Ancient Fridge: 5000 ವರ್ಷಗಳ ಹಿಂದಿನ ಪುರಾತನ ಹೋಟೆಲಿನ ಅವಶೇಷಗಳು ಪತ್ತೆ

ಹೋಟೆಲು ಒಳಗೆ ಪುರಾತತ್ತ್ವಜ್ಞರು ಒಲೆ, ಬೆಂಚುಗಳು, "ಝೀರ್" ಎಂದು ಕರೆಯಲ್ಪಡುವ ಪುರಾತನ ಮಣ್ಣಿನ ರೆಫ್ರಿಜರೇಟರ್ ಮತ್ತು ಬಟ್ಟಲುಗಳು ಮತ್ತು ಇತರ ಪಾತ್ರೆಗಳಲ್ಲಿ ಉಳಿದ ಆಹಾರವನ್ನು ಪತ್ತೆಹಚ್ಚಿದ್ದಾರೆ.

Ancient Fridge: 5000 ವರ್ಷಗಳ ಹಿಂದಿನ ಪುರಾತನ ಹೋಟೆಲಿನ ಅವಶೇಷಗಳು ಪತ್ತೆ
ಪುರಾತನ ಹೋಟೆಲಿನ ಅವಶೇಷಗಳುImage Credit source: AFP
Follow us
ಅಕ್ಷತಾ ವರ್ಕಾಡಿ
|

Updated on:Feb 19, 2023 | 10:59 AM

ದಕ್ಷಿಣ ಇರಾಕ್‌ನ ಪುರಾತತ್ವಶಾಸ್ತ್ರಜ್ಞರ ತಂಡವು ಸುಮಾರು 5000 ವರ್ಷಗಳಷ್ಟು ಹಿಂದಿನ ಪುರಾತನ ಹೋಟೆಲಿನ ಅವಶೇಷಗಳನ್ನು ಕಂಡುಹಿಡಿದಿದೆ. ಸುಮೇರಿಯನ್ ನಾಗರಿಕತೆಯ ಪ್ರಮುಖ ಕೇಂದ್ರವಾದ ಪ್ರಾಚೀನ ಲಗಾಶ್‌ನ ಅವಶೇಷಗಳ ನಡುವೆ ಈ ಹೋಟೆಲು ಕಂಡುಬಂದಿದೆ. ಒಳಗೆ, ಪುರಾತತ್ತ್ವಜ್ಞರು ಒಲೆ, ಕೆಲವು ಬೆಂಚುಗಳು, “ಝೀರ್” ಎಂದು ಕರೆಯಲ್ಪಡುವ ಪುರಾತನ ಮಣ್ಣಿನ ರೆಫ್ರಿಜರೇಟರ್ ಮತ್ತು ಬಟ್ಟಲುಗಳು ಮತ್ತು ಇತರ ಪಾತ್ರೆಗಳಲ್ಲಿ ಉಳಿದ ಆಹಾರವನ್ನು ಪತ್ತೆಹಚ್ಚಿದ್ದಾರೆ.

ಬಟ್ಟಲುಗಳಲ್ಲಿ ಮೀನು ಮತ್ತು ಮೂಳೆಗಳು ಕಂಡುಬಂದಿವೆ, ಜೊತೆಗೆ ಬಿಯರ್ ಕುಡಿಯುವ ಪುರಾವೆಗಳು ಸುಮೇರಿಯನ್ನರಲ್ಲಿ ವ್ಯಾಪಕವಾಗಿ ಹರಡಿವೆ ಎಂದು ಎಎಫ್​​​ಪಿ ವರದಿ ಮಾಡಿದೆ. ಈ ಆವಿಷ್ಕಾರಗಳನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಮತ್ತು ಪಿಸಾ ವಿಶ್ವವಿದ್ಯಾಲಯದ ತಂಡಗಳ ಜಂಟಿಯಾಗಿ ನಡೆಸಿವೆ. ಈ ಸಂಶೋಧನೆಗಾಗಿ ಡ್ರೋನ್ ಫೋಟೋಗ್ರಫಿ, ಥರ್ಮಲ್ ಇಮೇಜಿಂಗ್, ಮ್ಯಾಗ್ನೆಟೋಮೆಟ್ರಿ ಮತ್ತು ಮೈಕ್ರೋ-ಸ್ಟ್ರಾಟಿಗ್ರಾಫಿಕ್ ಸ್ಯಾಂಪ್ಲಿಂಗ್‌ನಂತಹ ತಂತ್ರಜ್ಞಾನಗಳನ್ನು ಬಳಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಪತ್ತೆಯಾದ ವಸ್ತುಗಳು 4,700 ವರ್ಷಗಳ ಹಿಂದೆ ನಗರ ಕೇಂದ್ರಗಳಲ್ಲಿ ವಾಸಿಸುತ್ತಿದ್ದ ಸಾಮಾನ್ಯ ಜನರ ಜೀವನ ಹೇಗಿತ್ತು ಎಂಬುದನ್ನು ತಿಳಿಸುತ್ತದೆ. ಇರಾಕ್​​​​ನಂತಹ ಕೆಲವು ದೇಶಗಳಲ್ಲಿ ನೀರಿಗಿಂತ ಹೆಚ್ಚು ಬಿಯರ್​ಗಳನ್ನು ಜನರು ಕುಡಿಯುವುದರಿಂದ ಬಿಯರ್ ರೆಸಿಪಿ ಕಂಡುಬಂದಿದೆ 5ಸಾವಿರ ವರ್ಷಗಳ ಹಿಂದಿನ ಬಿಯರ್​​ ರೆಸಿಪಿಗಳು ಕೂಡ ಇಲ್ಲಿ ಕಂಡು ಬಂದಿದೆ ಎಂದು ಸಂಶೋಧನೆ ತಿಳಿಸಿದೆ.

ಇದನ್ನೂ ಓದಿ: ಏಷ್ಯಾದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯುತ್ ಬೀದಿ ದೀಪಗಳು ಜಗಮಗಿಸಿದ್ದು ನಮ್ಮ ಬೆಂಗಳೂರಿನ್ಲಲೇ !, ಯಾವಾಗ? ಹೇಗೆ? ಇಲ್ಲಿದೆ ಹಿಸ್ಟರಿ

ಲಗಾಶ್, ಜವುಗು ದ್ವೀಪಗಳಿಂದ ಮಾಡಲ್ಪಟ್ಟ ಪುರಾತನ ನಗರ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಸೆಳೆದಿದೆ ಮತ್ತು ವಿವಿಧ ಸಂಶೋಧಕರ ತಂಡಗಳಿಂದ ವ್ಯಾಪಕವಾದ ಸಂಶೋಧನೆಗೆ ಒಳಪಟ್ಟಿದೆ ಎಂದು ತಿಳಿದು ಬಂದಿದೆ. ಲಗಾಶ್ ದಕ್ಷಿಣ ಇರಾಕ್‌ನ ಅತಿದೊಡ್ಡ ತಾಣಗಳಲ್ಲಿ ಒಂದಾಗಿದ್ದು, ಈ ಪ್ರದೇಶ ಪ್ರಮುಖ ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಪಿಟ್‌ಮನ್ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 10:59 am, Sun, 19 February 23

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ