ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಭಾಷಣದ ವೇಳೆ ಟ್ರಂಪ್ ಮೇಲೆ ನಡೆದ ಮಾರಣಾಂತಿಕ ದಾಳಿ ಮಾಸುವ ಮುನ್ನ ಮತ್ತೊಂದು ಘಟನೆ ನಡೆದಿದೆ. ಅವರ ಭದ್ರತೆ ವಿರುದ್ಧ ಕಳವಳ ವ್ಯಕ್ತವಾಗಿರುವ ಬೆನ್ನಲ್ಲೇ ರಿಪಬ್ಲಿಕನ್ ಪಕ್ಷದ ಸಮಾವೇಶದ ಸ್ಥಳದಲ್ಲಿ ಎಕೆ-47 ಹಿಡಿದು ನಿಂತಿದ್ದ ಮುಸುಕುಧಾರಿಯನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶ ಮಿಲ್ವಾಕಿಯಲ್ಲಿ ಆಯೋಜಿಸಲಾಗಿತ್ತು, ಈ ಸಮಾವೇಶದಲ್ಲಿ ಟ್ರಂಪ್ ರಿಪಬ್ಲಿಕನ್ ಪಕ್ಷದಿಂದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾದರು. ಪೊಲೀಸರು ಇದೀಗ 21 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಆತ ಕೈಯಲ್ಲಿ ಎಕೆ47 ರೈಫಲ್ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಎನ್ನಲಾಗಿದೆ.
ಯುವಕನ ಉಡುಗೆ ನೋಡಿದ ಪೊಲೀಸರಿಗೆ ಅನುಮಾನ ಬಂದಿತ್ತು, ಆತ ಮಾಸ್ಕ್ ಧರಿಸಿದ್ದ, ಅವನೊಂದಿಗೆ ಒಂದು ಬ್ಯಾಗ್ ಕೂಡ ಇತ್ತು, ಬ್ಯಾಗ್ ಪರಿಶೀಲಿಸಿದಾಗ ಎಕೆ47 ರೈಫಲ್ ಹಾಗೂ ಗುಂಡುಗಳು ಪತ್ತೆಯಾಗಿವೆ.
ಹಾಗೆಯೇ ಸಮಾವೇಶದಲ್ಲಿ ಚಾಕು ಹಿಡಿದು ಓಡಾಡುತ್ತಿದ್ದ ಶಂಕಿತನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.
ಮತ್ತಷ್ಟು ಓದಿ: Donald Trump: ಗುಂಡಿನ ದಾಳಿಯ ನಂತರ ಕಿವಿಗೆ ಬ್ಯಾಂಡೇಜ್ ಹಾಕಿಕೊಂಡೇ ವೇದಿಕೆಯೇರಿದ ಟ್ರಂಪ್
ಅಲ್ಲಿ ಇನ್ನೊಬ್ಬ ವ್ಯಕ್ತಿಯ ಮೇಲೆ ದಾಳಿ ಮಾಡಲು ಉದ್ದೇಶದಿಂದ ಮುಂದಕ್ಕೆ ಹೋಗಿದ್ದ ವ್ಯಕ್ತಿಯ ಮೇಲೆ ಪೊಲೀಸರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ರಂಪ್ ಭಾಷಣ ಮಾಡುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ.
ಟ್ರಂಪ್ ಕಿವಿಗೆ ಸಣ್ಣ ಗಾಯವಾಗಿದ್ದು ಬಿಟ್ಟರೆ ಹೆಚ್ಚಿನ ಸಮಸ್ಯೆಯಾಗಿಲ್ಲ, ದಾಳಿಕೋರ ಓರ್ವ ವ್ಯಕ್ತಿಯನ್ನು ಕೊಂದಿದ್ದ, ಬಳಿಕ ಸ್ನೈಪರ್ಗಳು ದಾಳಿಕೋರನನ್ನು ಹತ್ಯೆ ಮಾಡಿದ್ದಾರೆ. ಟ್ರಂಪ್ ಟೆಲಿಪ್ರಾಂಪ್ಟರ್ ಬಳಸುತ್ತಾರೆ ಅದಕ್ಕೆ ಗುಂಡು ತಾಕಿದ ಪರಿಣಾಮ ಅದು ತುಂಡಾಗಿ ಗಾಜಿನ ತುಂಡುಗಳು ಟ್ರಂಪ್ ಕಿವಿ ಹೊಕ್ಕಿದ್ದವು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ