ ಈ ಸಿಂಡ್ರೋಮ್ ಹುಟ್ಟಿಕೊಂಡಿದೆ ಎಂದು ನಂಬಿದ್ದರು. ಏಕೆಂದರೆ ಅವರು 1970 ರ ದಶಕದಲ್ಲಿ ಶೀತಲ ಸಮರದ ಸಮಯದಲ್ಲಿ ಇದೇ ರೀತಿಯ ಶಬ್ದಗಳನ್ನು ಕೇಳಿತ್ತಂತೆ
ಬಿಬಿಸಿ ಯು 1976 ರ ಅಮೆರಿಕ ಗುಪ್ತಚರ ವರದಿಯನ್ನು ಉಲ್ಲೇಖಿಸಿದ್ದು, ಇದು ಸಂಭಾವ್ಯ ಮಾನಸಿಕ ಶಸ್ತ್ರಾಸ್ತ್ರಗಳಂತೆ ಸೋವಿಯತ್ ಒಕ್ಕೂಟದ ಸಂಭಾವ್ಯ ಬಳಕೆಯ ಬಗ್ಗೆ ಭಯವನ್ನು ವ್ಯಕ್ತಪಡಿಸಿತು. ಆದರೆ ಕಬ್ಬಿಣದ ಪರದೆಯ ಹಿಂದೆ ಅಂತಹ ಮೈಕ್ರೋವೇವ್ ಆಯುಧಗಳ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದೆ. ಅಂತೆಯೇ, ಸಿಂಡ್ರೋಮ್‌ನ ಕಾರಣಗಳ ಸುತ್ತಲಿನ ಚಾಲ್ತಿಯಲ್ಲಿರುವ ಸಿದ್ಧಾಂತಗಳು ಆಧಾರರಹಿತವಾಗಿವೆ.
ಅಮೆರಿಕನ್ ವೈದ್ಯಕೀಯ ವೆಬ್‌ಸೈಟ್ ಮೆಡಿಸಿನ್‌ನೆಟ್ ಪ್ರಕಾರ ಧ್ಯಾನ, ಉಸಿರಾಟದ ವ್ಯಾಯಾಮ ಮತ್ತು ತೀವ್ರವಾದ ಚಿಕಿತ್ಸೆಯಂತಹ ಪರ್ಯಾಯಗಳನ್ನು ಸಾಮಾನ್ಯವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಪರಿಗಣಿಸಲಾಗುತ್ತದೆ.
ಪ್ರಕರಣ ಮತ್ತು ಮೂಲ
ಕ್ಯೂಬಾದ ಅಮೆರಿಕ ರಾಯಭಾರ ಕಚೇರಿಯಲ್ಲಿ ರಾಜತಾಂತ್ರಿಕರು ಮತ್ತು ಇತರ ಅಧಿಕಾರಿಗಳು ಅಸಾಮಾನ್ಯ ದೈಹಿಕ ಸಂವೇದನೆಗಳನ್ನು ಅನುಭವಿಸುತ್ತಿದ್ದಾರೆ. ಹೆಚ್ಚಿನ ಮತ್ತು ಕಡಿಮೆ ಶಬ್ದಗಳನ್ನು ಕೇಳುತ್ತಾರೆ ಎಂದು ವರದಿ ಮಾಡಿದಾಗ ಈ ವಿಚಿತ್ರ ಲಕ್ಷಣಗಳು ಮೊದಲು ಸಾರ್ವಜನಿಕ ವೀಕ್ಷಣೆಗೆ ಬಂದವು. ದಶಕಗಳ ಹಗೆತನದ ನಂತರ 2015 ರಲ್ಲಿ ಅಮೆರಿಕ ಮತ್ತು ಕ್ಯೂಬಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಸುಧಾರಿಸಿದವು. ಆದಾಗ್ಯೂ, ಎರಡು ವರ್ಷಗಳಲ್ಲಿ ಅಮೆರಿಕ ರಾಯಭಾರ ಕಚೇರಿಯನ್ನು ಮುಚ್ಚಬೇಕಾಯಿತು ಏಕೆಂದರೆ ಅವರ ಆರೋಗ್ಯ ಕಾಳಜಿಯಿಂದಾಗಿ ಸಿಬ್ಬಂದಿಯನ್ನು ಹಿಂಪಡೆಯಲಾಯಿತು.
ಅಂದಿನಿಂದ ಅಮೆರಿಕ ಸರ್ಕಾರಿ ನೌಕರರು ಚೀನಾ ಮತ್ತು ವಾಷಿಂಗ್ಟನ್, ಡಿಸಿ ಪ್ರದೇಶದಲ್ಲಿ ಇದೇ ರೀತಿಯ ರೋಗಲಕ್ಷಣಗಳನ್ನು ವರದಿ ಮಾಡಿದ್ದಾರೆ. ಹವಾನಾ ಸಿಂಡ್ರೋಮ್ ಕ್ಯೂಬದ ರಾಜಧಾನಿಯಿಂದ ಈ ಹೆಸರನ್ನು ಪಡೆದುಕೊಂಡಿದೆ. ಅಲ್ಲಿ ಅಮೆರಿಕ ಅಧಿಕಾರಿಗಳು ಈ ನರವೈಜ್ಞಾನಿಕ ರೋಗಲಕ್ಷಣಗಳನ್ನು ಮೊದಲು ವರದಿ ಮಾಡಿದರು. ಕ್ಯೂಬಾ ತನಗೆ ಈ ಅನಾರೋಗ್ಯದ ಬಗ್ಗೆ ಗೊತ್ತಿಲ್ಲ ಎಂದು ಹೇಳಿದೆ.
ಕಳೆದ ತಿಂಗಳು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಿಂಗಾಪುರದಿಂದ ವಿಯೆಟ್ನಾಂಗೆ ಪ್ರಯಾಣದ ಯೋಜನೆಗಳನ್ನು ಮೂರು ಗಂಟೆಗಳ ಕಾಲ ವಿಳಂಬ ಮಾಡಬೇಕಾಯಿತು. ಹನೋಯಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ “ಸಂಭವನೀಯ ಅಸಂಗತ ಆರೋಗ್ಯ ಘಟನೆ” ಯನ್ನು ವರದಿ ಮಾಡಿದೆ. ವರದಿಗಳು ನಂತರ ಇದು ಹವಾನಾ ಸಿಂಡ್ರೋಮ್‌ಗೆ ಹೊಂದಿಕೆಯಾಯಿತು ಎಂದು ಹೇಳಿದರು. ಕೆಲವು ಅಮೆರಿಕ ರಾಜತಾಂತ್ರಿಕರನ್ನು ವಿಯೆಟ್ನಾಂನಿಂದ ಹೊರಹೋಗಬೇಕಾಗಿ ಬಂತು.
ರೋಗಲಕ್ಷಣಗಳು ಎಷ್ಟು ಕಾಲ ಉಳಿಯುತ್ತವೆ?
ಈ ರೋಗಲಕ್ಷಣಗಳನ್ನು ವರದಿ ಮಾಡಿದ ಹೆಚ್ಚಿನ ಜನರು ವೈದ್ಯಕೀಯ ಆರೈಕೆಯ ನಂತರ ಚೇತರಿಸಿಕೊಂಡರು, ಅಂದರೆ ಅನಾರೋಗ್ಯವು ತಾತ್ಕಾಲಿಕವಾಗಿದೆ. ಕೆಲವು ಸಿಐಎ ಅಧಿಕಾರಿಗಳು ರೋಗ ಬಾಧಿತರಾಗಿರುವುದರಿಂದ ಅವರ ಬಗ್ಗೆ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಸಾಧ್ಯತೆಯಿಲ್ಲ. ಕೆಲವರು ಹವಾನಾ ಸಿಂಡ್ರೋಮ್‌ನಿಂದಾಗಿ ಇತರರಿಗಿಂತ ಹೆಚ್ಚು ಕಾಲ ಬಳಲುತ್ತಿರುವ ಸಾಧ್ಯತೆಯಿದೆ.
ಅಮೆರಿಕದ ಪ್ರತಿಕ್ರಿಯೆ ಏನು?
ಹವಾನಾ ಸಿಂಡ್ರೋಮ್ ಉದ್ದೇಶಪೂರ್ವಕವಾಗಿ ಉಂಟಾಗುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅಮೆರಿಕದ ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಸಿಐಎ ನಿರ್ದೇಶಕ ಬರ್ನ್ಸ್ ಅವರು ಅನಾರೋಗ್ಯದ ಕಾರಣವನ್ನು ಪತ್ತೆಹಚ್ಚಲು ಗುಪ್ತಚರ ಸಂಸ್ಥೆಯ ಪ್ರಯತ್ನಗಳನ್ನು ದ್ವಿಗುಣಗೊಳಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಒಸಾಮಾ ಬಿನ್ ಲಾಡೆನ್ ಬೇಟೆಯಾಡಿದ ಹಿರಿಯ ಅಧಿಕಾರಿಯನ್ನು ತನಿಖೆಯ ನೇತೃತ್ವ ವಹಿಸಲಾಯಿತು.
ಭಾರತ ಭೇಟಿಯ ಸಮಯದಲ್ಲಿ ಸಿಐಎ ಮುಖ್ಯ ತಂಡದ ಸದಸ್ಯರಿಗೆ ಇತ್ತು ಹವಾನಾ ಸಿಂಡ್ರೋಮ್?
ಸಿಐಎ ನಿರ್ದೇಶಕ ಬಿಲ್ ಬರ್ನ್ಸ್ ನಿಯೋಗದ ಸದಸ್ಯರಲ್ಲಿ ನಿಗೂಢ ಹವಾನಾ ಸಿಂಡ್ರೋಮ್‌ಗೆ ಅನುಗುಣವಾದ ರೋಗಲಕ್ಷಣಗಳು ಕಂಡು ಬಂದಿದ್ದು ಈ ತಿಂಗಳು ಭಾರತಕ್ಕೆ ಭೇಟಿ ನೀಡಿದಾಗ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಯಿತು ಎಂದು ಮಂಗಳವಾರ ಸಿಎನ್‌ಎನ್ ವರದಿ ತಿಳಿಸಿದೆ. ಸಿಎನ್ಎನ್ ಉಲ್ಲೇಖಿಸಲಾದ ಮೂರು ಮೂಲಗಳಲ್ಲಿ ಒಂದರ ಪ್ರಕಾರ, ಬರ್ನ್ಸ್ ಈ ವಿಷಯದಿಂದ ಸಿಟ್ಟುಕೊಂಡಿದ್ದಾರೆ. ಭಾರತದಲ್ಲಿ ಹವಾನಾ ಸಿಂಡ್ರೋಮ್‌ನಿಂದ ಬಳಲುತ್ತಿರುವ ಯುಎಸ್ ಅಧಿಕಾರಿಯ ಬಗ್ಗೆ ಇದು ಮೊದಲ ಮಾಧ್ಯಮ ವರದಿ ಇದಾಗಿದೆ.
ಕೆಲವು ಸಿಐಎ ಅಧಿಕಾರಿಗಳು “ರಾಷ್ಟ್ರದ ಉನ್ನತ ಗೂಢಚಾರಿಗಾಗಿ ನೇರವಾಗಿ ಕೆಲಸ ಮಾಡುವವರು ಸೇರಿದಂತೆ ಯಾರೂ ಸುರಕ್ಷಿತವಾಗಿಲ್ಲ ಎಂದು ಬರ್ನ್ಸ್‌ಗೆ ನೇರ ಸಂದೇಶ ಕಳುಹಿಸಿದ್ದಾರೆ ಎಂದು ಇಬ್ಬರು ವ್ಯಕ್ತಿಗಳು ಸಿಎನ್‌ಎನ್‌ಗೆ ತಿಳಿಸಿದರು.
ಬರ್ನ್ಸ್ ಮತ್ತು ಅವರ ತಂಡವು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿಯ ಉನ್ನತ ಸದಸ್ಯರನ್ನು ಸೆಪ್ಟೆಂಬರ್ 7 ರಂದು ಭಾರತಕ್ಕೆ ಭೇಟಿ ನೀಡಿದಾಗ ಭಾರತದಿಂದ ನಿಯೋಗವು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿತು. ಅಲ್ಲಿ ಬರ್ನ್ಸ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಬಜ್ವಾ ಅವರನ್ನು ಭೇಟಿಯಾದರು. ಬರ್ನ್ಸ್ ಅವರ ಭಾರತ ಭೇಟಿಯನ್ನು ಮುಚ್ಚಿಡಲಾಯಿತು ಮತ್ತು ಪ್ರವಾಸದಲ್ಲಿ ಎರಡೂ ಕಡೆಯಿಂದ ಯಾವುದೇ ಅಧಿಕೃತ ಮಾತು ಇರಲಿಲ್ಲ.
ಭಾರತದಲ್ಲಿ ರೋಗಲಕ್ಷಣಗಳನ್ನು ಅನುಭವಿಸಿದ ವ್ಯಕ್ತಿಯು ಅಮೆರಿಕಕ್ಕೆ ಹಿಂದಿರುಗಿದ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆದರು. ಸಿಐಎ ವಕ್ತಾರರು ಬರ್ನ್ಸ್ ಅವರ ಭಾರತ ಭೇಟಿಗೆ ಸಂಬಂಧಿಸಿದ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಭಾರತೀಯ ಅಧಿಕಾರಿಗಳಿಂದ ಕೂಡಲೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಹವಾನಾ ಸಿಂಡ್ರೋಮ್ ಪ್ರಕರಣಗಳು ಅಮೆರಿಕದ ಉನ್ನತ ಆಡಳಿತ ಅಧಿಕಾರಿಗಳ ವಿದೇಶ ಪ್ರವಾಸದ ಮೇಲೆ ಪರಿಣಾಮ ಬೀರಿದ ಒಂದು ತಿಂಗಳೊಳಗೆ ಎರಡನೇ ಬಾರಿಗೆ ನವದೆಹಲಿಯಲ್ಲಿ ನಡೆದ ಘಟನೆ ಎಂದು ಸಿಎನ್ಎನ್ ವರದಿ ಮಾಡಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಯುಎಸ್ ಪ್ರವಾಸ: ಕಮಲಾ ಹ್ಯಾರಿಸ್ರನ್ನೂ ಭೇಟಿಯಾಗಲಿದ್ದಾರೆ ಪ್ರಧಾನಿ ಮೋದಿ
(CIA personnel and diplomats affected by mysterious illness What is Havana Syndrome)
Published On - 12:29 pm, Wed, 22 September 21