ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ 200 ವೆಂಟಿಲೇಟರ್ ಪೂರೈಸಿದ USA
ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವಾಗಲು ಎರಡನೇ ಹಂತದಲ್ಲಿ ಅಮೆರಿಕ 100 ವೆಂಟಿಲೇಟರ್‌ಗಳನ್ನು ಒದಗಿಸಿದೆ. US ಸರ್ಕಾರ, ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID) ಮೂಲಕ, ಭಾರತ ಸರ್ಕಾರ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಎರಡನೇ ಹಂತದಲ್ಲಿ 100 ಹೊಸ ವೆಂಟಿಲೇಟರ್‌ಗಳನ್ನು ನೀಡಿದೆ. ಈ ಮೂಲಕ COVID-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡಲು ಮುಂದಾಗಿದೆ. ಜೂನ್ ತಿಂಗಳಿನಲ್ಲಿ ಮೊದಲ ಹಂತವಾಗಿ 100 ವೆಂಟಿಲೇಟರ್‌ಗಳನ್ನು ಪೂರೈಸಲಾಗಿತ್ತು. ಈಗ ಪುನಃ 100 ವೆಂಟಿಲೇಟರ್‌ಗಳನ್ನು ನೀಡಿದ್ದಾರೆ. […]
ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವಾಗಲು ಎರಡನೇ ಹಂತದಲ್ಲಿ ಅಮೆರಿಕ 100 ವೆಂಟಿಲೇಟರ್‌ಗಳನ್ನು ಒದಗಿಸಿದೆ.
US ಸರ್ಕಾರ, ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID) ಮೂಲಕ, ಭಾರತ ಸರ್ಕಾರ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಎರಡನೇ ಹಂತದಲ್ಲಿ 100 ಹೊಸ ವೆಂಟಿಲೇಟರ್‌ಗಳನ್ನು ನೀಡಿದೆ. ಈ ಮೂಲಕ COVID-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡಲು ಮುಂದಾಗಿದೆ. ಜೂನ್ ತಿಂಗಳಿನಲ್ಲಿ ಮೊದಲ ಹಂತವಾಗಿ 100 ವೆಂಟಿಲೇಟರ್‌ಗಳನ್ನು ಪೂರೈಸಲಾಗಿತ್ತು. ಈಗ ಪುನಃ 100 ವೆಂಟಿಲೇಟರ್‌ಗಳನ್ನು ನೀಡಿದ್ದಾರೆ.
ಭಾರತಕ್ಕೆ ವೆಂಟಿಲೇಟರ್‌ಗಳ ವಿತರಣೆಯನ್ನು ಪ್ರಕಟಿಸಿದ ಯುಎಸ್ ರಾಯಭಾರಿ ಕೆನ್ನೆತ್ ಐ ಜಸ್ಟರ್, “ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತವನ್ನು ಬೆಂಬಲಿಸಲು ಹಾಗೂ ಅಧ್ಯಕ್ಷ ಟ್ರಂಪ್ ಅವರ ಬದ್ಧತೆಯನ್ನು ಈಡೇರಿಸಲು, 100 ವೆಂಟಿಲೇಟರ್‌ಗಳನ್ನು ಭಾರತಕ್ಕೆ ಹಸ್ತಾಂತರಿಸಲು ನಮಗೆ ತುಂಬಾ ಸಂತೋಷವಾಗಿದೆ. ” ಎಂದಿದ್ದಾರೆ.
ವೆಂಟಿಲೇಟರ್‌ಗಳನ್ನು ಅಮೆರಿಕದಲ್ಲಿ ತಯಾರಿಸಲಾಗುತ್ತದೆ. ವೈರಸ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಭಾರತಕ್ಕೆ ಅನುಕೂಲಕರವಾಗಿರುತ್ತವೆ. ವೆಂಟಿಲೇಟರ್‌ಗಳ ಜೊತೆಗೆ, ಯುಎಸ್‌ಐಐಡಿ ಈ ಯಂತ್ರಗಳನ್ನು ನಿರ್ವಹಿಸಲು ಅಗತ್ಯವಾದ ಹೆಚ್ಚುವರಿ ವಸ್ತುಗಳನ್ನು ಒಳಗೊಂಡಿರುವ ಪ್ಯಾಕೇಜ್ ಒದಗಿಸಲಾಗುತ್ತಿದೆ. ಉದಾಹರಣೆಗೆ ಟ್ಯೂಬ್‌ಗಳು, ಫಿಲ್ಟರ್‌ಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ವೆಂಟಿಲೇಟರ್‌ಗಳ ಜೊತೆ ನೀಡಲಾಗುತ್ತೆ.
ಭಾರತ ಸರ್ಕಾರದ ಜೊತೆ ಸೇರಿ ಯಂತ್ರಗಳನ್ನು ನಿರ್ವಹಿಸುವ, ಜವಾಬ್ದಾರಿಯುತ ಆರೋಗ್ಯ ಸೇವೆ ಒದಗಿಸುವವರಿಗೆ ಸೆಟಪ್, ಓರಿಯಂಟೇಶನ್ಸ್ ಮತ್ತು ಕ್ಲಿನಿಕಲ್ ತರಬೇತಿಯನ್ನು ಸುಗಮಗೊಳಿಸುವ ಮೂಲಕ ಈ ವೆಂಟಿಲೇಟರ್‌ಗಳನ್ನು ಬಳಸುವ ಆರೋಗ್ಯ ಸೌಲಭ್ಯಗಳ ಸಾಮರ್ಥ್ಯವನ್ನು ಹೆಚ್ಚಿಸಲು ಯುಎಸ್‌ಐಐಡಿ ಭಾರತ ಸರ್ಕಾರದೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಮೊದಲ ಹಂತದಲ್ಲಿ ಜೂನ್ 14 ರಂದು ಭಾರತಕ್ಕೆ 100 ವೆಂಟಿಲೇಟರ್‌ಗಳನ್ನು ಪೂರೈಸಲಾಗಿತ್ತು. ಈಗ ಮತ್ತೆ 200 ವೆಂಟಿಲೇಟರ್‌ಗಳನ್ನು ನೀಡುವ ಮೂಲಕ ಒಟ್ಟು 200 ವೆಂಟಿಲೇಟರ್‌ಗಳನ್ನು ದೇಣಿಗೆ ನೀಡಿ ಆರೋಗ್ಯ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕ ಸಹಯೋಗದ ಇತಿಹಾಸ ಸೃಷ್ಟಿಯಾಗಿದೆ.
https://www.youtube.com/watch?v=WcjiwI8QErk&feature=youtu.be
Published On - 10:14 am, Thu, 20 August 20