ಚೀನಾ ಅಧ್ಯಕ್ಷರ ‘ಭಾರತ ವಿರೋಧಿ ನೀತಿ’ ಟೀಕಿಸಿದ್ದಕ್ಕೆ ಪಕ್ಷದಿಂದಲೇ ಉಚ್ಚಾಟನೆ

|

Updated on: Aug 19, 2020 | 8:21 PM

ಬೀಜಿಂಗ್‌: ಭಾರತ ಮತ್ತು ಚೀನಾ ನಡುವಿನ ಸಂಬಂಧ ಹಳಸುತ್ತಿರುವಂತೆ ಚೀನಾದಲ್ಲಿ ಅಧ್ಯಕ್ಷ ಶಿ ಜಿನ್‌ಪಿಂಗ್‌ ವಿರುದ್ಧ ಅಪಸ್ಪರ ಕೇಳಿ ಬರುತ್ತಿದೆ. ಇದನ್ನು ಹತ್ತಿಕ್ಕಲು ಅಧ್ಯಕ್ಷ ಜಿನ್‌ಪಿಂಗ್‌ ತಮ್ಮ ನಡೆಯನ್ನು ಟೀಕಿಸಿದವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಿದ್ದಾರೆ. ಹೌದು ಕೆಲ ದಿನಗಳ ಹಿಂದೆ ಚೀನಾದ ಕಮ್ಯೂನಿಷ್ಟ್‌ ಪಕ್ಷದ ಸದಸ್ಯೆ ಹಾಗೂ ಅಧ್ಯಕ್ಷ ಶಿ ಜಿನ್‌ಪಿಂಗ್‌ ಅವರ ಕಡು ವಿರೋಧಿಯಾಗಿರುವ ಪ್ರೊಫೆಸರ್‌ ಕಾಯ್‌ ಶಿಯಾ, ಬ್ರಿಟನ್‌ನ ದಿ ಗಾರ್ಡಿಯನ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಚೀನಾ ಅಧ್ಯಕ್ಷರ ಭಾರತ ವಿರೋಧಿ ನೀತಿಯನ್ನು ಕಡುವಾಗಿ […]

ಚೀನಾ ಅಧ್ಯಕ್ಷರ ಭಾರತ ವಿರೋಧಿ ನೀತಿ ಟೀಕಿಸಿದ್ದಕ್ಕೆ ಪಕ್ಷದಿಂದಲೇ ಉಚ್ಚಾಟನೆ
Follow us on

ಬೀಜಿಂಗ್‌: ಭಾರತ ಮತ್ತು ಚೀನಾ ನಡುವಿನ ಸಂಬಂಧ ಹಳಸುತ್ತಿರುವಂತೆ ಚೀನಾದಲ್ಲಿ ಅಧ್ಯಕ್ಷ ಶಿ ಜಿನ್‌ಪಿಂಗ್‌ ವಿರುದ್ಧ ಅಪಸ್ಪರ ಕೇಳಿ ಬರುತ್ತಿದೆ. ಇದನ್ನು ಹತ್ತಿಕ್ಕಲು ಅಧ್ಯಕ್ಷ ಜಿನ್‌ಪಿಂಗ್‌ ತಮ್ಮ ನಡೆಯನ್ನು ಟೀಕಿಸಿದವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಿದ್ದಾರೆ.

ಹೌದು ಕೆಲ ದಿನಗಳ ಹಿಂದೆ ಚೀನಾದ ಕಮ್ಯೂನಿಷ್ಟ್‌ ಪಕ್ಷದ ಸದಸ್ಯೆ ಹಾಗೂ ಅಧ್ಯಕ್ಷ ಶಿ ಜಿನ್‌ಪಿಂಗ್‌ ಅವರ ಕಡು ವಿರೋಧಿಯಾಗಿರುವ ಪ್ರೊಫೆಸರ್‌ ಕಾಯ್‌ ಶಿಯಾ, ಬ್ರಿಟನ್‌ನ ದಿ ಗಾರ್ಡಿಯನ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಚೀನಾ ಅಧ್ಯಕ್ಷರ ಭಾರತ ವಿರೋಧಿ ನೀತಿಯನ್ನು ಕಡುವಾಗಿ ಟೀಕಿಸಿದ್ದರು. ಭಾರತ ಸೇರಿದಂತೆ ನೆರೆ ರಾಷ್ಟ್ರಗಳನ್ನು ಕೆಣಕುವ ಮೂಲಕ ಚೀನಾದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದಿದ್ದರು.

ಇದರಿಂದ ಕೆರಳಿರುವ ಅಧ್ಯಕ್ಷ ಶಿ ಜಿನ್‌ಪಿಂಗ್‌ ಕಾಯ್‌ ಶಿಯಾ ಅವರನ್ನು ಕಮ್ಯುನಿಸ್ಟ್‌ ಪಕ್ಷದಿಂದಲೇ ಉಚ್ಚಾಟಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಕ್ಷ, ಕಾಯ್‌ ಶಿಯಾ ದೇಶ ವಿರೋಧಿ ಮತ್ತು ಪಕ್ಷ ವಿರೋಧಿ ಹೇಳಿಕೆ ನೀಡಿದ್ದಕ್ಕೆ ಶಿಸ್ತು ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.