ಮಿಂಕ್​ಗಳ ಮೇಲೂ ಕೊರೊನಾ ಅಟ್ಟಹಾಸ | Covid-19 pandemic killing minks in US

|

Updated on: Nov 11, 2020 | 7:40 PM

ಕೊರೊನಾ ಸೋಂಕಿನ ಉಪಟಳ, ಭೀತಿ ಸಧ್ಯಕ್ಕೇನೂ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ವಿಶ್ವದಾದ್ಯಂತ ಸೋಂಕಿನ ಪ್ರಕರಣಗಳು ಕ್ರಮೇಣ ಕಡಿಮೆಯಾದಾಗ ಜನ ಸದ್ಯ ಬಚಾವಾದೆವು ಅಂತ ನಿಟ್ಟುಸಿರಾಗಿದ್ದರು. ಆದರೆ ಕೊವಿಡ್-19 ವ್ಯಾಧಿಯ ಎರಡನೇ ಅಲೆ ವಕ್ಕರಿಸಲಾರಂಭಿಸಿದ್ದು ಜನರನ್ನು ಮತ್ತೊಮ್ಮೆ ತಲ್ಲಣಿಸುವಂತೆ ಮಾಡಿದೆ. ನಿಮಗೆ ಕೇಳಿ ಆಶ್ಚರ್ಯವಾಗಬಹದು. ಈಗಷ್ಟೇ ಹೊಸ ಅಧ್ಯಕ್ಷನನ್ನು ಆಯ್ಕೆಮಾಡಿಕೊಂಡಿರುವ ಅಮೆರಿಕಾದಲ್ಲಿ ಇವತ್ತು ಒಂದೇ ದಿನ 2,00,000 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮಹಾಮಾರಿಗೆ ಲಕ್ಷಾಂತರ ಜನ ಬಲಿಯಾಗಿದ್ದಾರೆ ಮತ್ತು ಮತ್ತು ಸಾಯುವವರ ಸಂಖ್ಯೆ ಇನ್ನೂ ನಿಂತಿಲ್ಲ. […]

ಮಿಂಕ್​ಗಳ ಮೇಲೂ ಕೊರೊನಾ ಅಟ್ಟಹಾಸ | Covid-19 pandemic killing minks in US
Follow us on

ಕೊರೊನಾ ಸೋಂಕಿನ ಉಪಟಳ, ಭೀತಿ ಸಧ್ಯಕ್ಕೇನೂ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ವಿಶ್ವದಾದ್ಯಂತ ಸೋಂಕಿನ ಪ್ರಕರಣಗಳು ಕ್ರಮೇಣ ಕಡಿಮೆಯಾದಾಗ ಜನ ಸದ್ಯ ಬಚಾವಾದೆವು ಅಂತ ನಿಟ್ಟುಸಿರಾಗಿದ್ದರು. ಆದರೆ ಕೊವಿಡ್-19 ವ್ಯಾಧಿಯ ಎರಡನೇ ಅಲೆ ವಕ್ಕರಿಸಲಾರಂಭಿಸಿದ್ದು ಜನರನ್ನು ಮತ್ತೊಮ್ಮೆ ತಲ್ಲಣಿಸುವಂತೆ ಮಾಡಿದೆ. ನಿಮಗೆ ಕೇಳಿ ಆಶ್ಚರ್ಯವಾಗಬಹದು. ಈಗಷ್ಟೇ ಹೊಸ ಅಧ್ಯಕ್ಷನನ್ನು ಆಯ್ಕೆಮಾಡಿಕೊಂಡಿರುವ ಅಮೆರಿಕಾದಲ್ಲಿ ಇವತ್ತು ಒಂದೇ ದಿನ 2,00,000 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮಹಾಮಾರಿಗೆ ಲಕ್ಷಾಂತರ ಜನ ಬಲಿಯಾಗಿದ್ದಾರೆ ಮತ್ತು ಮತ್ತು ಸಾಯುವವರ ಸಂಖ್ಯೆ ಇನ್ನೂ ನಿಂತಿಲ್ಲ.

ಅಂದಹಾಗೆ, ಕೊರೊನಾ ಸೋಂಕು ಕೇವಲ ಮನುಕುಲವನ್ನಷ್ಟೇ ಬಾಧಿಸುತ್ತಿಲ್ಲ. ಪ್ರಾಣಿಗಳಿಗೂ ಸೋಂಕು ತಗುಲಿ ಅವು ಆಹುತಿಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಅಮೆರಿಕದಲ್ಲಿ, ಈ ಸೋಂಕು ಪ್ರಾಣಿಗಳ ಮೇಲೆ ರುದ್ರನರ್ತನ ನಡೆಸುತ್ತಿರುವುದು ಅಲ್ಲಿನ ಜನರನ್ನು ಆತಂಕಕ್ಕೀಡು ಮಾಡಿದೆ. ಮಿಂಕ್ ಹೆಸರಿನ ಪ್ರಾಣಿಗಳು ನಿಮಗೆ ಗೊತ್ತಲ್ಲ? ಮೈಮೇಲೆ ಉಣ್ಣೆ ಹೊದ್ದು ನೋಡಲು ಮುಂಗುಸಿಯಂತೆ ಕಾಣುವ ಮಿಂಕ್​ಗಳಿಗೆ ಕನ್ನಡದಲ್ಲಿ ನಿರ್ದಿಷ್ಟವಾದ ಪದವಿಲ್ಲ. ಲಭ್ಯವಾಗಿರುವ ಮಾಹಿತಿಯೊಂದರ ಪ್ರಕಾರ ಅಮೆರಿಕದಲ್ಲಿ ಸುಮಾರು 15,000 ಹೆಚ್ಚು ಮಿಂಕ್​ಗಳು ಕೊರೊನಾ ಸೋಂಕಿನಿಂದ ಸಾವನ್ನಪ್ಪಿವೆ. ಯುಟಾ, ವಿಸ್ಕಾನ್ಸಿನ್ ಮತ್ತು ಮಿಚಿಗನ್ ರಾಜ್ಯಗಳಲ್ಲಿ ಮಿಂಕ್​ಗಳು ಸಾಯುತ್ತಿರುವುದು ವರದಿಯಾಗಿದೆ.

ಯುಎಸ್ ಕೃಷಿ ಇಲಾಖೆ ಇದಕ್ಕೆ ಸಂಬಂಧಿಸಿದ ಜೈವಿಕ ಸುರಕ್ಷಾ ಕ್ರಮಗಳನ್ನು ಜಾರಿಗೊಳಿಸುವುದರ ಜೊತೆಗೆ ಕೊರೊನಾ ಪೀಡಿತ ಮಿಂಕ್ ಫಾರ್ಮ್​ಗಳನ್ನು ರಕ್ಷಿಸುವಂತಹ ಯೋಜನೆಗಳನ್ನು ರೂಪಿಸುವ ಪ್ರಯೋಗದಲ್ಲಿ ಯಶ ಕಾಣುವ ನಿರೀಕ್ಷೆಯಲ್ಲಿದೆ. ಮಿಂಕ್​ಗಳಲ್ಲಿ ಸೋಂಕನ್ನು ಆಗಸ್ಟ್ ತಿಂಗಳಲ್ಲಿ ದೃಢೀಕರಿಸಿದ ಮೊದಲ ರಾಜ್ಯ ಯುಟಾನಲ್ಲಿನ ಒಂಬತ್ತು ಸಾಕಾಣಿಕೆ ಕೇಂದ್ರಗಳಲ್ಲಿದ್ದ ಮಿಂಕ್​ಗಳೂ ಸೇರಿದಂತೆ ಒಟ್ಟು 10,700 ಮಿಂಕ್​ಗಳು ಸಾವನ್ನಪ್ಪಿವೆ. ಈ ಪ್ರಾಣಿಗಳಿಗೆ ಮಾನವರಿಂದ ಕೊರೊನಾ ಸೋಂಕು ತಗುಲುತ್ತಿದೆಯೇ ಎನ್ನುವ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ.

Published On - 7:39 pm, Wed, 11 November 20