ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿವಾಸದ ಮೇಲೆ ನಿರ್ಬಂಧಿತ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ವಿಮಾನ ಹಾರಾಟ

ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಅವರ ಭದ್ರತೆಯಲ್ಲಿ ಲೋಪ ಉಂಟಾಗಿದೆ. ಡೆಲವೇರ್ ನಿವಾಸದ ಬಳಿ ನಿರ್ಬಂಧಿತ ವಾಯುಪ್ರದೇಶದಲ್ಲಿ ವಿಮಾನ ಹಾರಾಟ ನಡೆಸಿದೆ. ಮಾಹಿತಿಯ ಪ್ರಕಾರ, ನಾಗರಿಕ ವಿಮಾನವೊಂದು ಡೆಲವೇರ್‌ನ ವಿಲ್ಮಿಂಗ್ಟನ್‌ನ ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸಿತು, ನಂತರ ಅಮೆರಿಕದ ಯುದ್ಧ ವಿಮಾನಗಳು ತಕ್ಷಣವೇ ಮುನ್ನೆಚ್ಚರಿಕೆ ವಹಿಸಿ ಅದನ್ನು ತಡೆದಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿವಾಸದ ಮೇಲೆ ನಿರ್ಬಂಧಿತ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ವಿಮಾನ ಹಾರಾಟ
ಜೋ ಬೈಡನ್

Updated on: Oct 29, 2023 | 9:31 AM

ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಅವರ ಭದ್ರತೆಯಲ್ಲಿ ಲೋಪ ಉಂಟಾಗಿದೆ. ಡೆಲವೇರ್ ನಿವಾಸದ ಬಳಿ ನಿರ್ಬಂಧಿತ ವಾಯುಪ್ರದೇಶದಲ್ಲಿ ವಿಮಾನ ಹಾರಾಟ ನಡೆಸಿದೆ. ಮಾಹಿತಿಯ ಪ್ರಕಾರ, ನಾಗರಿಕ ವಿಮಾನವೊಂದು ಡೆಲವೇರ್‌ನ ವಿಲ್ಮಿಂಗ್ಟನ್‌ನ ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸಿತು, ನಂತರ ಅಮೆರಿಕದ ಯುದ್ಧ ವಿಮಾನಗಳು ತಕ್ಷಣವೇ ಮುನ್ನೆಚ್ಚರಿಕೆ ವಹಿಸಿ ಅದನ್ನು ತಡೆದಿದೆ.

ಈ ಘಟನೆ ಅಕ್ಟೋಬರ್ 28 ರಂದು ನಡೆದಿದೆ, ಫ್ಯಾಕ್ಸ್​ ನ್ಯೂಸ್​ ಪ್ರಕಾರ, ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಲ್ಮಿಂಗ್ಟನ್‌ನ ಉತ್ತರಕ್ಕೆ ನಾಗರಿಕ ವಿಮಾನವು ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸಿತು ಎಂದು ಆಂಥೋನಿ ಗುಗ್ಲಿಲ್ಮಿ ಹೇಳಿದ್ದಾರೆ.

ಅಮೆರಿಕದ ಯುದ್ಧ ವಿಮಾನಗಳು ನಾಗರಿಕ ವಿಮಾನವನ್ನು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದೆ. ವಿಮಾನವು ವಿಲ್ಮಿಂಗ್ಟನ್‌ನ ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸಿದಾಗ, ಯುಎಸ್ ಅಧ್ಯಕ್ಷ ಜೋ ಬಿಡನ್ ವಿಲ್ಮಿಂಗ್ಟನ್‌ನಲ್ಲಿರುವ ಅವರ ಮನೆಯಲ್ಲೇ ಇದ್ದರು.

ಮತ್ತಷ್ಟು ಓದಿ: ಹಮಾಸ್-ಇಸ್ರೇಲ್ ಸಂಘರ್ಷ: ಇಸ್ರೇಲ್​ ತನ್ನದೇ ಆದ ನಿರ್ಧಾರ ತೆಗೆದುಕೊಳ್ಳಬಹುದು ಎಂದ ಜೋ ಬೈಡನ್

ರಹಸ್ಯ ಸೇವೆ ಮತ್ತು ಫೆಡರಲ್ ಏವಿಯೇಷನ್ ​​​​ಅಡ್ಮಿನಿಸ್ಟ್ರೇಷನ್‌ನ ಏಜೆಂಟ್‌ಗಳು ಈ ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಮೆರಿಕದ ಅಧ್ಯಕ್ಷರ ಭದ್ರತೆಯಲ್ಲಿ ಲೋಪವಾಗುತ್ತಿರುವುದು ಇದೇ ಮೊದಲಲ್ಲ.ಈ ಹಿಂದೆ ಜೂನ್‌ನಲ್ಲಿಯೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿತ್ತು.

ರೆಹೋಬೋತ್ ಬೀಚ್ ಪ್ರದೇಶದ ನೋ ಫ್ಲೈ ಝೋನ್ ಅನ್ನು ವಿಮಾನವೊಂದು ಇದ್ದಕ್ಕಿದ್ದಂತೆ ಪ್ರವೇಶಿಸಿತ್ತು. ತಕ್ಷಣವೇ ಭದ್ರತಾ ಏಜೆನ್ಸಿಗಳು ಬೈಡನ್ ಹಾಗೂ ಅವರ ಪತ್ನಿಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದರು. ಇನ್ನೂ ಹಮಾಸ್ ಹಾಗೂ ಇಸ್ರೇಲ್​ ನಡುವೆ ನಡೆಯುತ್ತಿರುವ ಘರ್ಷಣೆಯಲ್ಲಿ, ಜೋ ಬೈಡನ್ ಇಸ್ರೇಲ್​ಗೆ ಬೆಂಬಲ ಸೂಚಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ