ಅಮೆರಿಕದ ನದಿಗಳಿಗೆ ವಿಷ ಅನಿಲ ಸೋರಿಕೆಯ ನೋಡಿಯೂ ಸುಳ್ಳು ಸುದ್ದಿ ಎನ್ನುತ್ತಾ ಕಣ್ಣುಮುಚ್ಚಿ ಕುಳಿತ ಪರಿಸರ ಹೋರಾಟಗಾರರು

|

Updated on: Feb 19, 2023 | 3:54 PM

ಭಾರತ ಸೇರಿದಂತೆ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿನ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಇತರೆ ದೇಶಗಳ ಪರಿಸರ ಹೋರಾಟಗಾರರು ಪರಿಸರವನ್ನು ಹಾಳು ಮಾಡುತ್ತಿರುವ ಬಗ್ಗೆ ದೊಡ್ಡ ಕೂಗನ್ನು ಎಬ್ಬಿಸುತ್ತಿದ್ದಾರೆ.

ಅಮೆರಿಕದ ನದಿಗಳಿಗೆ ವಿಷ ಅನಿಲ ಸೋರಿಕೆಯ ನೋಡಿಯೂ ಸುಳ್ಳು ಸುದ್ದಿ ಎನ್ನುತ್ತಾ ಕಣ್ಣುಮುಚ್ಚಿ ಕುಳಿತ ಪರಿಸರ ಹೋರಾಟಗಾರರು
ರೈಲು ದುರಂತ
Image Credit source: OpIndia
Follow us on

ಭಾರತ ಸೇರಿದಂತೆ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿನ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಇತರೆ ದೇಶಗಳ ಪರಿಸರ ಹೋರಾಟಗಾರರು ಪರಿಸರವನ್ನು ಹಾಳು ಮಾಡುತ್ತಿರುವ ಬಗ್ಗೆ ದೊಡ್ಡ ಕೂಗನ್ನು ಎಬ್ಬಿಸುತ್ತಿದ್ದಾರೆ. ಆದರೆ ಅಮೆರಿಕದಲ್ಲಿ ರಾಸಾಯನಿಕಗಳನ್ನು ತುಂಬಿದ್ದ ರೈಲು ಹಳಿ ತಪ್ಪಿ ಸಾವಿರಾರು ಮೀನುಗಳು ಹಾಗೂ ಜಲಚರಗಳು ಸಾವನ್ನಪ್ಪಿದರೂ ಕೂಡ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಪ್ರಕರಣವನ್ನು ಮುಚ್ಚಿಹಾಕಲು ನೋಡುತ್ತಿದ್ದಾರೆ. ಇದು ಪರಿಸರ ಹೋರಾಟಗಾರರ ದ್ವಂದ್ವ ಹಾಗೂ ಪರಿಸರ ಕಾಳಜಿ.

ಅಮೆರಿಕದ ಓಹಿಯೋದಲ್ಲಿ ರಾಸಾಯನಿಕಗಳನ್ನು ಹೊತ್ತೊಯ್ಯುತ್ತಿದ್ದ ರೈಲಿನ ಬೋಗಿಗಳು ಹಳಿ ತಪ್ಪಿ, ಅವೆಲ್ಲವೂ ನೀರು ಸೇರಿ ಸಾವಿರಾರು ಮೀನುಗಳು ಸೇರಿದಂತೆ ಇತರೆ ಜಲಚರಗಳು ಸಾವನ್ನಪ್ಪಿದ್ದರೂ ಕೆಲವು ಹೋರಾಟಗಾರರು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ. ಕಾರ್ಯಕರ್ತರ ಧ್ವನಿಯೇ ಬದಲಾಗಿದೆ, ನೀರು ಹಾಗೂ ವಾಯು ಮಾಲಿನ್ಯದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಏನೂ ಆಗಿಲ್ಲ ಎಂದು ಹೇಳುತ್ತಾ ತಿರುಗುತ್ತಿದ್ದಾರೆ.

ಹೇಳುತ್ತಾ ಘೋಷಣೆ ಕೂಗುತ್ತಿದ್ದಾರೆ ಆದರೆ ಇದೇ ಕಾರ್ಯಕರ್ತರು ಡಾಲ್ಫಿನ್‌ಗಳಿಗೆ ಶಬ್ದದಿಂದ ಅಡಚಣೆಯಾಗುತ್ತದೆ ಎಂದು ಗಂಗಾ ನದಿಯ ವಿಹಾರವನ್ನು ಸ್ಥಗಿತಗೊಳಿಸಲು ಬಯಸಿದ್ದರು. ಆದರೆ ಇದೇ ಹೋರಾಟಗಾರರು, ಈಗ ಕೇವಲ ಅಮೆರಿಕದ ದೊಡ್ಡ ಕಂಪನಿಗಳ ಹಿತಾಸಕ್ತಿಯನ್ನು ಕಾಪಾಡಲು ಬಯಸುತ್ತಿದ್ದಾರೆ ಎಂದು ಅಂಕಣಕಾರರೊಬ್ಬರು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.‘

ಅಮೆರಿಕದ ಓಹಿಯೋ ನಗರದ ಪೂರ್ವ ಪ್ಯಾಲೆಸ್ತೀನ್ ಬಳಿ ರೈಲಿನ ಸುಮಾರು 50 ಬೋಗಿಗಳು ಹಳಿ ತಪ್ಪಿತ್ತು. ಫೆಬ್ರವರಿ 3 ರಂದು ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ, ನಾರ್ಫೋಕ್ ಸದರ್ನ್ ರೈಲಿನ ಬೋಗಿಗಳಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ತುಂಬಿಸಲಾಗಿತ್ತು. ಹಳಿತಪ್ಪಿದ ನಂತರ ಬೆಂಕಿ ಹೊತ್ತಿಕೊಂಡಿತ್ತು.

ಓಹಿಯೋದ ಪೂರ್ವದ ಪ್ಯಾಲೆಸ್ಟೈನ್ 5,000 ಜನಸಂಖ್ಯೆಯನ್ನು ಹೊಂದಿದೆ. ಸ್ಫೋಟವನ್ನು ನಿಯಂತ್ರಿಸಲು ಅಧಿಕಾರಿಗಳು ಅಲ್ಲಿ ವಾಸಿಸುತ್ತಿದ್ದ ನೂರಾರು ಜನರನ್ನು ಸ್ಥಳಾಂತರಿಸಿದರು.

ಫಾಸ್ಜೀನ್ ಒಂದು ವಿಷಕಾರಿ ಅನಿಲ

ಫಾಸ್ಜೀನ್ ಒಂದು ವಿಷಕಾರಿ ಅನಿಲವಾಗಿದ್ದು, ಇದು ವಾಂತಿ ಮತ್ತು ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 3:52 pm, Sun, 19 February 23