Watch: ಅಮೆರಿಕದಲ್ಲಿ ರಾಹುಲ್ ಗಾಂಧಿ ಟ್ರಕ್ ಪ್ರಯಾಣ; ಅಲ್ಲಿನ ಟ್ರಕ್ ಚಾಲಕನೊಂದಿಗೆ ಮಾತುಕತೆ

|

Updated on: Jun 13, 2023 | 7:19 PM

ಚಾಲಕ ತಲ್ಜಿಂದರ್ ಸಿಂಗ್ ಅವರೊಂದಿಗಿನ ಸಂಭಾಷಣೆಯ ಸಮಯದಲ್ಲಿ ರಾಹುಲ್ ಗಾಂಧಿ, ಭಾರತದಲ್ಲಿ ಹೆಚ್ಚುತ್ತಿರುವ ಸರಕುಗಳ ಬೆಲೆಗಳು, ಹಣದುಬ್ಬರ ಮತ್ತು ರಾಜಕೀಯದ ಬಗ್ಗೆ ಚರ್ಚಿಸಿದರು.

Watch: ಅಮೆರಿಕದಲ್ಲಿ ರಾಹುಲ್ ಗಾಂಧಿ ಟ್ರಕ್ ಪ್ರಯಾಣ; ಅಲ್ಲಿನ ಟ್ರಕ್ ಚಾಲಕನೊಂದಿಗೆ ಮಾತುಕತೆ
ರಾಹುಲ್ ಗಾಂಧಿ ಅಮೆರಿಕದಲ್ಲಿ ಟ್ರಕ್ ಸವಾರಿ
Follow us on

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress) ಅವರು ಮಂಗಳವಾರ ವಾಷಿಂಗ್ಟನ್ ಡಿಸಿಯಿಂದ (Washington DC) ನ್ಯೂಯಾರ್ಕ್‌ಗೆ ಟ್ರಕ್ ಪ್ರಯಾಣ (Truck Ride) ಮಾಡಿದ್ದು, ಅಮೆರಿಕದಲ್ಲಿರುವ ಭಾರತೀಯ ಟ್ರಕ್ ಡ್ರೈವರ್‌ಗಳ ದೈನಂದಿನ ಜೀವನದ ಕುರಿತು ಚಾಲಕನೊಂದಿಗೆ ಮಾತುಕತೆ ನಡೆಸಿದ್ದಾರೆ. ನೀವು ಎಷ್ಟು ಸಂಪಾದಿಸುತ್ತೀರಿ? ಎಂದು ರಾಹುಲ್ ಗಾಂಧಿ ಚಾಲಕನಲ್ಲಿ ಕೇಳಿದಾಗ, ತಾನು ಭಾರತದಲ್ಲಿ ಗಳಿಸುತ್ತಿರುವುದಕ್ಕಿಂತ ಹೆಚ್ಚು ಸಂಪಾದಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ನಾವು ಟ್ರಕ್ಕರ್‌ಗಳಿಂದಾಗಿಯೇ ತಯಾರಕರ ಕೆಲಸ ಸರಾಗವಾಗಿ ನಡೆಯುತ್ತದೆ ಎಂದು ಚಾಲಕ ಹೇಳಿದ್ದಾರೆ.

ಚಾಲಕನ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಯುಎಸ್‌ನಲ್ಲಿ ಟ್ರಕ್‌ಗಳನ್ನು ತಯಾರಿಸಲಾಗಿದೆ, ಆದರೆ ಭಾರತದಲ್ಲಿ ಇದು ಹಾಗಲ್ಲ ಎಂದಿದ್ದಾರೆ ರಾಹುಲ್.

ಚಾಲಕ ತಲ್ಜಿಂದರ್ ಸಿಂಗ್ ಅವರೊಂದಿಗಿನ ಸಂಭಾಷಣೆಯ ಸಮಯದಲ್ಲಿ ರಾಹುಲ್ ಗಾಂಧಿ, ಭಾರತದಲ್ಲಿ ಹೆಚ್ಚುತ್ತಿರುವ ಸರಕುಗಳ ಬೆಲೆಗಳು, ಹಣದುಬ್ಬರ ಮತ್ತು ರಾಜಕೀಯದ ಬಗ್ಗೆ ಚರ್ಚಿಸಿದರು. ಈ ಜೋಡಿಯು ಸಿಧು ಮೂಸ್ ವಾಲಾ ಅವರ ‘295’ ಹಾಡಿಗೆ ತಲೆದೂಗಿದ್ದಾರೆ
ಟ್ರಕ್ ಚಾಲಕರ ಸಮಸ್ಯೆಗಳನ್ನು ಆಲಿಸಲು ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್ ಸವಾರಿ ಮಾಡಿದ ಕೆಲವು ದಿನಗಳ ನಂತರ ರಾಹುಲ್ ಅಮೆರಿಕದಲ್ಲಿ ಟ್ರಕ್ ಸವಾರಿ ಮಾಡಿದ್ದಾರೆ.


ತಮ್ಮ ‘ಭಾರತ್ ಜೋಡೋ ಯಾತ್ರೆ’ ಭಾಗವಾಗಿ ರಾಹುಲ್ ಗಾಂಧಿ ಅವರು ಮೇ ತಿಂಗಳಲ್ಲಿ ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್ ಸವಾರಿ ಮಾಡಿದ್ದಾರೆ. ಆ ಸಮಯದಲ್ಲಿ ಗಾಂಧಿ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದ ಚಿತ್ರಗಳು ಮತ್ತು ವಿಡಿಯೊಗಳನ್ನು ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಜಯಲಲಿತಾ ಬಗ್ಗೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಹೇಳಿಕೆಗೆ ಎಐಎಡಿಎಂಕೆ ತರಾಟೆ

ಮಾಧ್ಯಮ ವರದಿಗಳ ಪ್ರಕಾರ, ಸುಮಾರು 90 ಲಕ್ಷ ಚಾಲಕರು ಭಾರತೀಯ ರಸ್ತೆಗಳಲ್ಲಿ ಸಂಚರಿಸುತ್ತಾರೆ. ಅವರಿಗೆ ಅವರದೇ ಆದ ಸಮಸ್ಯೆಗಳಿವೆ. ರಾಹುಲ್ ಜಿ ಅವರ ಮನ್ ಕಿ ಬಾತ್ ಅನ್ನು ಆಲಿಸಿದರು” ಎಂದು ಕಾಂಗ್ರೆಸ್ ಪ್ರಯಾಣದ ಸಮಯದಲ್ಲಿ ತೆಗೆದ ವಿಡಿಯೊವನ್ನು ಪೋಸ್ಟ್ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 6:58 pm, Tue, 13 June 23