ಜಯಲಲಿತಾ ಬಗ್ಗೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಹೇಳಿಕೆಗೆ ಎಐಎಡಿಎಂಕೆ ತರಾಟೆ

ಅಣ್ಣಾಮಲೈ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಲು ಅರ್ಹರಲ್ಲ, ಅವರ ಮಾತಿಗೆ ಕಡಿವಾಣ ಹಾಕಬೇಕು. ಮೈತ್ರಿ ಮುಂದುವರೆಯುವುದು ಅಥವಾ ಪ್ರಧಾನಿ ಮೋದಿ ಮತ್ತೆ ಗೆಲ್ಲುವುದು ಅವರಿಗೆ ಇಷ್ಟವಿಲ್ಲವೋ ಎಂಬ ಅನುಮಾನವನ್ನು ಇದು ಉಂಟು ಮಾಡುತ್ತದೆ ಎಂದು ಡಿ ಜಯಕುಮಾರ್ ಹೇಳಿದ್ದರು.

ಜಯಲಲಿತಾ ಬಗ್ಗೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಹೇಳಿಕೆಗೆ ಎಐಎಡಿಎಂಕೆ ತರಾಟೆ
ಕೆ.ಅಣ್ಣಾಮಲೈ
Follow us
ರಶ್ಮಿ ಕಲ್ಲಕಟ್ಟ
|

Updated on:Jun 13, 2023 | 6:25 PM

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು (Tamil nadu) ವಿರೋಧ ಪಕ್ಷದ ಎಐಎಡಿಎಂಕೆ (AIADMK) ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ (Jayalalithaa) ಅವರನ್ನು ದೋಷಿ ಎಂದು ಹೇಳಿದ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಹೇಳಿಕೆ ಅನುಭವ ಇಲ್ಲದ, ಬೇಜವಾಬ್ದಾರಿ ಮತ್ತು ಪ್ರೇರಿತ ಎಂದು ಕರೆಯುವ ನಿರ್ಣಯವನ್ನು ಎಐಎಡಿಎಂಕೆ ಅಂಗೀಕರಿಸಿದೆ. ಅಣ್ಣಾಲಾಮಲೈ ಮಾತನ್ನು ನಿಯಂತ್ರಿಸದಿದ್ದರೆ ಮಿತ್ರ ಪಕ್ಷವಾದ ಬಿಜೆಪಿ ಜೊತೆಗಿನ ಸಂಬಂಧವನ್ನು ಮುಂದುವರಿಸಬೇಕೇ ಬೇಡವೇ ಎಂಬುದನ್ನು ಚಿಂತಿಸುವುದಾಗಿ ಎಐಎಡಿಎಂಕೆ ನಿನ್ನೆ ಬೆದರಿಕೆ ಹಾಕಿತ್ತು. ಜಯಲಲಿತಾ ಅವರ ಕುರಿತಾದ ಅಣ್ಣಾಮಲೈ ಅವರ ಸಂದರ್ಶನವು ಎಐಎಡಿಎಂಕೆ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. 1998 ರಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲು ಜಯಲಲಿತಾ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಮಿತ್ರಪಕ್ಷ ಬಿಜೆಪಿ ಜೊತೆಗಿನ ಘರ್ಷಣೆಯ ನಡುವೆಯೇ ಎಐಎಡಿಎಂಕೆ ಜಿಲ್ಲಾ ಕಾರ್ಯದರ್ಶಿಗಳ ಸಭೆ ಇಂದು ಬೆಳಗ್ಗೆ ಆರಂಭವಾಗಿದೆ. ಹೊಸ ಸದಸ್ಯತ್ವ ದಾಖಲಾತಿ ಕುರಿತು ಚರ್ಚಿಸಲು ಸಭೆ ಕರೆಯಲಾಗಿದ್ದರೂ, ಕೆ.ಅಣ್ಣಾಮಲೈ ಅವರ ಟೀಕೆಯನ್ನೂ ಅದು ತರಾಟೆಗೆ ತೆಗೆದುಕೊಂಡಿತು.

ಮೈತ್ರಿಯನ್ನು ಪರಿಶೀಲಿಸುವುದಾಗಿ ಬೆದರಿಕೆ ಹಾಕಿದ್ದ ಎಐಎಡಿಎಂಕೆಯ ಹಿರಿಯ ನಾಯಕ ಡಿ ಜಯಕುಮಾರ್‌ಗೆ ನಿನ್ನೆ ಬಿಜೆಪಿ ಕೂಡ ತಿರುಗೇಟು ನೀಡಿದ್ದು, ಮೈತ್ರಿಯಲ್ಲಿ ದೊಡ್ಡವರು ಎಂಬುದು ಇಲ್ಲ ಎಂದು ಹೇಳಿದೆ.

ಅಣ್ಣಾಮಲೈ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿರಲು ಅರ್ಹರಲ್ಲ, ಅವರ ಮಾತಿಗೆ ಕಡಿವಾಣ ಹಾಕಬೇಕು. ಮೈತ್ರಿ ಮುಂದುವರೆಯುವುದು ಅಥವಾ ಪ್ರಧಾನಿ ಮೋದಿ ಮತ್ತೆ ಗೆಲ್ಲುವುದು ಅವರಿಗೆ ಇಷ್ಟವಿಲ್ಲವೋ ಎಂಬ ಅನುಮಾನವನ್ನು ಇದು ಉಂಟು ಮಾಡುತ್ತದೆ ಎಂದು ಡಿ ಜಯಕುಮಾರ್ ಹೇಳಿದ್ದರು.

ಜಯಲಲಿತಾ ಅವರ ಸಹಾಯಕಿ ವಿ.ಕೆ. ಶಶಿಕಲಾ ಮತ್ತು ಇತರ ಕೆಲವರು ಅಂತಿಮವಾಗಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಪ್ರಧಾನ ಆರೋಪಿಯಾಗಿದ್ದು ಸುಪ್ರೀಂಕೋರ್ಟ್‌ನಿಂದ ಶಿಕ್ಷೆಗೊಳಗಾದರೂ, ಅಂತಿಮ ತೀರ್ಪಿನ ಮೊದಲು ಜಯಲಲಿತಾ ನಿಧನರಾದರು. ಆದ್ದರಿಂದ ಉನ್ನತ ನ್ಯಾಯಾಲಯದ ತೀರ್ಪು ಕರ್ನಾಟಕ ಹೈಕೋರ್ಟಿನ ಅನುಕೂಲಕರ ತೀರ್ಪನ್ನು ಅನೂರ್ಜಿತಗೊಳಿಸಿದೆ. ಅಂದರೆ ತಾಂತ್ರಿಕವಾಗಿ ಆಕೆಯನ್ನು ಅಪರಾಧಿ ಎಂದು ಪರಿಗಣಿಸಲಿಲ್ಲ.

ಈ ಬೆಳವಣಿಗೆಗೆ ಇಂದು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಾರಾಯಣನ್ ತಿರುಪತಿ, ಅಣ್ಣಾಮಲೈ ಅವರಿಗೆ ಹೇಳುವ ಹಕ್ಕು ಇದೆ ಎಂದಿದ್ದಾರೆ. ಮೈತ್ರಿಯ ಭವಿಷ್ಯದ ಕುರಿತು ಮಾತನಾಡಿದ ಅವರು ಸಮಯ ಹೇಳುತ್ತದೆ, ನಮಗೆ ಚುನಾವಣೆಗೆ ಸುಮಾರು ಒಂದು ವರ್ಷವಿದೆ ಎಂದಿದ್ದಾರೆ.

ಇದನ್ನೂ ಓದಿ: ನಮಗೆ ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡಬೇಡಿ: ಎಂಕೆ ಸ್ಟಾಲಿನ್​​​ಗೆ ಬಿಜೆಪಿ ನಾಯಕ ಅಣ್ಣಾಮಲೈ ತಿರುಗೇಟು

ಮಾರ್ಚ್‌ನಲ್ಲಿ ಅಣ್ಣಾಮಲೈ 2024 ರ ಚುನಾವಣೆಗೆ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವುದರ ವಿರುದ್ಧ ಮಾತನಾಡಿದ್ದರು.  ಜಯಲಲಿತಾ ಅವರ ಮರಣದ ನಂತರ ಬಿಜೆಪಿಯೊಂದಿಗೆ ಬಹುನಿರೀಕ್ಷಿತ ಮೈತ್ರಿಯನ್ನು ರಚಿಸಿದ್ದು ಎಐಎಡಿಎಂಕೆಯ ಹಿರಿಯ ನಾಯಕರನ್ನು ಕೆರಳಿಸಿತು. ದ್ರಾವಿಡ ರಾಜಕೀಯದಲ್ಲಿ ಉತ್ತರದ ಪಕ್ಷವನ್ನು ಹೊಂದಿಕೆಯಾಗದ ಪಕ್ಷವೆಂದು ಪರಿಗಣಿಸಿ, ಸ್ನೇಹ ಸಂಬಂಧಗಳ ಹೊರತಾಗಿಯೂ ಜಯಲಲಿತಾ ದೀರ್ಘಕಾಲದವರೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರಲಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Tue, 13 June 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್