Japan Shooting: ಜಪಾನ್‌ನಲ್ಲಿ ಗುಂಡಿನ ದಾಳಿ, ರಕ್ಷಣಾ ಪಡೆಯ ಹಲವರಿಗೆ ಗಾಯ
ಜಪಾನ್(Japan) ನಲ್ಲಿ ಗುಂಡಿನ ದಾಳಿ ನಡೆದಿದ್ದು, ರಕ್ಷಣಾ ಪಡೆಯ ಹಲವು ಮಂದಿಗೆ ಗಂಭೀರ ಗಾಯಗಳಾಗಿವೆ. ಗಿಫೂ ಪ್ರದೇಶದ ರಕ್ಷಣಾ ಪಡೆ ತರಬೇತಿ ಕೇಂದ್ರದಲ್ಲಿ ಘಟನೆ ನಡೆದಿದೆ, ಅಪ್ರಾಪ್ತನನ್ನು ವಶಕ್ಕೆ ಪಡೆದಿದೆ
ಜಪಾನ್(Japan) ನಲ್ಲಿ ಗುಂಡಿನ ದಾಳಿ ನಡೆದಿದ್ದು, ರಕ್ಷಣಾ ಪಡೆಯ ಹಲವು ಮಂದಿಗೆ ಗಂಭೀರ ಗಾಯಗಳಾಗಿವೆ. ಗಿಫೂ ಪ್ರದೇಶದ ರಕ್ಷಣಾ ಪಡೆ ತರಬೇತಿ ಕೇಂದ್ರದಲ್ಲಿ ಘಟನೆ ನಡೆದಿದೆ, ಅಪ್ರಾಪ್ತನನ್ನು ವಶಕ್ಕೆ ಪಡೆದಿದೆ. ದಾಳಿ ವೇಳೆ ರಕ್ಷಣಾ ತರಬೇತಿ ಕೇಂದ್ರದಲ್ಲಿದ್ದ ಹಲವರು ಗಾಯಗೊಂಡಿದ್ದಾರೆ. ಜಪಾನಿನ ಆತ್ಮರಕ್ಷಣಾ ಪಡೆಗಳ ಮೂವರು ಸೇನಾ ಸಿಬ್ಬಂದಿಗೆ ಬುಲೆಟ್ ತಗುಲಿ ಗಂಭೀರ ಗಾಯಗಳಾಗಿವೆ, ಓರ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಜಪಾನ್‌ನಲ್ಲಿ ಗುಂಡಿನ ದಾಳಿಗಳು ತೀರಾ ವಿರಳ, ಅಲ್ಲಿ ಬಂದೂಕು ಮಾಲೀಕತ್ವವನ್ನು ಬಿಗಿಯಾಗಿ ನಿಯಂತ್ರಿಸಲಾಗುತ್ತದೆ ಮತ್ತು ಗನ್ ಹೊಂದಲು ಬಯಸುವ ಯಾರಾದರೂ ಕಠಿಣ ಪರಿಶೀಲನಾ ಪ್ರಕ್ರಿಯೆಯ ಮೂಲಕ ಹೋಗಬೇಕು. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ