ಡೆಲ್ಟಾ ಏರ್ ಲೈನ್ಸ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಏರ್‌ಲೈನ್ ವಿರುದ್ಧ 2 ಮಿಲಿಯನ್ ಡಾಲರ್ ಮೊಕದ್ದಮೆ ಹೂಡಲಾಗಿದೆ. ಮೊಕದ್ದಮೆಯಲ್ಲಿ ವಿಮಾನಯಾನ ಸಂಸ್ಥೆಯ ನಿರ್ಲಕ್ಷ್ಯದ ಕುರಿತು ಆರೋಪಿಸಲಾಗಿದೆ ಆರೋಪಿಸಲಾಗಿದೆ ಮತ್ತು ಸಂತ್ರಸ್ತರಿಗೆ ಪರಿಹಾರವನ್ನು ಕೋರಿದೆ.
ನ್ಯೂಯಾರ್ಕ್ ನಗರದ ಜೆಎಫ್‌ಕೆ ವಿಮಾನ ನಿಲ್ದಾಣದಿಂದ ಗ್ರೀಸ್‌ನ ಅಥೆನ್ಸ್‌ಗೆ 9-ಗಂಟೆಗಳ ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರು ಎಷ್ಟೇ ಕೇಳಿಕೊಂಡರೂ ವಿಮಾನ ಸಿಬ್ಬಂದಿ ಅದನ್ನು ನಿರ್ಲಕ್ಷಿಸಿದ್ದಾರೆ. ಇಷ್ಟೆಲ್ಲಾ ಹೇಳುತ್ತಿದ್ದರೂ ಆತನಿಗೆ ಮದ್ಯವನ್ನು ನೀಡುತ್ತಲೇ ಇದ್ದರು.
9 ಗಂಟೆಗಳ ಕಾಲ ಆತ ಅನುಚಿತವಾಗಿ ವರ್ತಿಸುತ್ತಿದ್ದ, ಈ ಪಾನಮತ್ತ ಪ್ರಯಾಣಿಕನನ್ನು ತಾಯಿ ಹಾಗೂ ಮಗಳ ಮಧ್ಯೆ ಕೂರಿಸಲಾಗಿತ್ತು. ಆತ ಬಾಲಕಿಯ ಹೆಗಲ ಮೇಲೆ ಕೈ ಹಾಕಿ ಸವರುತ್ತಾ, ಆಕೆಯ ವಿಳಾಸ ಕೇಳುತ್ತಿದ್ದ, ಆಗ ತಾಯಿ ಕೋಪಗೊಂಡು ಜೋರಾಗಿ ಕಿರುಚಿಕೊಂಡಿದ್ದಾಳೆ, ಆಗ ಉಳಿದ ಪ್ರಯಾಣಿಕರೆಲ್ಲಾ ಇವರೆಡೆಗೆ ತಿರುಗಿ ನೋಡಿದ್ದಾರೆ. ವಿಮಾನ ಅಟೆಂಡೆಂಟ್ ಬಳಿ ವಿಚಾರ ಹೇಳಿಕೊಂಡರೆ, ನೀವು ಧೈರ್ಯವಾಗಿರಿ ಅವರು ನಿಮಗೇನು ತೊಂದರೆ ಮಾಡುವುದಿಲ್ಲ ಎಂದು ಹೇಳಿ ಹೊರಟುಬಿಟ್ಟಿದ್ದಾರೆ.
ಮತ್ತಷ್ಟು ಓದಿ: Andhra Pradesh: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಸ್ವಯಂಘೋಷಿತ ದೇವಮಾನವನ ಬಂಧನ
ಬಳಿಕ ಆತ ಗೊಣಗಿಕೊಂಡು ಮತ್ತೆ ಬಾಲಕಿಯ ಮೈ ಕೈ ಮುಟ್ಟಲು ಪ್ರಾರಂಭಿಸಿದ್ದ. ಈ ಘಟನೆ ಜುಲೈ 26 ರಂದು ಸಂಭವಿಸಿದೆ. ಆತ ಆಕೆಯ ತೊಡೆಯ ಮೇಲೆ ಕೈ ಹಾಕಿದಾಗ ಅವರಿಬ್ಬರೂ ಎದ್ದು ಬೇರೆಡೆ ನಡೆದರು. ನಮ್ಮ ಗ್ರಾಹಕರು ಮತ್ತು ನಮ್ಮ ಜನರ ಸುರಕ್ಷತೆಗಿಂತ ಬೇರೆ ಯಾವುದೂ ಮುಖ್ಯವಲ್ಲ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ