Andhra Pradesh: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಸ್ವಯಂಘೋಷಿತ ದೇವಮಾನವನ ಬಂಧನ

ವಿಶಾಖಪಟ್ಟಣಂನಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಎರಡು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಪೂರ್ಣಾನಂದ ಸ್ವಾಮಿ ಎಂಬ ಸ್ವಯಂ ಘೋಷಿತ ದೇವಮಾನವನನ್ನು ಸೋಮವಾರ ಸಂಜೆ ಬಂಧಿಸಲಾಗಿದೆ.

Andhra Pradesh: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಸ್ವಯಂಘೋಷಿತ ದೇವಮಾನವನ ಬಂಧನ
Follow us
ಅಕ್ಷಯ್​ ಪಲ್ಲಮಜಲು​​
|

Updated on: Jun 20, 2023 | 1:33 PM

ಅಮರಾವತಿ: ಆಂಧ್ರಪ್ರದೇಶ(Andhra Pradesh) ವಿಶಾಖಪಟ್ಟಣಂನಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಎರಡು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಪೂರ್ಣಾನಂದ ಸ್ವಾಮಿ ಎಂಬ ಸ್ವಯಂ ಘೋಷಿತ ದೇವಮಾನವನನ್ನು ಸೋಮವಾರ ಸಂಜೆ ಬಂಧಿಸಲಾಗಿದೆ ಎಂದು Tv9 ತೆಲುಗು ವರದಿ ಮಾಡಿದೆ. ಜ್ಞಾನಾನಂದ ರಮಾನಂದ ಸಾಧುಮಠದ ಆಶ್ರಮದಿಂದ ಅಪ್ರಾಪ್ತ ಬಾಲಕಿ ಓಡಿಹೋಗಿ ವಿಜಯವಾಡದಲ್ಲಿರುವ ತನ್ನ ಸಂಬಂಧಿಕರನ್ನು ಭೇಟಿಯಾಗಿ, ಎಲ್ಲ ವಿಚಾರಗಳನ್ನು ಹೇಳಿದ್ದಾಳೆ ಎಂದು ವರದಿಯಾಗಿದೆ.

ಅಪ್ರಾಪ್ತ ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಬಾಲಕಿಯನ್ನು ಈ ಬಗ್ಗೆ ಮಾತನಾಡಿಸಿದಾಗ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ತನ್ನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಿ ಹಲವು ದಿನಗಳಿಂದ ಆಶ್ರಮದಲ್ಲಿ ಹಸಿವಿನಿಂದ ಇರುವಂತೆ ಮಾಡಲಾಗಿತ್ತು ಎಂದು ಬಾಲಕಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾಳೆ.

ಇದನ್ನೂ ಓದಿ; Andhra Pradesh Accident: ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ 7 ಮಂದಿ ದುರ್ಮರಣ

ಹುಡುಗಿ ಕಾಣೆಯಾದ ನಂತರ ಪೂರ್ಣಾನಂದ ಸ್ವಾಮಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. Tv9 ತೆಲುಗು ಜೊತೆ ಮಾತನಾಡಿದ ಸರ್ಕಲ್ ಇನ್ಸ್‌ಪೆಕ್ಟರ್ ಮಲ್ಲೇಶ್ವರ ರಾವ್, ಹುಡುಗಿ ನಾಪತ್ತೆಯಾಗಿದ್ದಾರೆ ಎಂದು ಪೂರ್ಣಾನಂದ ಸ್ವಾಮಿ ಜೂನ್ 15ರಂದು ದೂರು ನೀಡಿದ್ದರು. ಆ ನಂತರ ಬಾಲಕಿ ವಿಜಯವಾಡದಲ್ಲಿ ಇರುವ ಬಗ್ಗೆ ನಮಗೆ ಮಾಹಿತಿ ಬಂದಿದ್ದು, ಅಲ್ಲಿನ ಪೊಲೀಸರು ಮತ್ತು ಸಿಡಬ್ಲ್ಯುಸಿ ಅಧಿಕಾರಿಗಳಿಗೆ ದೂರು ನೀಡಿದ್ದಾಳೆ. ವಿಜಯವಾಡದ ದಿಶಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಪೂರ್ಣಾನಂದ ಸ್ವಾಮಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಆಶ್ರಮದಲ್ಲಿರುವ ಮಕ್ಕಳನ್ನು ರಕ್ಷಿಸುವುದು ಮುಖ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ