DART Mission: ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ಅಪ್ಪಳಿಸಲು ನಾಸಾದಿಂದ ಡಾರ್ಟ್ ಮಿಷನ್​ಗೆ ಚಾಲನೆ

| Updated By: ಸುಷ್ಮಾ ಚಕ್ರೆ

Updated on: Nov 24, 2021 | 2:13 PM

Asteroid Redirection Test: ಅಪಾಯಕಾರಿ ಕ್ಷುದ್ರಗ್ರಹದಿಂದ ಭೂಮಿಯ ಮೇಲೆ ಉಂಟಾಗುವ ಪ್ರಭಾವವನ್ನು ತಡೆಗಟ್ಟುವ ತಂತ್ರಜ್ಞಾನಗಳನ್ನು ಪರೀಕ್ಷಿಸುವ ಮೊಟ್ಟ ಮೊದಲ ಕಾರ್ಯಾಚರಣೆ ಎಂಬ ಹೆಗ್ಗಳಿಕೆಗೆ ಡಾರ್ಟ್ ಮಿಷನ್ ಪಾತ್ರವಾಗಿದೆ.

DART Mission: ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ಅಪ್ಪಳಿಸಲು ನಾಸಾದಿಂದ ಡಾರ್ಟ್ ಮಿಷನ್​ಗೆ ಚಾಲನೆ
ನಾಸಾ
Follow us on

ನವದೆಹಲಿ: ಕ್ಷುದ್ರಗ್ರಹಗಳು ತಮ್ಮ ಪಥವನ್ನು ಬದಲಾಯಿಸಿ ಭೂಮಿಗೆ ಅಪ್ಪಳಿಸಿದರೆ ಅದರಿಂದ ಉಂಟಾಗುವ ಅನಾಹುತಗಳನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಹೀಗಾಗಿ ವಿಜ್ಞಾನಿಗಳು ಭೂಮಿಯ ಬಳಿ ಬರುವ ಕ್ಷುದ್ರಗ್ರಹಗಳ ಬಗ್ಗೆ ಹೆಚ್ಚಿನ ಗಮನ ಇರಿಸಿದ್ದಾರೆ. ಹೀಗಾಗಿ, ಇದೇ ಮೊದಲ ಬಾರಿಗೆ ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಅಪ್ಪಳಿಸುವಂತೆ ಮಾಡಲು ನಾಸಾದಿಂದ ಡಾರ್ಟ್ ಮಿಷನ್​ಗೆ ಚಾಲನೆ ನೀಡಲಾಗಿದೆ. ನಾಸಾದಿಂದ ಇಂದು ಬೆಳಗ್ಗೆ 11.50ಕ್ಕೆ ‘DART ಮಿಷನ್’ ಅನ್ನು ಆರಂಭಿಸಲಾಗಿದೆ. ಇದು ಕ್ಷುದ್ರಗ್ರಹಕ್ಕೆ ಅಪ್ಪಳಿಸಲು ಸುಮಾರು ಒಂದು ವರ್ಷದ ಪ್ರಯಾಣ ನಡೆಸಲಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ವಾಂಡೆನ್‌ಬರ್ಗ್ ಸ್ಪೇಸ್ ಫೋರ್ಸ್ ಬೇಸ್‌ನಿಂದ ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್‌ನಲ್ಲಿ ಡಾರ್ಟ್ ಮಿಷನ್ ಅನ್ನು ಪ್ರಾರಂಭಿಸಲಾಯಿತು.

ಅಪಾಯಕಾರಿ ಕ್ಷುದ್ರಗ್ರಹದಿಂದ ಭೂಮಿಯ ಮೇಲೆ ಉಂಟಾಗುವ ಪ್ರಭಾವವನ್ನು ತಡೆಗಟ್ಟುವ ತಂತ್ರಜ್ಞಾನಗಳನ್ನು ಪರೀಕ್ಷಿಸುವ ಮೊಟ್ಟ ಮೊದಲ ಕಾರ್ಯಾಚರಣೆ ಎಂಬ ಹೆಗ್ಗಳಿಕೆಗೆ ಡಾರ್ಟ್ ಮಿಷನ್ ಪಾತ್ರವಾಗಿದೆ. DART ಬಾಹ್ಯಾಕಾಶ ನೌಕೆಯನ್ನು ವಿಶೇಷವಾಗಿ ಕ್ಷುದ್ರಗ್ರಹಕ್ಕೆ ಸ್ಲ್ಯಾಮ್ ಮಾಡಲು ವಿನ್ಯಾಸಗೊಳಿಸಲಾಗಿದೆ. ನಮ್ಮ ಗ್ರಹವನ್ನು ಅಪಾಯಕಾರಿ ಪ್ರಭಾವದಿಂದ ರಕ್ಷಿಸುವ ಮಾರ್ಗಗಳನ್ನು ಪ್ರದರ್ಶಿಸುವಲ್ಲಿ ಡಾರ್ಟ್ ಮಿಷನ್ ನಿರ್ಣಾಯಕ ಹೆಜ್ಜೆಯಾಗಿದೆ.

ಈ ಬಾಹ್ಯಾಕಾಶ ನೌಕೆಯು ಒಂದು ಸಣ್ಣ ಕಾರಿನ ಗಾತ್ರವನ್ನು ಹೊಂದಿದೆ. ಇದು ಸೆಕೆಂಡಿಗೆ ಸುಮಾರು 4 ಮೈಲುಗಳ ವೇಗದಲ್ಲಿ ಚಲಿಸುತ್ತದೆ.

ಡಿಡಿಮೋಸ್ ಸುತ್ತಲಿನ ಡಿಮೊರ್ಫಾಸ್​ನ ಕಕ್ಷೆಯಲ್ಲಿನ ಬದಲಾವಣೆಯನ್ನು ಅಳೆಯುವಾಗ ಭೂಮಿಯ ಮೇಲಿನ ದೂರದರ್ಶಕಗಳು ಕ್ಷುದ್ರಗ್ರಹ ವ್ಯವಸ್ಥೆಯನ್ನು ವೀಕ್ಷಿಸುತ್ತವೆ ಎಂದು ನಾಸಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಡಿಡಿಮೋಸ್ ಎಂದು ಕರೆಯಲ್ಪಡುವ ಜೋಡಿ ಕ್ಷುದ್ರಗ್ರಹಕ್ಕೆ ಡಾರ್ಟ್ ಎಂಬ ಬಾಹ್ಯಾಕಾಶ ನೌಕೆಯನ್ನು ನಾಸಾ ಡಿಕ್ಕಿ ಹೊಡೆಸಲಿದೆ. ಈ ನೌಕೆ ಡಿಡಿಮೋಸ್ ಕ್ಷುದ್ರಗ್ರಹವನ್ನು ನಾಶ ಮಾಡುವುದಿಲ್ಲ. ಅದರ ಬದಲು ಕ್ಷುದ್ರಗ್ರಹದ ಪಥವನ್ನು ಬದಲಾಯಿಸಲಿದೆ. ಇದು ಖಗೋಳ ವಿಜ್ಞಾನದಲ್ಲಿ ಅಪರೂಪದ ಸಾಧನೆಯಾಗಿದೆ.

ಇದನ್ನೂ ಓದಿ: ಬಾಹ್ಯಾಕಾಶದಲ್ಲಿ 200 ದಿನ ಕಳೆದ ನಂತರ ಭೂಮಿಗೆ ಬಂದಿಳಿದ ನಾಸಾದ ನಾಲ್ಕು ಗಗನಯಾತ್ರಿಗಳು

ಮಂಗಳ ಗ್ರಹದಲ್ಲಿದ್ದ ಪುರಾತನ ನದಿ ಡೆಲ್ಟಾ ಅಸ್ತಿತ್ವವನ್ನು ತೋರಿಸಿದ ನಾಸಾದ ರೋವರ್ ಚಿತ್ರ